Connect with us

Corona

ಹುಟ್ಟುಹಬ್ಬದಂದು ತಾನು ಕೂಡಿಟ್ಟಿದ್ದ ಹಣದ ಡಬ್ಬಿಯನ್ನೇ ದೇಣಿಗೆ ನೀಡಿದ ಬಾಲಕ

Published

on

ಹುಬ್ಬಳ್ಳಿ: ಬಾಲಕನೊಬ್ಬ ತನ್ನ ಹುಟ್ಟುಹಬ್ಬದಂದು ಪೋಷಕರು ನೀಡುತ್ತಿದ್ದ ಹಣವನ್ನು ಕೂಡಿಟ್ಟು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಅರ್ಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.

ಗೋಕುಲ್ ರಸ್ತೆಯ ಲೋಹಿಯಾ ನಗರದ ಅರೀಬ್ ಮುಲ್ಲಾ ಎಂಬ 5 ವರ್ಷದ ಬಾಲಕ ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಈ ಬಾಲಕ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ ಅವರ ಸಹೋದರ ಅಮ್ಜದ್ ಅಹ್ಮದ್ ಮುಲ್ಲಾ ಹಾಗೂ ಶ್ರೀಮತಿ ಫರೀಹಾ ಮುಲ್ಲಾ ಅವರ ದಂಪತಿ ಪುತ್ರನಾಗಿದ್ದಾನೆ.

ಅರೀಬ್ ಮುಲ್ಲಾ ಇಂದು ತನ್ನ 5ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾನೆ. ಬಳಿಕ ತನ್ನ ಭವಿಷ್ಯದ ಉಳಿತಾಯಕ್ಕೆ ದಿನಾಲು ಪೋಷಕರು ಕೊಡುತ್ತಿದ್ದ ಹಣವನ್ನು ಹುಂಡಿಯಲ್ಲಿ ಹಾಕಿ ಕೂಡಿಸುತ್ತಿದ್ದನು. ಆದರೆ ಇಂದು ಆ ಹಣದ ಡಬ್ಬಿಯನ್ನೇ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಅರ್ಪಿಸಿ ಇತರರಿಗೆ ಮಾದರಿಯಾಗಿದೆ.

ಈ ಪುಟಾಣಿ ಬಾಲಕನು ಮಾಡಿದ ಸಮಾಜಮುಖಿ ಕಾರ್ಯಕ್ಕೆ ಅಮನ್ ಫೌಂಡೇಶನ್ (ರಿ) ಎನ್.ಜಿ.ಓ. ಮೆಚ್ಚುಗೆ ವ್ಯಕ್ತಪಡಿಸಿದೆ.