ಅಹಮದಾಬಾದ್: ಗುಜರಾತ್ ಚುನಾವಣೆ ಹೊತ್ತಲ್ಲೇ ಮೋದಿ ಕುರಿತ ಸಿನಿಮಾ ರಿಲೀಸ್ ಆಗುತ್ತಿದೆ. ಮೋದಿ ಕಾ ಗಾಂವ್ ಅಂದ್ರೆ ಮೋದಿಯ ಹಳ್ಳಿ ಎನ್ನುವ ಹೆಸರಿನ ಸಿನಿಮಾ ಬಿಡುಗಡೆಯಾಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಕುರಿತು ಸಿನಿಮಾ ಆಗಿದ್ದು, ಸೆನ್ಸಾರ್ ಬೋರ್ಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಲು 9 ತಿಂಗಳು ತೆಗೆದುಕೊಂಡಿತ್ತು. ಈ ಸಿನಿಮಾ ಈಗ ಡಿಸೆಂಬರ್ ಮೊದಲ ವಾರ ಅಥವಾ ಎರಡನೇ ವಾರ ತೆರೆ ಕಾಣಲಿದೆ. ಡಿಸೆಂಬರ್ 9ರಂದು ಗುಜರಾತ್ ನಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ ಎಂದು ವರದಿಯಾಗಿದೆ.
Advertisement
Advertisement
ಚಿತ್ರದ ನಿರ್ಮಾಪಕ ಸುರೇಶ್ ಜಾ, 9 ತಿಂಗಳು ಸಿನಿಮಾಕ್ಕಾಗಿ ಅಲೆದು ಈಗ ನೆಮ್ಮದಿಯಾಗಿದ್ದಾರೆ. ಈಗ ನಾನು ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡುತ್ತೇನೆ. ಡಿಸೆಂಬರ್ ಮೊದಲ ವಾರ ಅಥವಾ ಎರಡನೇ ವಾರ ಈ ಸಿನಿಮಾವನ್ನು ಬಿಡುಗಡೆ ಮಾಡಲು ಸೂಚನೆ ನೀಡಿದ್ದಾರೆ. ಗುಜರಾತ್ ನ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುವ ತಯಾರಿ ನಡೆಸುತ್ತಿದ್ದೇವೆ. ಅಷ್ಟೇ ಅಲ್ಲದೇ ದೇಶದ ವಿವಿಧ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಸುರೇಶ್ ಜಾ ತಿಳಿಸಿದ್ದಾರೆ.
Advertisement
Advertisement
ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರಕ್ಕೆ ನಾಗೇಂದ್ರ ಎಂದು ಹೆಸರಿಡಲಾಗಿದೆ. ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಅಭಿನಯಿಸಿದ್ದ ಥೇಠ್ ಮೋದಿಯಂತೆ ಕಾಣುವ ವಿಕಾಸ್ ಮಾಹಂತೆ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿಜಿಟಲ್ ಇಂಡಿಯಾ, ಸರ್ಜಿಕಲ್ ಸ್ಟ್ರೈಕ್, ಸ್ವಚ್ಛ ಭಾರತ ಅಭಿಯಾನ, ನೋಟು ನಿಷೇಧದಂತಹ ಮೋದಿ ಕೈಗೊಂಡ ದಿಟ್ಟ ನಿರ್ಧಾರಗಳ ಬಗ್ಗೆ ಸಿನಿಮಾದಲ್ಲಿ ಚಿತ್ರಿಸಲಾಗಿದೆ.