Thursday, 22nd August 2019

ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್- ಲಿಮಿಟೆಡ್ ಕ್ಯಾಬಿನೆಟ್‍ಗೆ ಮೋದಿ ಗ್ರೀನ್ ಸಿಗ್ನಲ್

ಬೆಂಗಳೂರು: ಕಡೆಗೂ ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕ್ಯಾಬಿನೆಟ್‍ಗೆ ಪ್ರಧಾನಿ ನರೇಂದ್ರ ಮೋದಿ ಲಿಮಿಟ್ ಹಾಕಿದ್ದಾರೆ.

ಆಗಸ್ಟ್ 19ಕ್ಕೆ ಸಚಿವ ಸಂಪುಟ ರಚನೆಗೆ ಬಿಎಸ್‍ವೈ ಅವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಇಲ್ಲ. ಬರೀ 16 ಮಂದಿ ಮಾತ್ರ ಬಿಎಸ್‍ವೈ ಸಂಪುಟ ಸೇರಲು ಅವಕಾಶ ನೀಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಆಗಸ್ಟ್ 19 ರಂದು ಸೋಮವಾರ ಬಿಎಸ್‍ವೈ ಟೀಂ ಪ್ರಮಾಣ ವಚನ ಸ್ವೀಕಾರ ಮಾಡಲಿದೆ. ದೆಹಲಿಯಲ್ಲಿ ಸಂಪುಟಕ್ಕೆ ಯಾರು ಸೇರಬೇಕು ಅನ್ನೋದು ಡಿಸೈಡ್ ಆಗುತ್ತದೆ. ಪಟ್ಟಿ ತನ್ನಿ 16 ಶಾಸಕರಿಗೆ ಮಾತ್ರ ಸಚಿವರ ಭಾಗ್ಯ ಎಂದು ಹೈಕಮಾಂಡ್ ಹೇಳಿದ್ದು, ಇದೀಗ ಬಿಎಸ್‍ವೈ ಸಂಪುಟದಲ್ಲಿ ಯಾರೆಲ್ಲ ಸಚಿವರಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಲಿಂಗಾಯತರಿಗೆ ಹೆಚ್ಚು ಸ್ಥಾನ ಸಿಕ್ಕಿ ಬಿಡುತ್ತಾ ಎಂಬ ಪ್ರಶ್ನೆಯೂ ಕಾಡುತ್ತಿದೆ.

ಅನರ್ಹ ಶಾಸಕರನ್ನ ಕೈಬಿಡುವುದು ಬೇಡ ಎಂಬ ಸಂದೇಶ ಈಗಾಗಲೇ ರವಾನೆಯಾಗಿದೆ. ಈ ಮೂಲಕ 17 ಸಚಿವ ಸ್ಥಾನ ಉಳಿಸಿಕೊಂಡರೆ ಅನರ್ಹರಿಗೆ ವಿಶ್ವಾಸ ತುಂಬಿದಂತೆ ಆಗುತ್ತದೆ. ಹೀಗಾಗಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಬೇಡ ಎಂದು ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಹೇಳಿದ್ದಾರೆ ಎನ್ನಲಾಗಿದೆ.

ಯಾರಿಗೆಲ್ಲ ಇದೆ ಮಂತ್ರಿ ಸ್ಥಾನದ ಲಕ್?:
ಹಳೇ ಮೈಸೂರು ಭಾಗಕ್ಕೆ ಕ್ಯಾಬಿನೆಟ್‍ನಲ್ಲಿ ಸ್ಥಾನ ಇಲ್ಲ. ಬೆಂಗಳೂರಲ್ಲೂ ಮೂರು ಮಂದಿಗೆ ಮಾತ್ರ ಸಚಿವ ಸ್ಥಾನ ಸೀಮಿತ ಮಾಡಲಾಗಿದೆ. ಆದರೆ ಉತ್ತರ ಕರ್ನಾಟಕ್ಕೆ ಹೆಚ್ಚು ಪಾಲು ನೀಡಲಾಗುತ್ತಿದೆ. ಪಟ್ಟಿಯಲ್ಲಿ ಹಿರಿಯರಿಗೂ ಮಣೆ, ಚೊಚ್ಚಲ ಸಚಿವರಾಗುವವರ ಹೆಸರಿದೆಯಂತೆ.

ಹೀಗಾಗಿ ಬೆಳಗಾವಿ, ಬೆಂಗಳೂರು ನಗರ ಜಿಲ್ಲೆಗೆ ಮೂರು ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೋಲಾರ, ರಾಮನಗರ, ಕೊಡಗು, ಉತ್ತರ ಕನ್ನಡ, ಕಲಬುರಗಿ, ಯಾದಗಿರಿ, ಕೊಪ್ಪಳ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಆದ್ಯತೆ ಇಲ್ಲವಾ ಎಂಬ ಪ್ರಶ್ನೆ ಎದ್ದಿದೆ.

ಕ್ಯಾಬಿನೆಟ್ ಸೇರುವ 16 ಮಂದಿ ಯಾರು?:
> ಜಗದೀಶ್ ಶೆಟ್ಟರ್- ಲಿಂಗಾಯತ ಸಮುದಾಯ
> ಗೋವಿಂದ ಕಾರಜೋಳ- ಎಸ್‍ಸಿ ಸಮುದಾಯ
> ಈಶ್ವರಪ್ಪ- ಕುರುಬ ಸಮುದಾಯ
> ಆರ್.ಅಶೋಕ್- ಒಕ್ಕಲಿಗ ಸಮುದಾಯ
> ಶ್ರೀರಾಮುಲು- ಎಸ್‍ಟಿ ಸಮುದಾಯ
> ವಿ.ಸೋಮಣ್ಣ- ಲಿಂಗಾಯತ ಸಮುದಾಯ
> ಅಶ್ವಥ್‍ನಾರಾಯಣ್- ಒಕ್ಕಲಿಗ ಸಮುದಾಯ
> ಸುರೇಶ್ ಕುಮಾರ್- ಬ್ರಾಹ್ಮಣ ಸಮುದಾಯ

> ಉಮೇಶ್ ಕತ್ತಿ- ಲಿಂಗಾಯತ ಸಮುದಾಯ
> ಮಾಧುಸ್ವಾಮಿ- ಲಿಂಗಾಯತ ಸಮುದಾಯ
> ಬಸವರಾಜ್ ಬೊಮ್ಮಾಯಿ- ಲಿಂಗಾಯತ ಸಮುದಾಯ
> ಬಾಲಚಂದ್ರ ಜಾರಕಿಹೊಳಿ- ಎಸ್‍ಟಿ ಸಮುದಾಯ
> ಶಿವನಗೌಡನಾಯಕ್- ಎಸ್‍ಟಿ ಸಮುದಾಯ
> ಅಂಗಾರ- ಎಸ್‍ಸಿ ಸಮುದಾಯ
> ಕೋಟಾ ಶ್ರೀನಿವಾಸ್ ಪೂಜಾರಿ- ಬಿಲ್ಲವ ಸಮುದಾಯ
> ಶಶಿಕಲಾ ಜೊಲ್ಲೆ- ಲಿಂಗಾಯತ ಸಮುದಾಯ

Leave a Reply

Your email address will not be published. Required fields are marked *