Crime
ಹೋಟೆಲ್ನಲ್ಲಿ ದಂಪತಿ ನಿಗೂಢ ಸಾವು

ಪಾಟ್ನಾ: ಗುಂಡು ತಗುಲಿ ದಂಪತಿ ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ಸೋಮವಾರ ನಡೆದಿದೆ. ತನಿಖೆ ವೇಳೆ ಮೃತಪಟ್ಟವರು ದಂಪತಿಯಾಗಿದ್ದು, ಪರೀಕ್ಷೆಗಾಗಿ ಮುಜಾಫರ್ಪುರ್ಗೆ ಬಂದಿದ್ದರು ಎಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.
ದಂಪತಿ ವಿಚಾರಿಸಲೆಂದು ಹೋಟೆಲ್ ಮ್ಯಾನೇಜರ್ ಚೋಟು ಕುಮಾರ್, ಕೋಣೆ ಬಳಿ ಹೋಗಿ ಬಾಗಿಲು ತಟ್ಟಿದ್ದಾರೆ. ಆದರೆ ದಂಪತಿ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಹಾಕಿ ಕೋಣೆ ಒಳಗೆ ಪ್ರವೇಶಿಸಿದಾಗ ತಲೆಗೆ ಬುಲೆಟ್ ತಗುಲಿ ದಂಪತಿ ಹಾಸಿಗೆ ಮೇಲೆ ಶವವಾಗಿ ಬಿದ್ದಿರುವುದು ಪತ್ತೆಯಾಗಿದೆ.
ಘಟನೆ ಕುರಿತಂತೆ ವಿಚಾರಣೆ ನಡೆಸಲು ಎಫ್ಎಸ್ಎಲ್ ವಿಶೇಷ ತಂಡವನ್ನು ರಚಿಸಲಾಗಿದ್ದು, ತನಿಖೆ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಸತ್ಯ ಬಹಿರಂಗಗೊಳ್ಳಲಿದೆ ಎಂದು ಡಿಎಸ್ಪಿ ರಾಮ್ನಾರೇಶ್ ಪಾಸ್ವಾನ್ ತಿಳಿಸಿದ್ದಾರೆ.
