Connect with us

ಚಿಕಿತ್ಸೆ ಪಡೆಯುತ್ತಿರುವಾಗಲೇ ಗುಣಲಕ್ಷಣಗಳಿಲ್ಲದೆ ಬ್ಲಾಕ್ ಫಂಗಸ್ ಪತ್ತೆ

ಚಿಕಿತ್ಸೆ ಪಡೆಯುತ್ತಿರುವಾಗಲೇ ಗುಣಲಕ್ಷಣಗಳಿಲ್ಲದೆ ಬ್ಲಾಕ್ ಫಂಗಸ್ ಪತ್ತೆ

ಚಿಕ್ಕಮಗಳೂರು: ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಕೊರೊನಾ ರೋಗಿಗೆ ಬ್ಲಾಕ್ ಫಂಗಸ್‍ಗೆ ಒಳಗಾಗಿರುವ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ ನಡೆದಿದೆ.

ಕಡೂರು ತಾಲೂಕಿನ ಹಳ್ಳಿಯೊಂದರ ತಮ್ಮಯ್ಯ (45) ಅವರಿಗೆ ಕಳೆದ ನಾಲ್ಕೈದು ದಿನಗಳ ಹಿಂದೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಕಡೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಬ್ಲಾಕ್ ಫಂಗಸ್ ಇರುವುದು ಪತ್ತೆಯಾಗಿದೆ.

ಸೋಂಕಿತ ತಮ್ಮಯ್ಯಗೆ ಬ್ಲಾಕ್ ಫಂಗಸ್‍ನ ಯಾವುದೇ ಗುಣಲಕ್ಷಣಗಳಿಲ್ಲ, ಆರೋಗ್ಯವಾಗಿದ್ದಾರೆ.  ಕೊರೊನಾ ಸೋಂಕಿನ ಲಕ್ಷಣಗಳಿದ್ದವು. ಆದರೆ, ಸಿಟಿ ಸ್ಕ್ಯಾನ್‍ನಲ್ಲಿ ಅವರಿಗೆ ಬ್ಲಾಕ್ ಫಂಗಸ್ ಇರೋದು ಖಚಿತವಾಗಿದೆ.

ಚಿಕ್ಕಮಗಳೂರಿನಿಂದ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೊನಾದಿಂದ ಗುಣಮುಖರಾದವರಿಗೆ ಬ್ಲಾಕ್ ಫಂಗಸ್ ಕಾಡಲಿದೆ ಎಂಬ ಸುದ್ದಿಯ ಮಧ್ಯೆ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಬ್ಲಾಕ್ ಫಂಗಸ್ ಪತ್ತೆಯಾಗಿರುವುದು ಆತಂಕ ಹುಟ್ಟಿಸಿದೆ. ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಪತ್ತೆಯಾದ ಮೊದಲ ಕೇಸ್ ಇದಾಗಿದೆ.

Advertisement
Advertisement