Haveri
ಕೊಬ್ಬರಿ ಹೋರಿ ಹಬ್ಬ- ಹೋರಿ ತಿವಿದು ಯುವಕ ಸಾವು

ಹಾವೇರಿ: ಕೊಬ್ಬರಿ ಹೋರಿ ಓಡಿಸೋ ಹಬ್ಬದಲ್ಲಿ ಹಿಡಿಯಲು ಹೋಗಿದ್ದ ಯುವಕನಿಗೆ ಹೋರಿ ಗುದ್ದಿ ಮೃತಪಟ್ಟ ಘಟನೆ ಹಾವೇರಿ ತಾಲೂಕಿನ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು 24 ವರ್ಷದ ಚಂದ್ರು ಈರಕ್ಕನವರ ಎಂದು ಗುರುತಿಸಲಾಗಿದೆ. ಮೃತ ಚಂದ್ರು, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅಸುಂಡಿ ಗ್ರಾಮದ ನಿವಾಸಿಯವನಾಗಿದ್ದು, ಕೊಬ್ಬರಿ ಹೋರಿ ಹಬ್ಬಕ್ಕಾಗಿಯೇ ಕೆರಿಮತ್ತಿಹಳ್ಳಿಗೆ ಬಂದಿದ್ದ.
ಪೊಲೀಸ್ ಇಲಾಖೆಯ ಅನುಮತಿ ನಿರಾಕರಣೆ ನಡುವೆಯೂ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಇಂದು ಕೊಬ್ಬರಿ ಹೋರಿ ಓಡಿಸೋ ಸ್ಪರ್ಧೆ ಆಯೋಜಿಸಲಾಗಿತ್ತು. ಹಬ್ಬದಲ್ಲಿ ಹೋರಿ ತಿವಿದು ಈ ದುರ್ಘಟನೆ ನಡೆದಿದೆ. ಯುವಕ ಸಾವನ್ನಪ್ಪುತ್ತಿದ್ದಂತೆ ಹೋರಿ ಹಬ್ಬವನ್ನು ಬಂದ್ ಮಾಡಲಾಗಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
