Saturday, 15th December 2018

Recent News

ರಾಜಕೀಯ ಲಾಭಕ್ಕಾಗಿ ಕುರಿ ಕಾಯುತ್ತಿರುವ ರಾಯಬಾಗ ಬಿಜೆಪಿ ಶಾಸಕ

ಬೆಳಗಾವಿ: ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಏನೂ ಬೇಕಾದರೂ ಮಾಡುತ್ತಾರೆ. ಅದಕ್ಕೆ ಸಾಕ್ಷಿಯೆನ್ನುವಂತೆ ಬಿಜೆಪಿ ಶಾಸಕರೊಬ್ಬರು ಕುರಿ ಕಾಯುತ್ತಿದ್ದಾರೆ.

ಹೌದು, ರಾಜಕೀಯದಲ್ಲಿ ಹಿನ್ನಡೆ ಆಗದಿರಲಿ ಎಂದು ಬೆಳಗಾವಿ ಜಿಲ್ಲೆಯ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು ಕುರಿ ಮೇಯಿಸುತ್ತಾ ಮಡ್ಡಿಯಲ್ಲಿ ಅಡ್ಡಾಡುತ್ತಿದ್ದಾರೆ. ಹೆಗಲ ಮೇಲೆ ಕಂಬಳಿ ಹಾಕಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಹೊರವಲಯದ ಮಡ್ಡಿಗಾಡಿನ ಪ್ರದೇಶದಲ್ಲಿ ಕುರಿ ಕಾಯುತ್ತಾ ಇದ್ದಾರೆ.

ಕುರಿ ಕಾಯೋದು ಯಾಕೆ?
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಿರುವ ಸಂತ ಬಾಳು ಅಜ್ಜಾನ ಕುರಿಗಳು ರಾಯಬಾಗಕ್ಕೆ ಆಗಮಿಸಿವೆ. ಈ ಕುರಿಗಳನ್ನು ಕಾಯುವುದರಿಂದ ರಾಜಕೀಯದಲ್ಲಿ ಒಳ್ಳೆಯದಾಗುತ್ತದೆ ಎಂಬ ಪ್ರತೀತಿ ಇದ್ದು, ಅದಕ್ಕಾಗಿ ರಾಜ್ಯಕ್ಕೆ ಆಗಮಿಸುವ ಕುರಿಗಳನ್ನು ಈ ಭಾಗದಲ್ಲಿನ ಜನ ಪ್ರತಿನಿಧಿಗಳು ಮೇಯಿಸುವುದು ವಾಡಿಕೆಯಾಗಿದೆ.

ಕುರಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ದುರ್ಯೋಧನ ಐಹೊಳೆ ಕುರಿ ಕಾದಿದ್ದಾರೆ. ಇನ್ನೂ ಕುರಿ ಕಾಯುದರಲ್ಲಿ ಕಾಳಜಿ ವಹಿಸಿದ್ದಷ್ಟು ಜನರ ಸಮಸ್ಯೆಗಳ ಕಡೆಗೂ ಶಾಸಕರು ಗಮನ ಹರಿಸಲಿ ಅಂತಾರೆ ಕ್ಷೇತ್ರದ ಪ್ರಜ್ಞಾವಂತ ನಾಗರಿಕರು.

Leave a Reply

Your email address will not be published. Required fields are marked *