Monday, 17th June 2019

ರಾಜ್ಯದಲ್ಲಿ ಕಮಲ ಅರಳಿಸಲು ಸರ್ಕಸ್ – ರಾಜ್ಯ ಬಿಜೆಪಿಗರಿಗೆ ದಿಲ್ಲಿಯಲ್ಲೇ ಇರುವಂತೆ ಆರ್ಡರ್

ನವದೆಹಲಿ: ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ಆಗುತ್ತೆ ಅಂತ ಬಿಜೆಪಿ ನಾಯಕರು ಹೇಳುತ್ತಲೇ ಇದ್ದಾರೆ. ಇದರ ನಡುವೆಯೇ ದೆಹಲಿಯಲ್ಲಿ ಬೀಡು ಬಿಟ್ಟಿರುವ 104 ಬಿಜೆಪಿ ಶಾಸಕರಿಗೆ ಕರ್ನಾಟಕ ಭವನ ಖಾಲಿ ಮಾಡಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡುವಂತೆ ಹೈಕಮಾಂಡ್ ಕಟ್ಟಾಜ್ಞೆ ನೀಡಿದೆ.

ಇಂದು, ನಾಳೆ ದೆಹಲಿಯಲ್ಲಿಯೇ ಇರುವಂತೆ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೈಕಮಾಂಡ್ ಸೂಚನೆ ನೀಡಿದೆ. ಇದು ಆಪರೇಷನ್ ಕಮಲದ ಚರ್ಚೆಗಾ ಅನ್ನೋ ಮಾತು ಜೋರಾಗಿದ್ದು, ಶಾಸಕರಲ್ಲಿ ಕುತೂಹಲ ಮೂಡಿಸಿದೆ. ಈ ನಡುವೆ ಇವತ್ತು ದೆಹಲಿಯ ವೆಸ್ಟರ್ನ್ ಕೋರ್ಟ್ ಗೆಸ್ಟ್ ಹೌಸ್‍ನಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಭೆ ಕರೆದಿದ್ದಾರೆ. ರಾಜ್ಯದ 104 ಶಾಸಕರ ಜತೆ, ಸಂಸದರು, ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.

ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್, ರಾಜ್ಯಾಧ್ಯಕ್ಷ ಯಡಿಯೂರಪ್ಪ, ಅಮಿತ್ ಶಾಗೆ ಸಾಥ್ ನೀಡಲಿದ್ದಾರೆ. ಬೆಳಗ್ಗೆ 11 ರಿಂದ ಸಂಜೆ 5ರ ತನಕ ಸಭೆ ನಡೆಯಲಿದೆ. ಲೋಕಸಭಾ ಸಿದ್ಧತೆಯ ಹೆಸರಿನಲ್ಲಿ ಸಭೆ ನಡೆಯುತ್ತಿದ್ದು, ಬಿಜೆಪಿ ಶಾಸಕರು ಕಾದು ಕುಳಿತಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *