Connect with us

Districts

ಗಣಪತಿ ಗುಡಿ , ಪಂಜುರ್ಲಿ ದೈವಸ್ಥಾನ ನಿರ್ಮಾಣವಾದ್ರೆ ಬ್ರಹ್ಮಾವರ ಶುಗರ್ ಫ್ಯಾಕ್ಟರಿ ಅಭಿವೃದ್ಧಿ

Published

on

– ಆರೂಢ ಪ್ರಶ್ನೆಯಲ್ಲಿ ಕಂಡು ಬಂದ ಸೂಚನೆ

ಉಡುಪಿ: ಫ್ಯಾಕ್ಟರಿ ಒಳಗೊಂದು ಗಣಪತಿ ಗುಡಿಯಾಗಲಿ. ಜೀರ್ಣವಾದ ಪಂಜುರ್ಲಿ ದೈವಕ್ಕೆ ಸಾನಿಧ್ಯ ನಿರ್ಮಿಸಿ. ನಾಗ ಸನ್ನಿಧಾನಕ್ಕೆ ಸೇವೆ ನಿರಂತರ ಮಾಡಿ. ಏಪ್ರಿಲ್ 14ರ ಒಳಗೆ ಪೂಜೆ ದೇವರ ಸೇವೆ ಎಲ್ಲಾ ನೆರವೇರಬೇಕು. ಇದು ಬ್ರಹ್ಮಾವರ ಶುಗರ್ ಫ್ಯಾಕ್ಟರಿಯಲ್ಲಿ ನಡೆದ ಆರೂಢ ಪ್ರಶ್ನೆಯ ಪ್ರಮುಖಾಂಶಗಳು.

ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಸಂದರ್ಭ ಪ್ರಶ್ನಾ ಚಿಂತನೆಗಳು ನಡೆಯುತ್ತದೆ. ಉಡುಪಿಯಲ್ಲಿ 20 ವರ್ಷದಿಂದ ಉದ್ಧಾರವೇ ಕಾಣದ ಶುಗರ್ ಫ್ಯಾಕ್ಟರಿಯಲ್ಲಿ ಶುಭ ಶುಕ್ರವಾರ ಆರೂಢ ಪ್ರಶ್ನೆಯನ್ನು ಆಯೋಜಿಸಲಾಗಿತ್ತು.

1985 ರಲ್ಲಿ ಆರಂಭವಾದ ಬ್ರಹ್ಮಾವರ ಶುಗರ್ ಫ್ಯಾಕ್ಟರಿ 2003ಕ್ಕೆ ಕೊನೆಯ ಲೋಡು ಕಬ್ಬನ್ನು ಅರೆದು ಬೀಗ ಜಡಿದುಕೊಂಡಿತು. ಫ್ಯಾಕ್ಟರಿ ಮುಚ್ಚಿ ಎರಡು ದಶಕವಾಗುತ್ತಾ ಬಂದರೂ, ಫ್ಯಾಕ್ಟರಿಗೆ ಮರುಜೀವ ಬರುವ ಲಕ್ಷಣ ಕಾಣುತ್ತಿಲ್ಲ. ಜಮೀನಿನಲ್ಲೇ ದೋಷ ಇದೆ ಎಂದು ಕಂಡುಕೊಂಡ ಆಡಳಿತ ಮಂಡಳಿ ಆರೂಢ ಪ್ರಶ್ನೆಯಿಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ.

ಆಡಳಿತ ಮಂಡಳಿ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಮಾತನಾಡಿ, ಆರೂಢ ಪ್ರಶ್ನೆಯಲ್ಲಿ ಶೇ.90 ನಿಜವಾಗಿದೆ. ಸಾನಿಧ್ಯ ಜೀರ್ಣವಾಗಿದ್ದು ಕಂಡುಬಂದಿದೆ. ಪಂಜುರ್ಲಿ ದೇವಸ್ಥಾನ ನಿರ್ಮಾಣ ಮಾಡಲು ಸೂಚಿಸಿದ್ದಾರೆ. ಹೋಮ ಪೂಜೆ ಸೂಚನೆಯಂತೆ ನಡೆಸುತ್ತೇವೆ ಎಂದರು.

ಕೇರಳದ ಜ್ಯೋತಿಷ್ಯ ರತ್ನ ಸ್ವಾಮಿನಾಥನ್ ಪಣಿಕ್ಕರ್ ಮತ್ತು ಉಡುಪಿಯ ಧಾರ್ಮಿಕ ವಿದ್ವಾಂಸ ಸಂತೋಷ್ ಆಚಾರ್ಯ ನೇತೃತ್ವದಲ್ಲಿ ಅರೂಢ ಪ್ರಶ್ನೆ ಚಿಂತನೆ ನಡೆದಿದೆ. ಕಾರ್ಖಾನೆ ನಿರ್ಮಾಣ ಹಂತದಲ್ಲಿ ನಾಗ ಸಾನಿಧ್ಯ, ದೈವ ಸಾನಿಧ್ಯಕ್ಕೆ ಚ್ಯುತಿ ಬಂದಿದ್ದು ಫ್ಯಾಕ್ಟರಿಯ ಸುತ್ತಲ ಜಮೀನು ಪರಿಶೀಲಿಸಲಾಯ್ತು. ದೈವ ಸನ್ನಿಧಾನ, ಪೂಜಾ ವಿಧಾನ ನೆರವೇರಿಸುವ ಸೂಚನೆ ಕೊಡಲಾಯ್ತು. ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದದ್ದನ್ನು ನೆರವೇರಿಸಿದರೆ ವೃದ್ದಿ ಆಗಲಿದೆ ಎಂದು ಪುದುವಾಳರು ಹೇಳಿದರು.

ಮೂವತ್ತು ವರ್ಷದಲ್ಲಿ ಬಂದ ಸರ್ಕಾರಗಳು ಕಾರ್ಖಾನೆ ಉದ್ಧಾರಕ್ಕೆ , ರೈತರ ಅಭಿವೃದ್ಧಿ ಗೆ ಮನಸ್ಸು ಮಾಡಿಲ್ಲ. ಹೊಸ ಮಂಡಳಿ ಆಲೆಮನೆ ಮೂಲಕ ದೇಸಿ ಬೆಲ್ಲ ತಯಾರು ಮಾಡುತ್ತಿದೆ. ಇದೀಗ ಬಹು ನಿರೀಕ್ಷಿತ ಪ್ರಶ್ನಾಚಿಂತನೆ ನಡೆದಿದೆ. ಇನ್ನಾದರೂ ಫ್ಯಾಕ್ಟರಿ ಚುರುಕಾಗಲಿ. ಕೃಷಿ ಚಟುವಟಿಕೆ ನಿರಂತರ ನಡೆಯಲಿ ಎಂಬೂದು ರೈತರ, ಕೃಷಿಕರ ಆಶಯ.

Click to comment

Leave a Reply

Your email address will not be published. Required fields are marked *