Saturday, 25th May 2019

Recent News

ಬಿಎಸ್‍ವೈಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಗಾದಿಯಿಂದ ಕೆಳಗಿಳಿಸಿ- ಅಮಿತ್ ಶಾಗೆ ಕಾರ್ಯಕರ್ತನಿಂದ ಪತ್ರ

ಬೀದರ್: ಬಿ.ಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಗಾದಿಯಿಂದ ಕೆಳಗಿಳಿಸುವಂತೆ ಭಾಲ್ಕಿಯ ಕಮಲ ಕಾರ್ಯಕರ್ತರೊಬ್ಬರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಭರತ್ ಖಂಡ್ರೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಾರದೇ ಇರುವುದಕ್ಕೆ ಯಡಿಯೂರಪ್ಪನವರೇ ಕಾರಣ ಅಂತ ಪತ್ರದಲ್ಲಿ ದೂರಿದ್ದಾರೆ. ರಾಜ್ಯದಲ್ಲಿ ಅಮಿತ್ ಶಾ ಹಾಕಿದ್ದ ಮಿಷನ್ 150 ಸಫಲವಾಗುವ ಎಲ್ಲ ಸಾಧ್ಯತೆಗಳಿದ್ದವು. ಆದರೆ ಕೆಜೆಪಿಯಿಂದ ಬಂದವರಿಗೆ ಟಿಕೆಟ್ ನೀಡಿದ್ದರಿಂದ ಬಿಜೆಪಿ ಅಧಿಕಾರದಿಂದ ವಂಚಿತವಾಯಿತು. ಅಲ್ಲದೇ ಜಿಲ್ಲೆಯಲ್ಲಿ ಕಮಲ ಪಕ್ಷ ಸಂಪೂರ್ಣ ನೆಲಕಚ್ಚಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ 5 ಸಾಮಾನ್ಯ ಕ್ಷೇತ್ರಗಳಿದ್ದು, ವಿಧಾನಸಭಾ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಲು ಆಗಿಲ್ಲ. ಪ್ರಧಾನಿ ಮೋದಿ ಯೋಗಿ ಆದಿತ್ಯನಾಥ್ ಬಂದರೂ ಅದು ಫಲಿಸಿಲ್ಲ. ಜಿಲ್ಲೆಯಲ್ಲಿ ಮೋದಿ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದ್ದರೂ ಯಡಿಯೂರಪ್ಪನವರ ಬಂಟರಿಂದಲೇ ಪಕ್ಷ ಪತನದತ್ತ ಸಾಗುತ್ತಿದೆ. ಹೀಗಾಗಿ ಕೂಡಲೇ ಬಿಎಸ್‍ವೈ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ಯಡಿಯೂರಪ್ಪ ಅಪರೇಶನ್ ಕಮಲದ ಮೂಲಕ ಸಿಎಂ ಆಗಲು ಹೊರಟಿರುವಾಗ ಬಿಜೆಪಿ ಕಾರ್ಯಕರ್ತ ಈ ರೀತಿ ಪತ್ರ ಬರೆದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *