Connect with us

Bengaluru City

ಚಲಿಸುತ್ತಿರುವಾಗ್ಲೇ ದ್ವಿಚಕ್ರ ವಾಹನದಲ್ಲಿ ಬೆಂಕಿ!

Published

on

ಬೆಂಗಳೂರು: ಚಲಿಸುತ್ತಿರುವಾಗಲೇ ದ್ವಿಚಕ್ರ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಕರ್ನಾಟಕ-ತಮಿಳುನಾಡು ಗಡಿ ಸುಲಗಿರಿಯ ಬೈಪಾಸ್ ಬಳಿ ನಡೆದಿದೆ.

ಸವಾರ ಬೈಕಿನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸವಾರ ಬೈಕ್ ಬಿಟ್ಟು ಓಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ನೋಡ ನೋಡುತ್ತಲೇ ದ್ವಿಚಕ್ರ ವಾಹನ ಹೊತ್ತಿ ಉರಿದಿದೆ.

ಈ ಘಟನೆ ನಡೆಯುತ್ತದ್ದ ವೇಳೆಯೇ ರಸ್ತೆಯಲ್ಲಿ ನೀರಿನ ಟ್ಯಾಂಕರ್ ಹೋಗುತ್ತಿತ್ತು. ಹೀಗಾಗಿ ನೀರಿನ ಟ್ಯಾಂಕರ್‍ನನ್ನು ನಿಲ್ಲಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಲಾಗಿದೆ. ಕೆಲ ನಿಮಿಷಗಳ ನಂತರ ಬೆಂಕಿ ಹತೋಟಿಗೆ ಬಂದಿದ್ದು, ಸದ್ಯ ದ್ವಿಚಕ್ರ ವಾಹನದ ಅರ್ಧದಷ್ಟು ಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.

ಸ್ಥಳಕ್ಕೆ ಸೂಲಗಿರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.