Connect with us

Bollywood

ಹಿರಿಯ ನಟಿ ಶಶಿಕಲಾ ಇನ್ನಿಲ್ಲ

Published

on

ಮುಂಬೈ: ಬಾಲಿವುಡ್ ನ ಹಿರಿಯ ನಟಿ ಶಶಿಕಲಾ ನಿಧನರಾಗಿದ್ದಾರೆ.

88 ವರ್ಷದ ಶಶಿಕಲಾ ಅವರು ಭಾನುವಾರ ತಮ್ಮ ಕೊಲಾಬಾದಲ್ಲಿರುವ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಪ್ಪು ಬಿಳುಪಿ ಹಾಗೂ ಈಸ್ಟ್ ಮನ್ ಕಲರ್ ಚಿತ್ರಗಳಲ್ಲಿ ಹೀಗೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದರು.

ಇತ್ತೀಚಿನ ಹೈಟೆಕ್ ಚಿತ್ರಗಳಲ್ಲಿಯೂ ಶಶಿಕಲಾ ನಡಿಸಿದ್ದು, ಮನೆ ಮಾತಾಗಿದ್ದಾರೆ. ಇವರು ಮಹಾರಾಷ್ಟ್ರದ ಸೋಲಾಪುರಕ್ಕೆ ಸೇರಿದ ಕುಟುಂಬದಲ್ಲಿ 1932ರ ಆಗಸ್ಟ್ ನಲ್ಲಿ ಜನಿಸಿದ್ದಾರೆ. ಇವರು 2007ರಲ್ಲಿ ಪ್ರತಿಷ್ಠಿತ ಪದ್ಮಶ್ರೀ, 2009ರಲ್ಲಿ ವಿ. ಶಾಂತಾರಾಂ ಅವಾಡ್ರ್ಸ್ ನ ಜೀವಮಾನದ ಶಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.

ಬಾಲಿವುಡ್ ನ1 ಓಂಪ್ರಕಾಶ್ ಸೇಗಲ್ ಪತ್ನಿಯಾಗಿರುವ ಶಶಿಕಲಾ ನಟಿಸಿರುವ ತೀನ್ ಬಟ್ಟಿ ಚಾರ್, ಡಾಕು, ಗುಮರಾಹ್ ಮೊದಲಾದ ಬಾಲಿವುಡ್ ಸಿನಿಮಾಗಳು ಮೆಚ್ಚುಗೆ ಪಡೆದಿದ್ದವು. ಇಷ್ಟು ಮಾತ್ರವಲ್ಲದೆ ಇವರು ಧಾರವಾಹಿಗಳಲ್ಲಿಯೂ ನಟಿಸಿದ್ದರು.

Click to comment

Leave a Reply

Your email address will not be published. Required fields are marked *