Connect with us

Bengaluru City

3ನೇ ಪಟ್ಟಿ ರಿಲೀಸ್ ಬೆನ್ನಲ್ಲೇ ಬಿಜೆಪಿಯಲ್ಲಿ ಬಂಡಾಯದ ಬಿಸಿ- ಕಾಂಗ್ರೆಸ್‍ಗೆ ಬೇಳೂರು, ಕಟಕದೊಂಡ

Published

on

ಬೆಂಗಳೂರು: ಬಿಜೆಪಿಯ ಮೂರನೇ ಪಟ್ಟಿ ರಿಲೀಸ್ ಬೆನ್ನಲ್ಲೇ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಿನ್ನಮತ ಭುಗಿಲೆದ್ದಿದೆ. ಟಿಕೆಟ್ ವಂಚಿತರು ಪಕ್ಷಕ್ಕೆ ರಾಜೀನಾಮೆ ನೀಡಿ ಜಂಪಿಂಗ್ ಜಪಾಂಗ್ ಎನ್ನುತ್ತಿದ್ದಾರೆ.

ಸಾಗರ ಟಿಕೆಟ್ ವಂಚಿತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರೋದು ಬಹುತೇಕ ಖಚಿತವಾಗಿದೆ. ನಾಗಠಾಣಾ ಟಿಕೆಟ್ ವಂಚಿತ ವಿಜಯಪುರ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವಿಠಲ ಕಟಕದೊಂಡ ಬಿಜೆಪಿ ತೊರೆದು ಎಂ ಬಿ ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ನಾಗಠಾಣಾದಲ್ಲಿ ಕಾರಜೋಳ ಪುತ್ರನಿಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿಯ ಮೂರನೇ ಪಟ್ಟಿ ಬಿಡುಗಡೆ: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

ಕಲಬುರ್ಗಿ ಗ್ರಾಮೀಣ ಟಿಕೆಟ್ ಸಿಗದ ಕಾರಣ ಮಾಜಿ ಸಚಿವ ಬೆಳಮಗಿ ಇಂದು ಜೆಡಿಎಸ್ ಸೇರೋ ಸಾಧ್ಯತೆಗಳು ಹೆಚ್ಚಿವೆ. ಬೆಳಮಗಿ ಪುತ್ರಿ ಸುನಿತಾ, ಬಿಜೆಪಿಯಲ್ಲಿ ಟಿಕೆಟ್ ಕೋಟಿ ಕೋಟಿಗೆ ಬಿಕರಿಯಾಗ್ತಿವೆ ಅಂತಾ ಆರೋಪಿಸಿದ್ದಾರೆ. ಇದನ್ನೂ ಓದಿ: ಎಚ್‍ಡಿ ಕುಮಾರಸ್ವಾಮಿ ಪರ ನಟಿ ರಚಿತಾ ರಾಮ್ ಪ್ರಚಾರ

ಮಾಯಕೊಂಡದಲ್ಲಿ ಮಾಜಿ ಶಾಸಕ ಬಸವರಾಜ ನಾಯ್ಕ್ ಕೂಡ ತೆನೆ ಹೊರಲು ರೆಡಿ ಆಗಿದ್ದಾರೆ. ಬೆಂಗಳೂರಿನ ಪುಲಕೇಶಿನಗರದ ಮಾಜಿ ಶಾಸಕ ಪ್ರಸನ್ನಕುಮಾರ್ ಕಾಂಗ್ರೆಸ್‍ಗೆ ಕೈ ಕೊಟ್ಟು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‍ಗೆ ಜೈ ಎಂದಿದ್ದಾರೆ. ದೇವೇಗೌಡರ ಸಮ್ಮುಖದಲ್ಲಿ ತೆನೆ ಹೊತ್ತಿದ್ದಾರೆ. ಮಳೆ ಹುಡುಗಿ ಪೂಜಾ ಗಾಂಧಿ ಕೂಡ ಇಂದು ಜೆಡಿಎಸ್ ಸೇರಲಿದ್ದಾರೆ. ಇನ್ನು ನಟಿ ರಚಿತಾರಾಮ್ ಜೆಡಿಎಸ್‍ಗೆ ವೋಟ್ ನೀಡಿ ಅಂತಿದ್ದಾರೆ.