Saturday, 7th December 2019

ಬೆಳಗ್ಗೆಯೇ ಫೀಲ್ಡಿಗಿಳಿದ ಮೈಸೂರು ಪೊಲೀಸರು!

ಮೈಸೂರು: ಗುರುವಾರ ನಡೆದ ಸರಣಿ ಐದು ಸರಗಳ್ಳತನ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದ ಪೊಲೀಸರು ತಪಾಸಣೆ ಕಾರ್ಯವನ್ನು ಆರಂಭಿಸಿದ್ದಾರೆ.

ಬೈಕ್ ಸವಾರರ ತಪಾಸಣೆಗೆ ಪೊಲೀಸರು ಮುಂದಾಗಿದ್ದು, ಬೈಕ್‍ಗಳನ್ನ ತಡೆದು ವಿವರ ಸಂಗ್ರಹಿಸುತ್ತಿದ್ದಾರೆ. ಇಡೀ ಮೈಸೂರಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅಷ್ಟೇ ಅಲ್ಲದೆ ಸರಗಳ್ಳರ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಮೈಕ್‍ನಲ್ಲಿ ಪೊಲೀಸರು ಪ್ರಚಾರ ಮಾಡುತ್ತಿದ್ದಾರೆ.

ಮೈಸೂರಿನಲ್ಲಿ ಗುರುವಾರ ಬೆಳಗ್ಗೆ ಸರಣಿ ಸರಗಳ್ಳತನ ನಡೆದಿತ್ತು. ಮೈಸೂರಿನ ವಿದ್ಯಾರಣ್ಯ ಪುರಂನ ಲಿಂಕ್ ರಸ್ತೆಯಲ್ಲಿ ಇಬ್ಬರು ಮಹಿಳೆಯರು ವಾಕ್ ಮಾಡಿಕೊಂಡು ಹೋಗುತ್ತಿದ್ದರು. ಆಗ ಹೆಲ್ಮೆಟ್ ಧರಿಸಿ ಪಲ್ಸರ್ ಬೈಕಿನಲ್ಲಿ ಇಬ್ಬರು ಬಂದು ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕದ್ದು ಪರಾರಿಯಾಗಿದ್ದಾರೆ. ಇತ್ತ ಮಹಿಳೆ ನೆಲಕ್ಕೆ ಬಿದ್ದು ಒದ್ದಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಜೊತೆಗೆ ಮೈಸೂರಿನಲ್ಲಿ ನಿನ್ನೆ ಮಂಜಾನೆ 5 ಕಡೆ ಈ ರೀತಿ ಸರಗಳ್ಳತನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬೆಳಗ್ಗೆಯೇ ತಪಾಸಣೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *