Connect with us

Latest

ಮದ್ವೆ ವೇಳೆ ವಧುವನ್ನು ನೋಡಿ ಶರ್ಟ್ ಹರಿದುಕೊಂಡು ವಿಚಿತ್ರವಾಗಿ ವರ್ತಿಸಿದ ವರ

Published

on

ಪಾಟ್ನಾ: ವೇದಿಕೆ ಮೇಲಿದ್ದ ವಧುವನ್ನು ನೋಡಿ ವರ ತನ್ನ ಶರ್ಟ್ ಹರಿದುಕೊಂಡು ವಿಚಿತ್ರವಾಗಿ ವರ್ತಿಸಿದ ಘಟನೆ ಬಿಹಾರದ ದಾನಾಪುರದಲ್ಲಿ ನಡೆದಿದೆ.

ವರಮಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ವರನನ್ನು ವೇದಿಕೆ ಮೇಲೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವರ ವಧುವನ್ನು ನೋಡಿದ ತಕ್ಷಣ ತನ್ನ ಶರ್ಟ್ ಹರಿದುಕೊಂಡು ತನ್ನ ಮೂಗನ್ನು ನೆಲಕ್ಕೆ ಉಜ್ಜಿ ವಿಚಿತ್ರವಾಗಿ ವರ್ತಿಸಿದ್ದಾನೆ.

ವಧು ವೇದಿಕೆ ಮೇಲೆ ನಿಂತು ವರನಿಗೆ ಹೂಮಾಲೆ ಹಾಕಲು ನಿಂತಿದ್ದಾಗ ವರ ವಧುವನ್ನೇ ನೋಡುತ್ತಾ ಕಳೆದು ಹೋಗಿದ್ದಾನೆ. ಅಲ್ಲದೆ ವಧುವಿನ ಸೌಂದರ್ಯ ನೋಡಿ ತನ್ನ ಶರ್ಟ್ ಹರಿದುಕೊಂಡು ವೇದಿಕೆ ಮೇಲೆ ವಿಚಿತ್ರವಾಗಿ ವರ್ತಿಸಿದ್ದಾನೆ.

ವರ ವಿಚಿತ್ರವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ವಧು ಈ ಮದುವೆ ಬೇಡ ಎಂದಿದ್ದಾಳೆ. ವಧು ಮದುವೆಗೆ ನಿರಾಕರಿಸುತ್ತಿದ್ದಂತೆ ಮದುವೆ ಮನೆಯಲ್ಲಿ ಗಲಾಟೆ ಶುರುವಾಗಿದೆ. ಬಳಿಕ ಅಲ್ಲಿದ್ದ ಸಂಬಂಧಿಕರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಈ ಬಗ್ಗೆ ವಧುವಿನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವರನ ಕುಟುಂಬದವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ವರ ಹಾಗೂ ಆತನ ತಂದೆಯನ್ನು ಬಂಧಿಸಿದ್ದಾರೆ.