Connect with us

ಕೋಣಗಳು ಕಾದಾಡಿದ್ದಕ್ಕೆ ಬಡಿದಾಡಿಕೊಂಡ ಮಾಲೀಕರು – ಆಸ್ಪತ್ರೆಗೆ ದಾಖಲು

ಕೋಣಗಳು ಕಾದಾಡಿದ್ದಕ್ಕೆ ಬಡಿದಾಡಿಕೊಂಡ ಮಾಲೀಕರು – ಆಸ್ಪತ್ರೆಗೆ ದಾಖಲು

ಮಡಿಕೇರಿ: ಮೇಯಲು ಬಿಟ್ಟ ಕೋಣಗಳು ಗುದ್ದಾಡಿದ ವಿಚಾರವನ್ನು ತೆಗೆದು ಎರಡು ಕುಟುಂಬಗಳು ಬಡಿದಾಡಿಕೊಂಡ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪದ ಗರ್ವಾಲೆ ಪಂಚಾಯ್ತಿ ವ್ಯಾಪ್ತಿಯ ಗುಂಬಾರಗಡಿಯಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಕೃಷಿ ಜಮೀನಿನಲ್ಲಿ ಮೇಯಲು ಬಿಟ್ಟಿದ ಕೋಣಗಳು ಗುದ್ದಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ದಾರಿಯಲ್ಲಿ ಬರುತ್ತಿದ್ದ ಒಂದು ಕೋಣದ ಮಾಲೀಕ 60 ವರ್ಷದ ಬಿದ್ದಪ್ಪ ಅವರನ್ನು ಮತ್ತೊಂದು ಕೋಣದ ಮಾಲೀಕ ಮಣಿ ಮತ್ತು ಗಿರೀಶ್ ಪ್ರಶ್ನಿಸಿದ್ದಾರೆ.

ಮಾತು ಜೋರಾಗಿದ್ದು ಕೊನೆಗೆ ಬಿದ್ದಪ್ಪರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈಗ ಗಲಾಟೆ ಸೋಮವಾರಪೇಟೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಬಿದ್ದಪ್ಪ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಭೀರವಾಗಿ ಗಾಯಗೊಂಡ ಬಿದ್ದಪ್ಪ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement
Advertisement