Connect with us

Crime

ಶಾಲೆಯಲ್ಲೇ ಹೆಡ್ ಮಾಸ್ಟರ್ ಕಾಮದಾಟ – ರೆಡ್ ಹ್ಯಾಂಡ್ ಹಿಡಿದ್ರೂ ಪತಿ ಒಳ್ಳೆಯವರೆಂದ ಪತ್ನಿ

Published

on

– ಜನ ಸೇರ್ತಿದ್ದಂತೆ ಶಾಲೆಯಿಂದ ಮಹಿಳೆ ಜೂಟ್

ಪಾಟ್ನಾ: ಶಾಲೆಯಲ್ಲಿಯೇ ಸರಸದಾಟದಲ್ಲಿ ತೊಡಗಿದ್ದ ಮುಖ್ಯ ಶಿಕ್ಷಕನನ್ನು ಗ್ರಾಮಸ್ಥರು ಥಳಿಸಿರುವ ಘಟನೆ ಬಿಹಾರದ ಸೇಮಾಪುರ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರದಲ್ಲಿ ನಡೆದಿದೆ.

ಕಮಲೇಶ್ವರಿದಾಸ್ ಸರಸದಾಟದಲ್ಲಿ ತೊಡಗಿದ್ದ ಹೆಡ್ ಮಾಸ್ಟರ್. ಭಾನುವಾರ ಶಾಲೆ ಬಾಗಿಲು ತೆಗೆದಿರೋದನ್ನ ಕಂಡು ಗ್ರಾಮಸ್ಥರು ಒಳಗೆ ಬಂದಿದ್ದಾರೆ. ಶಾಲೆಯಲ್ಲಿಯೇ ತನಗೊಂದು ಬೆಡ್‍ರೂಮ್ ಮಾಡಿಕೊಂಡಿದ್ದ ಕಮಲೇಶ್ವರಿದಾಸ್ ಮಹಿಳೆ ಜೊತೆ ಇರೋದನ್ನ ಗ್ರಾಮಸ್ಥರು ನೋಡಿ ಹಿಡಿದಿದ್ದಾರೆ. ಶಾಲೆಯಲ್ಲಿ ಅನೈತಿಕ ಕೆಲಸದಲ್ಲಿ ತೊಡಗಿದ್ದ ಶಿಕ್ಷಕನನ್ನು ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಾಲೆ ಆವರಣದಲ್ಲಿ ಜನರು ಸೇರುತ್ತಿದ್ದಂತೆ ಮಹಿಳೆ ಸಮಯ ನೋಡಿಕೊಂಡು ಎಸ್ಕೇಪ್ ಆಗಿದ್ದಾಳೆ.

ಮೊದಲಿನಿಂದಲೂ ಶಿಕ್ಷಕ ಕಮಲೇಶ್ವರಿ ದಾಸ್ ವಿರುದ್ಧ ಆರೋಪಗಳು ಬಂದಿದ್ದವು. ಶಾಲೆಗೆ ಮಹಿಳೆಯರನ್ನ ಕರೆಸಿಕೊಳ್ಳುವ ಬಗ್ಗೆ ಊರಿನಲ್ಲಿ ಸುದ್ದಿ ಹರಿದಾಡಿತ್ತು. ಶಿಕ್ಷಕನ ಪತ್ನಿ ಪಂಚಾಯ್ತಿಯ ಅಧ್ಯಕ್ಷೆಯಾಗಿದ್ದರಿಂದ ಯಾರೂ ಈ ಬಗ್ಗೆ ಮಾತಾಡುತ್ತಿರಲಿಲ್ಲ. ಇಂದು ಎಲ್ಲರ ಸಮಕ್ಷಮದಲ್ಲಿ ಶಿಕ್ಷಕನನ್ನ ಹಿಡಿಯಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರು ಹೇಳಿದ್ದಾರೆ.

ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಕನ ಪತ್ನಿ, ನನ್ನ ಪತಿಯವರು ಒಳ್ಳೆಯವರು. ನನ್ನ ರಾಜಕೀಯ ವಿರೋಧಿಗಳ ಮೋಸದ ಜಾಲದಲ್ಲಿ ಪತಿ ಸಿಲುಕಿದ್ದಾರೆ. ಅವರಿಗೆ ಮೌಥ್ ಕ್ಯಾನ್ಸರ್ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುವ ಮೂಲಕ ಎಲ್ಲ ಆರೋಪಗಳನ್ನ ತಳ್ಳಿ ಹಾಕಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in