Recent News

ಪ್ರೇಯಸಿ ಜೊತೆ ಓಡಿ ಹೋಗಲು ಸಹಾಯ- ಯುವಕನಿಗೆ ಮಾಜಿ ಮೇಯರ್‌ನಿಂದ ಬಸ್ಕಿ!

ನವದೆಹಲಿ: ಪ್ರೇಯಸಿ ಜೊತೆ ಓಡಿ ಹೋಗಲು ಯುವಕನಿಗೆ ಮತ್ತೊಬ್ಬ ಯುವಕ ಸಹಾಯ ಮಾಡಿದಕ್ಕೆ ಮಾಜಿ ಮೇಯರ್ ಯುವಕನಿಗೆ ಸಾರ್ವಜನಿಕವಾಗಿ ಬಸ್ಕಿ ಹೊಡೆಸಿದ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ಮೊಹಮದ್ ಹನೀಶ್ ಸಹಾಯ ಮಾಡಿದ ಯುವಕ. ಯುವಕನೊಬ್ಬನಿಗೆ ಯುವತಿ ಜೊತೆ ಪರಾರಿ ಆಗಲು ಸಹಾಯ ಮಾಡಿದಕ್ಕೆ ಮಾಜಿ ಮೇಯರ್ ಶಕುಂತಲಾ ಭರ್ತಿ ಹನೀಶ್‍ನನ್ನು ಸಾರ್ವಜನಿಕ ಸ್ಥಳದಲ್ಲಿ ಬಸ್ಕಿ ಹೊಡೆಸಿದ್ದಾರೆ. ಬಸ್ಕಿ ಹೊಡೆಸುವ ಮೊದಲು ಹನೀಶ್ ಕೈಗೆ ಕಟ್ಟಿಕೊಂಡಿದ್ದ ದಾರವನ್ನು ತೆಗೆಸಿದ್ದಾರೆ.

ಈ ಘಟನೆ ಮೇ 12ರಂದು ನಡೆದಿದ್ದು, ಗುರುವಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋ ನೋಡಿದ ಜನರು ಮಾಜಿ ಮೇಯರ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಯುವತಿ ಅನ್ಯ ಧರ್ಮದ ಯುವಕನ ಜೊತೆ ಓಡಿ ಹೋಗಲು ಹನೀಶ್ ಸಹಾಯ ಮಾಡಿದ್ದನು. ಹೀಗಾಗಿ ಆತನಿಗೆ ಬಸ್ಕಿ ಹೊಡೆಸಿದ್ದಾರೆ. ಸದ್ಯ ಯುವತಿಯನ್ನು ಕವರ್ಸಿ ಪೊಲೀಸರು ರಕ್ಷಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಯುವಕರು ಭಾಗಿಯಾಗಿದ್ದರು. ಮೂವರಲ್ಲಿ ಇಬ್ಬರು ಪರಾರಿಯಾಗಿದ್ದು, ಬಿಜೆಪಿ ಕಾರ್ಯಕರ್ತರು ಹನೀಶ್‍ನನ್ನು ಹಿಡಿದಿದ್ದಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

Leave a Reply

Your email address will not be published. Required fields are marked *