Connect with us

Bengaluru City

ಕಾಮನ ಬಿಲ್ಲಿಗೆ ಬಣ್ಣ ಬಣ್ಣದ ಕಲರ್ ಕಾಗೆ ಹಾರಿಸುವವನು ಪ್ರಶಾಂತ್ ಅಂದಿದ್ಯಾಕೆ ಚಕ್ರವರ್ತಿ

Published

on

ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಐದನೇ ವಾರದತ್ತ ಸಾಗುತ್ತಿದೆ. ಸದ್ಯ ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ನಡೆಯಿತು. ಈ ವೇಳೆ ಮನೆಗೆ ಹೊಸದಾಗಿ ಬಂದ ಸದಸ್ಯ ಚಕ್ರವರ್ತಿ ಚಂದ್ರಚೂಡ್ ಕಿಚ್ಚನ ಮುಂದೆ ಪ್ರಶಾಂತ್ ಸಂಬರ್ಗಿಯವರ ಕುರಿತಂತೆ ಸಾಹಿತ್ಯವೊಂದನ್ನು ಬರೆದಿದ್ದಾರೆ.

ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು, ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು, ಕಡಲನೇ ತಂದು ಮಡಿಲಿಗೆ ಸುರಿದವನು. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಎಂದು ಚಕ್ರವರ್ತಿ ಚಂದ್ರಚೂಡರವರು ಹೇಳುತ್ತಾರೆ. ಈ ವೇಳೆ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿಯವರೆ ನಿಮಗೆ ಯಾಕೆ ಈ ಸಾಲುಗಳನ್ನು ಹೇಳಿದರು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರಶಾಂತ್ ಗೊತ್ತಿಲ್ಲ ಎಂದಾಗ ಸುದೀಪ್ ಹಾಸ್ಯಮಯವಾಗಿ ನಿಮಗೆ ಗೊತ್ತಿಲ್ವಾ ಎನ್ನುತ್ತಾ ನಗುತ್ತಾರೆ.

ಬಳಿಕ ಸುದೀಪ್ ಚಕ್ರವರ್ತಿವಯರೇ ವಿವರಿಸಿ ಯಾಕೆ ಪ್ರಶಾಂತ್ ಸಂಬರ್ಗಿಯವರ ಮೇಲೆ ಈ ಸಾಹಿತ್ಯ ಬರೆದಿದ್ದೀರಾ ಎಂದು ಹೇಳಿದಾಗ, ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು ಎಂದರೆ ಕಲ್ಲಾಗಿದ್ದಾಗ ಅದು ಯಾರಿಗೂ ಬೇಡವಾಗಿರುತ್ತದೆ, ಆದರೆ ಅದು ದೇವರಾದಾಗ ಎಲ್ಲರಿಗೂ ಬೇಕಾಗುತ್ತದೆ. ಒಂದು ಬೇಡವಾಗಿರುವುದನ್ನು ಬೇಕಾಗಿಸುವಂತಹ ಶಕ್ತಿ ಪ್ರಶಾಂತ್‍ರವರಿಗೆ ಇದೆ. ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು ಎಂದರೆ ಮೊಸಳೆ ನೀರಿನಲ್ಲಿದ್ದಾಗ ಯಾರಾದರೂ ಹೋದರೆ, ಒಮ್ಮೆ ಅದು ಹಿಡಿದುಕೊಂಡರೆ ಬಿಡುವುದಿಲ್ಲ. ಆದರೆ ಅದನ್ನು ಮಗುವಿನಂತೆ ಮಾಡಿಸುತ್ತಾನೆ ಎಂದರೆ ಅವನು ನೂರಾರು ಬ್ರಹ್ಮಗಳಿಗೆ ತಂದೆ ಎಂದರ್ಥ.

ಕಡಲನೇ ತಂದು ಮಡಿಲಿಗೆ ಸುರಿದ ಎಂದರೆ ಈ ಮನುಷ್ಯ ಯಾರಿಗಾದರೂ ಸಂತೋಷ ಕೊಡಲು ಪ್ರಾರಂಭಿಸಿದರೆ, ಅಷ್ಟು ಸಂತೋಷ ಕೊಡುವ ತಾಕತ್ತಿದೆ. ಹಾಗೇಯೇ ಅಷ್ಟೇ ಕಾಟವನ್ನು ಕೂಡ ಕೊಟ್ಟು ಬಿಡುತ್ತಾನೆ. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಅಂದರೆ ಕಾಮನ ಬಿಲ್ಲು ಶಾಶ್ವತ ಅಲ್ಲ ಹೀಗೆ ಬಂದು ಹೀಗೆ ಹೋಗುತ್ತದೆ. ಸುಳ್ಳನ್ನೆ ತಂದು, ಸುಳ್ಳನ್ನೇ ಅಡುಗೆ ಮಾಡಿ, ಸುಳ್ಳನ್ನೇ ಬಡಿಸುವಷ್ಟು ಸತ್ಯವಂತ ಅಂತ ನಾನು ಭಾವಿಸಿದ್ದೇನೆ ಎಂದು ವ್ಯಂಗ್ಯಮಯವಾಗಿ ನುಡಿಯುತ್ತಾ, ಪ್ರಶಾಂತ್ ಸಂಬರ್ಗಿಯವರ ಮೇಲೆ ಕವಿತೆ ಬರೆದು ಬಣ್ಣಿಸಿದ್ದಾರೆ.

ಒಟ್ಟಾರೆ ಚಕ್ರವರ್ತಿಯವರು ಆನ್ ದಿ ಸ್ಪಾರ್ಟ್ ಬರೆದ ಈ ಸಾಹಿತ್ಯ ಕೇಳಿ ಮನೆಯ ಎಲ್ಲಾ ಸದಸ್ಯರು ಎದ್ದು-ಬಿದ್ದು ನಕ್ಕಿದ್ದಾರೆ.

Click to comment

Leave a Reply

Your email address will not be published. Required fields are marked *