Connect with us

Crime

ಕರೆಂಟ್ ಬಿಲ್ ಹೆಚ್ಚು ಬರುತ್ತಿದೆ ಅಂತ ರೈತ ಆತ್ಮಹತ್ಯೆಗೆ ಶರಣು

Published

on

– ತಂದೆ ಸಾವಿನ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಗಳು

ಪಾಟ್ನಾ: ಹೆಚ್ಚು ವಿದ್ಯುತ್ ಬಿಲ್ ಬರುತ್ತಿದೆ ಎಂದು ಖಿನ್ನತೆಗೆ ಒಳಗಾದ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ತಂದೆ ಸಾವಿನಿಂದ ಮನನೊಂದ 14 ವರ್ಷದ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮೃತ ವ್ಯಕ್ತಿಗೆ 6 ಹೆಣ್ಣು ಮಕ್ಕಳಿದ್ದಾರೆ. ಇಬ್ಬರ ವಿವಾಹವಾಗಿದೆ, ನಾಲ್ವರು ಹೆಣ್ಣು ಮಕ್ಕಳು ಮನೆಯಲ್ಲಿದ್ದಾರೆ.


ಹೆಣ್ಣುಮಕ್ಕಳ ವಿವಾಹದ ಬಗ್ಗೆ ಪತಿ ಚಿಂತಿಸುತ್ತಿದ್ದರು. ಹೆಚ್ಚು ವಿದ್ಯುತ್ ಬಿಲ್‍ನಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತವ್ಯಕ್ತಿಯ ಪತ್ನಿ ದಾರಿಗಾಂವ್ ಪೊಲೀಸ್ ಠಾಣೆಯಲ್ಲಿ ಪೊಲೀಸರಿಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

ಮೃತ ರೈತರಿಗೆ ಇರುವ ಸ್ವಲ್ಪ ಜಮೀನಿನಲ್ಲಿ ತರಕಾರಿಗಳನ್ನು ಬೆಳೆಸುತ್ತಿದ್ದರು. ಹೀಗಾಗಿ ವಿದ್ಯುತ್ ಪಂಪ್ ಸೆಟ್ ಅನ್ನು ಬಳಸುತ್ತಿದ್ದರು. 2010 ರಲ್ಲಿ ರೈತ ವಿದ್ಯುತ್ ಸಂಪರ್ಕವನ್ನು ತೆಗೆದುಕೊಂಡಿದ್ದಾರೆ. 2014ರಲ್ಲಿ 10,000 ರೂ., 2020ರಲ್ಲಿ 10,000 ರೂ. ಮತ್ತು ಫೆಬ್ರವರಿ ಮೊದಲ ವಾರದಲ್ಲಿ 5,000 ರೂ. ಹಣ ಡೆಪಾಸಿಟ್ ಮಾಡಿದ್ದರು. 23,000 ರೂ. ಬಾಕಿ ಉಳಿಸಿಕೊಂಡಿದ್ದರು. ಆದರೆ ಅವರ ಸಂಪರ್ಕ ಚಾಲನೆಯಲ್ಲಿದೆ. ಆದರೆ ಈ ಕಾರಣಕ್ಕಾಗಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ ಎಂದು ದಕ್ಷಿಣ ಬಿಹಾರ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ (ಎಸ್‍ಬಿಪಿಡಿಸಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್ ಪ್ರೇಮ್ ಕುಮಾರ್ ಪ್ರವೀಣ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *