Tuesday, 21st May 2019

Recent News

ಬೃಹತ್ ಡ್ಯಾಮ್ ಒಡೆದು 110 ಮಂದಿ ಬಲಿ- ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

ಬ್ರೆಜಿಲ್: ಮಿನಾಸ್ ಗಿರೈಸ್ ಪ್ರದೇಶದಲ್ಲಿರುವ ಗಣಿಗಾರಿಕೆಯ ಅಣೆಕಟ್ಟು ಒಡೆದ ಪರಿಣಾಮ 110 ಮಂದಿ ಸಾವನ್ನಪ್ಪಿದ ಭಯಾನಕ ವಿಡಿಯೋ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದೆ.

ಕಳೆದ ಜನವರಿ 25ರಂದು ಬ್ರೆಜಿಲ್‍ನ ಮಿನಾಸ್ ಗಿರೈಸ್ ಪ್ರದೇಶದಲ್ಲಿರುವ ಕಬ್ಬಿಣದ ಗಣಿಗಾರಿಕಾ ಪ್ರದೇಶದ ಪಕ್ಕದಲ್ಲಿದ್ದ ಬೃಹತ್ ಅಣೆಕಟ್ಟು ಒಡೆದು ಹೋಗಿತ್ತು. ಈ ವೇಳೆ ಗಣಿಗಾರಿಕೆ ಪ್ರದೇಶಕ್ಕೆ ಏಕಾಏಕಿ ನೀರು ನುಗ್ಗಿದ ಪರಿಣಾಮ ಸ್ಥಳದಲ್ಲಿದ್ದ 110 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, 238 ಮಂದಿ ಕಾಣೆಯಾಗಿದ್ದರು. ಈ ಭಯಾನಕ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ, ಡ್ಯಾಮ್ ಒಡೆದು ಗಣಿ ಪ್ರದೇಶಕ್ಕೆ ನೀರು ನುಗ್ಗಿದ ತಕ್ಷಣ ಸ್ಥಳದಲ್ಲಿದವರು ಪ್ರಾಣ ಉಳಿಸಿಕೊಳ್ಳು ಓಡುತ್ತಿರುವ ದೃಶ್ಯ ಹಾಗೂ ಕಾರು ಲಾರಿಗಳು ಸ್ಥಳದಿಂದ ದೂರ ಹೋಗಲು ಪ್ರಯತ್ನಿಸುತ್ತಿರುವ ದೃಶ್ಯಗಳು, ಅಲ್ಲದೆ ಏಕಾಏಕಿ ಡ್ಯಾಮ್ ನೀರು ಗಣಿ ಪ್ರದೇಶಕ್ಕೆ ನುಗ್ಗಿ, ಸಂಪೂರ್ಣ ಜಲಾವೃತವಾಗುತ್ತಿರುವ ದೃಶ್ಯ ಸೆರೆಯಾಗಿದೆ.

ಈ ವಿಡಿಯೋವನ್ನು ಸ್ಥಳೀಯ ಮಾಧ್ಯಮವೊಂದು ಪ್ರಸಾರ ಮಾಡಿದ್ದು, ಸದ್ಯ ಅದರ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಮಧ್ಯಾಹ್ನದ ವೇಳೆ ಕಾರ್ಮಿಕರು ಊಟ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇಲ್ಲಿಯವರೆಗೆ ಒಟ್ಟು 110 ಮಂದಿಯ ಮೃತದೇಹವನ್ನು ಪತ್ತೆ ಮಾಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *