Connect with us

Districts

ರಾಯಚೂರಿನಲ್ಲಿ ಬೃಹತ್ ಔಷಧ ಉತ್ಪಾದನ ಪಾರ್ಕ್: ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್

Published

on

ರಾಯಚೂರು: ಜಿಲ್ಲೆಯಲ್ಲಿ ಬಲ್ಕ್ ಡ್ರಗ್ ಫಾರ್ಮಾ ಪಾರ್ಕ್ ಅರಂಭಿಸಲು ಕೇಂದ್ರ ಸಚಿವ ಸದಾನಂದಗೌಡರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ರಾಯಚೂರಿನ ಯರಮರಸ್‍ನ ಸಕ್ರ್ಯೂಟ್ ಹೌಸ್ ನಲ್ಲಿ ಮಾತನಾಡಿದ ಶೆಟ್ಟರ್ ಮೊದಲಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಆತ್ಮಕ್ಕೆ ಶಾಂತಿ ಕೋರಿದರು. ಬಳಿಕ ಮಾತನಾಡಿ, ಯಡಿಯೂರಪ್ಪ ಅವಧಿಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ಕೈಗಾರಿಕೆಗಳು ಬೆಂಗಳೂರಿಗೆ ಕೇಂದ್ರಕೃತವಾಗಿತ್ತು, ಉತ್ತರ ಕರ್ನಾಟಕದ ಜನಪ್ರತಿನಿಧಿಯಾಗಿ ಈ ಭಾಗಕ್ಕೆ ಕೈಗಾರಿಕೆಗಳಿಗೆ ಅವಕಾಶ ನೀಡಿದ್ದೇನೆ ಅಂತ ತಿಳಿಸಿದರು.

ಯಾದಗಿರಿಯ ಕಡೇಚೂರಿನಲ್ಲಿ 3000 ಎಕರೆ ಕೆಐಡಿಬಿ ಗೆ ಖರೀದಿಸಲಾಗಿದೆ. 15 ಫಾರ್ಮಾಸ್ಯುಟಿಕಲ್ ಕಂಪನಿಗಳು ಕಡೇಚೂರಿನಲ್ಲಿ ಆರಂಭವಾಗಲಿವೆ. ರಾಯಚೂರಿನಲ್ಲಿ ಬಲ್ಕ್ ಡ್ರಗ್ ಫಾರ್ಮಾ ಪಾರ್ಕ್ ಅರಂಭಿಸಲು ಸಚಿವ ಸದಾನಂದಗೌಡರಿಗೆ ಬೇಡಿಕೆ ಸಲ್ಲಿಸಲಾಗಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ನಿಂದ ಸಾಮಾನುಗಳ ತಯಾರಿಕೆಗೆ ಸಿದ್ಧತೆ ನಡೆದಿದೆ. ಅಕ್ಟೋಬರ್ ನಲ್ಲಿ ಭೂಮಿ ಪೂಜೆ ಮಾಡಿ ಆರಂಭಿಸಲಾಗುವುದು ಎಂದರು.

ಭೂ ಸುಧಾರಣಾ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುವುದಿಲ್ಲ. ಪ್ರತಿಪಕ್ಷದವರು ಹೇಳಿದಂತೆ ರೈತರಿಗೆ ತೊಂದರೆಯಾಗುವುದಿಲ್ಲ ಅಂತ ತಿಳಿಸಿದರು. ಲಾಕ್‍ಡೌನ್ ನಿಂದ ಶಾಶ್ವತವಾಗಿ ಯಾವುದೇ ಕೈಗಾರಿಕೆಗಳು ಬಂದ್ ಆಗಿಲ್ಲ. ಲಾಕ್‍ಡೌನ್ ತೊಂದರೆಯಾಗಿದೆ, ಆತ್ಮನಿರ್ಭರ ಯೋಜನೆಯಿಂದ ಈಗ ಪುನಶ್ಚೇತನವಾಗುತ್ತಿದೆ ಎಂದರು. ಇನ್ನೂ ಡ್ರಗ್ ಮಾಫಿಯಾದಲ್ಲಿ ಯಾರೇ ಇರಲಿ ಅವರ ಮೇಲೆ ಗೃಹ ಸಚಿವರು ಕ್ರಮ ಕೈಗೊಳ್ಳುತ್ತಾರೆ ಅಂತ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *