ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರಿಗೆ ಈಗ ಕಪ್ಪು ಬಣ್ಣದ ವ್ಯಾಮೋಹ ಹಿಡಿದಿದೆ. ಕಪ್ಪು ಬಣ್ಣದ ಕಾರನ್ನು ಬಳಸುತ್ತಿರುವ ಸಿಎಂ ಈಗ ಕಪ್ಪು ಬಣ್ಣ ಖಾಸಗಿ ವಿಮಾನವನ್ನು ಬಳಸುತ್ತಿದ್ದಾರೆ.
ಹೌದು. ಸಾಧಾರಣವಾಗಿ ಜನ ಪ್ರತಿನಿಧಿಗಳು ಬಿಳಿ ಬಣ್ಣವನ್ನು ಇಷ್ಟ ಪಡುತ್ತಾರೆ. ಆದರೆ ಸಿಎಂ ಕಪ್ಪು ಬಣ್ಣದ ರೇಂಜ್ ರೋವರ್ ಕಾರು, ಖಾಸಗಿ ವಿಮಾನವನ್ನು ಬಳಸುತ್ತಿದ್ದು ದೂರದ ಭೇಟಿ ವೇಳೆ ಈ ವಿಮಾನದ ಮೂಲಕವೇ ಸಂಚರಿಸುತ್ತಿದ್ದಾರೆ.
Advertisement
ಶನಿಗೆ ಇಷ್ಟವಾದ ಬಣ್ಣ ಕಪ್ಪು ಆಗಿದ್ದು, ಈಗ ಎಚ್‍ಡಿಕೆಯ ಮಿಥುನ ರಾಶಿಯ ಏಳನೇ ಮನೆಯಲ್ಲಿ ಶನಿ ಇದ್ದಾನೆ. ಮುಂದಿನ ವರ್ಷ ಶನಿ ಎಂಟನೇ ಮನೆಗೆ ಹೋಗುತ್ತಾನೆ. ಆ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ ಹೆಚ್ಚಿರುತ್ತವೆ. ಹೀಗಾಗಿ ಪ್ರಯಾಣದ ವೇಳೆ ಶನಿಗೆ ಇಷ್ಟವಾದ ಕಪ್ಪು ಬಣ್ಣದ ವಾಹನವನ್ನು ಆರಿಸುವಂತೆ ಸಿಎಂಗೆ ಜ್ಯೋತಿಷಿ ಒಬ್ಬರು ಸಲಹೆ ನೀಡಿದ್ದಾರೆ.
Advertisement
Advertisement
ಕಪ್ಪು ಬಣ್ಣದ ವಾಹನ ಬಳಸಿದರೆ ಬೇರೆಯವರ ದೃಷ್ಟಿ ಬೀಳುವುದಿಲ್ಲ. ಕಪ್ಪು ಬಣ್ಣದಿಂದ ಮನಸ್ಸು ಸ್ಥಿಮಿತದಲ್ಲಿರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ನಂಬಿಕೆಗಳಿಗೆ ಕಟ್ಟು ಬಿದ್ದು ಎಚ್‍ಡಿಕೆ ಕಪ್ಪು ಬಣ್ಣದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಕಪ್ಪು ಬಣ್ಣ ಅಪಾಯಕಾರಿ:
ಕಪ್ಪು ಬಣ್ಣದ ವಿಮಾನಗಳನ್ನ ಬಳಸುವುದು ಅಪಾಯಕಾರಿ. ಕಪ್ಪು ಬಣ್ಣದ ವಿಮಾನಗಳು ಬಿಸಿಯನ್ನ ತಡೆದು ಹಿಡಿಯುವುದರಿಂದ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಕಪ್ಪು ಬಣ್ಣದ ವಿಮಾನಗಳು ಬಳಕೆಗೆ ಸೂಕ್ತವಲ್ಲ. ಕಪ್ಪು ಬಣ್ಣದ ವಿಮಾನಗಳಿಗೆ ಹಕ್ಕಿಗಳು ಡಿಕ್ಕಿ ಹೊಡೆಯೋ ಸಾಧ್ಯತೆನೂ ಹೆಚ್ಚು. ಹೀಗಾಗಿ ಬೇರೆ ಬಣ್ಣವನ್ನ ವಿಮಾನಗಳಿಗೆ ಬಳಸಿದರೂ ಶೇ.40 ರಷ್ಟು ಬಿಳಿ ಬಣ್ಣ ಇರಲೇಬೇಕು ಎಂದು ಅಮೆರಿಕದ ಫೆಡರೇಶನ್ ಆಫ್ ಏವಿಯೇಷನ್ ಎಚ್ಚರಿಕೆಯನ್ನು ನೀಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv