Thursday, 16th August 2018

Recent News

ಎಬಿಡಿ ನಿವೃತ್ತಿ ಸುದ್ದಿ ಕೇಳಿ ಭಾವುಕರಾದ ಬಾಲಿವುಡ್ ತಾರೆಯರು!

ಮುಂಬೈ: ಆರ್‌ಸಿಬಿ ಸ್ಫೋಟಕ ಆಟಗಾರ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ತಾರೆಯರು ಎಬಿಡಿ ಅವರಿಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿ ಮಂದಿನ ಭವಿಷ್ಯಕ್ಕೆ ಶುಭ ಕೋರಿದ್ದಾರೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಹಾಗೂ ನಟಿ ಅನುಷ್ಕಾ ಶರ್ಮಾ, “ಜೀವನದಲ್ಲಿ ನಾವು ಏನೇ ಮಾಡಿದ್ದರು, ಅದು ಬೇರೆಯವರ ಜೀವನಕ್ಕೆ ಆಧಾರವಾಗಬೇಕು. ಹೇಗೆ ನಾವು ನಮ್ಮನ್ನು ಖುಷಿಯಾಗಿ ಇಡಲು ಪ್ರಯತ್ನಿಸುತ್ತೆವೋ ಹಾಗೆಯೇ ಈ ವಿಷಯಗಳು ನಮ್ಮ ಜೀವನದಲ್ಲಿ ತುಂಬ ಮುಖ್ಯ ಭಾಗವಾಗುತ್ತದೆ. ನಿಮಗೆ ಹಾಗೂ ಡೆನಿಯಲ್ ಮುಂದಿನ ಜೀವನ ಚೆನ್ನಾಗಿರಲಿ ಎಂದು ಆಶಿಸುತ್ತೇನೆ” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

“ನಿಮ್ಮ ಬ್ಯಾಟಿಂಗ್ ಕ್ಲಾಸ್ ಆಗಿರುತ್ತದೆ ಹಾಗೂ ನೀವು ಒಬ್ಬರು ಲೆಜೆಂಡ್. ಐಪಿಎಲ್ ನಲ್ಲಿ ನೀವು ಹಿಡಿದ ಆ ಕ್ಯಾಚ್ ಅದ್ಭುತವಾಗಿತ್ತು. ಆ ಕ್ಯಾಚ್ ನೋಡಿ ನೀವು ಈಗ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದಿರಿ ಎನ್ನಿಸಿತ್ತು. ನಮಗೆ ಮನರಂಜನೆ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು. ನಿಮಗೆ ನಮ್ಮ ಕಡೆಯಿಂದ ಸಾಕಷ್ಟು ಪ್ರೀತಿಯನ್ನು ನೀಡುತ್ತೇವೆ ಹಾಗೂ ಬಹಳ ಗೌರವಿಸುತ್ತೇವೆ” ಎಂದು ಸೋಫಿ ಚೌಧರಿ ಟ್ವಿಟ್ಟರಿನಲ್ಲಿ ಎಬಿಡಿ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಇನ್ನೂ ಅರ್ಜುನ್ ಕಪೂರ್ ಕೂಡ ಎಬಿಡಿ ಅವರಿಗೆ ಫೇರ್ ವೆಲ್ ನೀಡಿದ್ದಾರೆ. “ಎಬಿಡಿ ವಿಲಿಯರ್ಸ್ ನಿಮಗೆ ಶುಭಾಶಯಗಳು. ನಿಮ್ಮ ಕ್ರಿಕೆಟ್‍ನ ಕೆರಿಯರ್ ಸಾಕಷ್ಟು ಅಸಾಮಾನ್ಯ ಹಾಗೂ ಗೌರವಾನ್ವಿತವಾಗಿತ್ತು. ಮುಂದಿನ ಹಲವು ವರ್ಷಗಳು ನಿಮ್ಮ ಆಟದ ಬಗ್ಗೆಯೇ ಚರ್ಚೆ ಆಗುತ್ತದೆ. ನಿಮ್ಮ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗಲಿ” ಎಂದು ನಟ ಅರ್ಜುನ್ ಕಪೂರ್ ಟ್ವೀಟ್ ಮಾಡಿದ್ದಾರೆ.

ಈ ಬಾರಿಯ ಐಪಿಎಲ್‍ನಲ್ಲಿ ಆರ್‌ಸಿಬಿ ತಂಡ ಪ್ಲೇ ಆಫ್‍ಗೆ ಅರ್ಹತೆ ಪಡೆಯಲು ವಿಫಲವಾದ ಬೆನ್ನಲ್ಲೇ ಡಿ ವಿಲಿಯರ್ಸ್ ಹಠಾತ್ ಎಂಬಂತೆ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ಇಲ್ಲಿಯವರೆಗೂ ನನ್ನನ್ನು ಪ್ರೋತ್ಸಾಹಿಸಿದ ಎಲ್ಲ ಅಭಿಮಾನಿಗಳಿಗೆ ಅವರು ಧನ್ಯವಾದವನ್ನು ತಿಳಿಸಿದ್ದರು.

1984ರಲ್ಲಿ ಜನಿಸಿದ ಎಬಿಡಿ 2004 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಆಡಿದ್ದರು. ಇದೂವರೆಗೂ ಒಟ್ಟು 114 ಟೆಸ್ಟ್ ಆಡಿರುವ ಎಬಿಡಿ 191 ಇನ್ನಿಂಗ್ಸ್ ನಿಂದ 8765 ರನ್ ಹೊಡೆದಿದ್ದಾರೆ.

2005ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವಾಡಿದ್ದ ಡಿವಿಲಿಯರ್ಸ್ ಇದೂವರೆಗೆ 228 ಏಕದಿನ ಪಂದ್ಯಗಳ 218 ಇನ್ನಿಂಗ್ಸ್ ನಿಂದ ಒಟ್ಟು 9577 ರನ್ ಸಿಡಿಸಿದ್ದಾರೆ. 78 ಟಿ20 ಪಂದ್ಯವಾಡಿರುವ ಎಬಿಡಿ 75 ಇನ್ನಿಂಗ್ಸ್ ಗಳಿಂದ 1,672 ರನ್ ಗಳಿಸಿದ್ದಾರೆ. ಐಪಿಎಲ್ ಕೊನೆಯ ಪಂದ್ಯವನ್ನು ಮೇ 19 ರಂದು ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಿದ್ದರು.

Leave a Reply

Your email address will not be published. Required fields are marked *