Connect with us

Bengaluru City

ಸ್ಯಾಂಡಲ್‍ವುಡ್‍ಗೆ ಅಮಿತಾಬ್ ಬಚ್ಚನ್ ರೀ-ಎಂಟ್ರಿ

Published

on

ಬೆಂಗಳೂರು: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಗಾಯಕರಾಗಿ ಮತ್ತೆ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ.

ನಟ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿರುವ ಹಾಗೂ ನಟಿ ಪಾರೂಲ್ ಯಾದವ್ ನಟಿಸುತ್ತಿರುವ ‘ಬಟರ್ ಫ್ಲೈ’ ಚಿತ್ರದ ಮೂಲಕ ಬಿಗ್-ಬಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಈ ಚಿತ್ರದ ಒಂದು ಹಾಡಿಗೆ ಧ್ವನಿಯಾಗಿದ್ದಾರೆ.

ಅಮಿತಾಬ್ ಬಚ್ಚನ್ ಈ ಚಿತ್ರದ ಪ್ರಮುಖ ಹಾಡನ್ನು ಹಾಡಿದ್ದಾರೆ. ಈ ಹಾಡು ಒಂದು ಕ್ಲಬ್ ಸಾಂಗ್ ಆಗಿದ್ದು, ಖ್ಯಾತ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಯ ಅವರು ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಸಾಹಿತ್ಯ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿದೆ. ಅಮಿತಾಬ್‍ಗೆ ಗಾಯಕಿ ವಿದ್ಯಾ ವೋಕ್ಸ್ ಜೊತೆಯಾಗಿದ್ದಾರೆ.

ಅಮಿತಾಬ್ ಅವರು ಹಾಡಿದ ಈ ಹಾಡನ್ನು ಪ್ಯಾರೀಸ್‍ನಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲದೆ ಪ್ಯಾರೀಸ್‍ನ ಕ್ಲಬ್‍ವೊಂದನ್ನು ನಾಲ್ಕು ದಿನಗಳ ಕಾಲ ಬುಕ್ ಮಾಡಿ ಅಲ್ಲಿಯೇ ಚಿತ್ರೀಕರಣ ನಡೆಸಿದ್ದಾರೆ. ಗಣೇಶ್ ಆಚಾರ್ಯ ಈ ಹಾಡಿಗೆ ಕೋರಿಯೋಗ್ರಾಫಿ ಮಾಡಿದ್ದಾರೆ.

ಬಿಗ್- ಬಿ ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ್ದ ‘ಅಮೃತಧಾರೆ’ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಈಗ ಬರೋಬ್ಬರಿ 14 ವರ್ಷದ ನಂತರ ಬಿಗ್-ಬಿ ಅಮಿತಾಬ್ ಬಚ್ಚನ್ ಗಾಯಕರಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv