Monday, 10th December 2018

ನಾಲ್ವರು ಬಂದು ರಕ್ತ ಕೊಟ್ಟು ಬಾಲಕನ ಜೀವ ಉಳಿಸಿದ್ರು

ಧಾರವಾಡ: ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಬಾಲಕನೊಬ್ಬನಿಗೆ ನಾಲ್ವರು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ.

ಜಿಲ್ಲೆಯ ನವಲಗುಂದ ಪಟ್ಟಣದ ದೀಲಿಪ್ ಮಂಜುನಾಥ ಚಿಕ್ಕನಾಳ(7) ಬಾಲಕನ ಹೃದಯದ ಕವಾಟ್ ಕ್ರಮೇಣವಾಗಿ ಬಂದ್ ಆಗುತ್ತಿತ್ತು. ಅದಕ್ಕೆ ಧಾರವಾಡದ ನಾರಾಯಣ ಹೃದಯಾಲಯದವರು 2015 ರಲ್ಲಿ ಬಲೂನ್ ಮೂಲಕ ತೆಗೆದು ಉಸಿರಾಡುವಂತೆ ಮಾಡಿದ್ದರು. ಆದರೆ ಈ ಸಮಸ್ಯೆ ಮತ್ತೆ ಆರಂಭವಾದಾಗ ಬಾಲಕನಿಗೆ ಹೃದಯದ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ.

ಬಾಲಕನಿಗೆ ಇರುವುದು ಎ2ಬಿ ನೆಗೆಟಿವ್ ರಕ್ತ. ಇದು ಸಿಗುವುದು ತುಂಬಾ ವಿರಳ. ಆದ್ದರಿಂದ ವೈದ್ಯರು ರೆಡ್ ಡಾಟ್ ವೆಬ್‍ಸೈಟ್ ಇರುವವರಿಗೆ ಸಂಪರ್ಕ ಮಾಡಿ ಈ ರಕ್ತ ಬೇಕಾಗಿದೆ ಎಂದು ವೆಬ್‍ಸೈಟ್‍ನಲ್ಲಿ ಮನವಿ ಮಾಡಿದ್ದರು.

ಕೊಪ್ಪಳ ಜಿಲ್ಲೆಯ ನಾಲ್ವರು ಈ ರಕ್ತವನ್ನ ಬಂದು ಕೊಟ್ಟು ಈ ಬಾಲಕನ ಜೀವ ಉಳಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆಯೇ ಬಾಲಕನ ಶಸ್ತ್ರ ಚಿಕಿತ್ಸೆ ಆಗಿದ್ದು, ಬಾಲಕನ ಆರೋಗ್ಯದಲ್ಲಿ ಸುಧಾರಣೆ ಕೂಡ ಆಗಿದೆ. ಇದೀಗ ಮನೆಗೆ ಹೋಗಲು ತಯಾರಿ ನಡೆಸಿದ್ದಾನೆ. ಬಡ ರೈತರ ಮಗನಾದ ಇವರಿಗೆ ಆ ದೇವರೇ ರಕ್ತ ಕೊಟ್ಟು ಉಳಿಸಿದಂತೆ ಆಗಿದೆ ಎಂದು ಕುಟುಂಬದವರು ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Leave a Reply

Your email address will not be published. Required fields are marked *