Connect with us

ಹಕ್ಕಿಗೂಡನ್ನು ಮಾಸ್ಕ್ ಮಾಡಿಕೊಂಡ ತಾತ

ಹಕ್ಕಿಗೂಡನ್ನು ಮಾಸ್ಕ್ ಮಾಡಿಕೊಂಡ ತಾತ

ಹೈದರಾಬಾದ್: ಹಿರಿ ಜೀವವೊಂದು ಮಾಸ್ಕ್ ಕೊಳ್ಳಲು ಹಣವಿಲ್ಲದೆ ಹಕ್ಕಿಯ ಗೂಡನ್ನೇ ಮಾಸ್ಕ್ ಮಾಡಿಕೊಂಡು ಮುಖಕ್ಕೆ ಧರಿಸುವ ಮೂಲಕವಾಗಿ ತೆಲಂಗಾಣದ ಮೆಹಬೂಬ್ ನಗರದ ನಿವಾಸಿಯೊಬ್ಬರು ಸುದ್ದಿಯಾಗಿದ್ದಾರೆ.

ಹಕ್ಕಿಯ ಗೂಡನ್ನು ಮಾಸ್ಕ್ ನಂತೆ ಧರಿಸಿಕೊಂಡು ಸರ್ಕಾರಿ ಕಚೇರಿಗೆ ಬಂದಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಕಲಾ ಕುರ್ಮಯ್ಯ ತನ್ನ ಪಿಂಚಣಿ ಹಣ ಸಂಗ್ರಹಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಮಾಸ್ಕ್ ಖರೀದಿ ಮಾಡಲು ಸಾಧ್ಯವಾಗದ ಕಾರಣ ಈ ರೀತಿಯಾಗಿ ಒಂದು ಉಪಾಯವನ್ನು ಮಾಡಿದ್ದಾರೆ.

ಕೊರೊನ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಲ್ಲದೆ ಮಾಸ್ಕ್ ಇಲ್ಲದಿದ್ದರೆ ಯಾವುದೇ ಕಚೇರಿಗಳಿಗೂ ಪ್ರವೇಶ ಇರುವುದಿಲ್ಲ. ಈ ಕಾರಣದಿಂದಾಗಿ ಮೇಕಲಾ ಕರ್ಮಯ್ಯ ಹಕ್ಕಿಯ ಗೂಡನ್ನೇ ತನ್ನ ಮಾಸ್ಕ್ ಹಾಗೇ ಮಾಡಿಕೊಂಡು ಬಂದು ಗಮನ ಸೆಳೆದಿದ್ದಾರೆ.

Advertisement
Advertisement