Connect with us

ಗೂಳಿಯೊಂದಿಗೆ ಹೋರಾಡಿ ಅಜ್ಜಿಯನ್ನ ರಕ್ಷಿಸಿದ ಮೊಮ್ಮಗ- ವಿಡಿಯೋ

ಗೂಳಿಯೊಂದಿಗೆ ಹೋರಾಡಿ ಅಜ್ಜಿಯನ್ನ ರಕ್ಷಿಸಿದ ಮೊಮ್ಮಗ- ವಿಡಿಯೋ

ಚಂಡೀಗಢ: ಬಾಲಕನೋರ್ವ ತನ್ನ ಅಜ್ಜಿಯನ್ನು ರಕ್ಷಿಸಲು ಗೂಳಿಯೊಂದಿಗೆ ಹೋರಾಟ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹರಿಯಾಣದ ಮಹೇಂದ್ರಘರ್‍ನಲ್ಲಿ ಘಟನೆ ನಡೆದಿದ್ದು, ಅಜ್ಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಇದ್ದಕ್ಕಿದ್ದಂತೆ ಬಂದ ಗೂಳಿಯೊಂದು ದಾಳಿ ಮಾಡುತ್ತದೆ. ಕೊಂಬಿನಿಂದ ತಿವಿದ ರಭಸಕ್ಕೆ ಅಜ್ಜಿ ಕೆಳಗೆ ಬೀಳುತ್ತಾರೆ. ಇದನ್ನು ಕಂಡ ಮೊಮ್ಮಗ ಓಡೋಡಿ ಬಂದು ಅಜ್ಜಿಯನ್ನು ಎಬ್ಬಿಸುತ್ತಾನೆ. ಆಗ ಇಬ್ಬರ ಮೇಲೂ ದಾಳಿ ನಡೆಸುವ ಗೂಳಿ ಕೊಂಬಿನಿಂದ ತಿವಿದು ಇಬ್ಬರನ್ನೂ ನೆಲಕ್ಕುರುಳಿಸುತ್ತದೆ.

ಆರಂಭದಲ್ಲಿ ಒಂದೆರಡು ಬಾರಿ ಬಾಲಕನಿಗೂ ಗುದ್ದಿ ಚರಂಡಿ ಬಳಿ ಬೀಳಿಸುತ್ತದೆ. ಪಟ್ಟು ಬಿಡದ ಬಾಲಕ, ಅಜ್ಜಿಯನ್ನು ಮೇಲೆತ್ತುತ್ತಾನೆ. ಅಷ್ಟರಲ್ಲೇ ಸ್ಥಳೀಯರು ಸಹಾಯಕ್ಕೆ ಧಾವಿಸುತ್ತಾರೆ. ಕೋಲು ಹಿಡಿದು ಗೂಳಿಯನ್ನು ಹೆದರಿಸಿ, ನಂತರ ಇಬ್ಬರನ್ನೂ ರಕ್ಷಿಸಿ ಕರೆದೊಯ್ಯುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ವಿಡಿಯೋ ನೋಡಿದ ಹೆಚ್ಚು ಜನ ಬಾಲಕನ ಸಾಹಸ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅಲ್ಲದೆ ಅಜ್ಜಿಯ ಕುರಿತ ಮೊಮ್ಮಗನ ಪ್ರೀತಿಗೆ ಮಾರು ಹೋಗಿದ್ದಾರೆ. ಟ್ವಿಟ್ಟರ್ ನಲ್ಲಿ ಲಕ್ಷಾಂತರ ಜನ ಈ ವಿಡಿಯೋ ಲೈಕ್ ಮಾಡಿದ್ದಾರೆ. ಅಲ್ಲದೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಾಲಕನ ಚುರುಕುತನ ಹಾಗೂ ಧೈರ್ಯ ಪ್ರಶಂಸನಾರ್ಹ. ಕೆಲವರಷ್ಟೇ ಇಂತಹ ಧೈರ್ಯ ತೋರುತ್ತಾರೆ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ.

Advertisement
Advertisement