Tuesday, 18th June 2019

ಲೈವ್ ಟೆಲಿಕಾಸ್ಟ್ ಮಾಡ್ತಿರುವಾಗ್ಲೇ ರಿಪೋರ್ಟರ್ ಗೆ ಕಿಸ್!- ವಿಡಿಯೋ ವೈರಲ್

ಮಾಸ್ಕೋ: ಲೈವ್ ಟೆಲಿಕಾಸ್ಟ್ ಮಾಡುವಾಗಲೇ ಮಹಿಳಾ ರಿಪೋರ್ಟರ್ ಗೆ ವ್ಯಕ್ತಿಯೊಬ್ಬ ಕಿಸ್ ಕೊಡಲು ಮುಂದಾಗಿದ್ದ ಘಟನೆ ರಷ್ಯಾದಲ್ಲಿ ನಡೆದಿದೆ.

ಕಿಸ್ ಕೊಡಲು ಮುಂದಾಗಿದ್ದ ವ್ಯಕ್ತಿಯನ್ನು ರಷ್ಯಾ ಫುಟ್‍ ಬಾಲ್ ಅಭಿಮಾನಿ ಎಂದು ಗುರುತಿಸಲಾಗಿದೆ. ಆತ ಕೊಲಂಬಿಯಾದ ಪತ್ರಕರ್ತೆಗೆ ಮುತ್ತು ಕೊಡಲು ಮುಂದಾಗಿದ್ದನು. ಕೆಲವು ದಿನಗಳ ನಂತರ ಆತ ತನ್ನ ವರ್ತನೆಯ ಬಗ್ಗೆ ಅರಿತುಕೊಂಡು ಪತ್ರಕರ್ತೆ ಬಳಿ ಕ್ಷಮೆಯಾಚಿಸಿದ್ದಾನೆ.

ನಡೆದಿದ್ದೇನು?:
ಭಾನುವಾರ ಬ್ರೆಜಿಲಿಯನ್ ಪತ್ರಕರ್ತೆ ಜುಲಿಯಾ ಗಿಮಾರಾಸ್ ಅವರು ಮತ್ತೊಬ್ಬ ಮಹಿಳಾ ವರದಿಗಾರರೊಂದಿಗೆ ರಷ್ಯಾದ ಯೆಕಟೇನ್ಬರ್ಗ್ ಅರೆನಾದ ಹೊರಗೆ ನೇರ ಪ್ರಸಾರ ಮಾಡುತ್ತಿದ್ದರು.

ಈ ವೇಳೆ ಒಬ್ಬ ವ್ಯಕ್ತಿ ಬಂದು ಜುಲಿಯಾ ಅವರಿಗೆ ಕಿಸ್ ಮಾಡಲು ಪ್ರಯತ್ನಿಸಿದ್ದಾನೆ. ಆಗ ಜುಲಿಯಾ ಆತನನ್ನು ತಳ್ಳಿ ಬೈಯುತ್ತಾರೆ. “ಇದನ್ನು ಮಾಡಬೇಡಿ!. ಇದಕ್ಕೆ ನಾನು ಅನುಮತಿಸುವುದಿಲ್ಲ, ಎಂದಿಗೂ ಇಂತಹ ಘಟನೆ ಸರಿ ಇಲ್ಲ. ನನಗೆ ಈ ರೀತಿಯ ವರ್ತನೆ ಇಷ್ಟ ಆಗಲ್ಲ” ಎಂದು ಹೇಳಿದ್ದಾರೆ. ಈ ವೇಳೆ ಆತ ತಕ್ಷಣ ಕ್ಷಮಿಸಿ ಎಂದು ರಿಪೋರ್ಟರ್ ಬಳಿ ಕ್ಷಮೆಯಾಚಿಸಿದ್ದಾನೆ.

ಇದೊಂದು ಅವಮಾನಕರವಾದ ಘಟನೆ. ಅದೃಷ್ಟವಶಾತ್ ಇದು ಬ್ರೆಜಿಲ್ ನಲ್ಲಿ ಎಂದಿಗೂ ನಡೆದಿರಲಿಲ್ಲ. ರಷ್ಯಾದಲ್ಲಿ ಈ ತರಹದ ಘಟನೆ ಎರಡು ಬಾರಿ ಸಂಭವಿಸಿದೆ. ಇದು ಅವಮಾನಕರ ಎಂದು ರಿಪೋರ್ಟರ್ ಜುಲಿಯಾ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೊಲಂಬಿಯಾದ ಪತ್ರಕರ್ತೆ ಜೂಲಿಯೆತ್ ಗೊನ್ಜಾಲೆಜ್ ಥೇರನ್ ಅವರು ನೇರ ಪ್ರಸಾರ ಮಾಡುತ್ತಿದ್ದಾಗ ಫುಟ್ಬಾಲ್ ಅಭಿಮಾನಿಯೋರ್ವ ಕಿಸ್ ಮಾಡಿದ್ದನು. ಅಂದು ಆ ಘಟನೆಯನ್ನು ಅನೇಕ ಜನರು ಲೈಂಗಿಕ ಕಿರುಕುಳ ಎಂದು ಆಪಾದನೆ ಮಾಡಿದ್ದರು.

Leave a Reply

Your email address will not be published. Required fields are marked *