Connect with us

Bengaluru City

ಪ್ರಶಾಂತ್ ಸಂಬರಗಿಯಿಂದ ದೊಡ್ಮನೆಯಲ್ಲಿ ಬರುತ್ತಾ ಅಪ್ಪಿಕೊಳ್ಳಲು ರೂಲ್ಸ್!

Published

on

ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾದಗಲಿಂದಲೂ ಪ್ರತಿ ಸೀಸನ್‍ನಲ್ಲಿ ಕೂಡ ಎಲ್ಲಾ ಸ್ಪರ್ಧಿಗಳು ಒಬ್ಬರಿಗೊಬ್ಬರು ತಬ್ಬಿಕೊಳ್ಳುವುದು ಸಹಜ. ಆದರೆ ಯಾವ ಸೀಸನ್‍ನಲ್ಲಿಯೂ ಸದ್ದು ಮಾಡಿರದ ಅಪ್ಪುಗೆಯ ವಿಚಾರ ಬಿಗ್‍ಬಾಸ್-8 ಆರಂಭಗೊಂಡ ಬಳಿಕ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಪ್ರಶಾಂತ್ ಸಂಬರಗಿಯ ಅಪ್ಪುಗೆ ನಿನ್ನೆ ದೊಡ್ಡ ಸುದ್ದಿಯಾಗಿದೆ.

ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್, ಪ್ರಶಾಂತ್ ಸಂಬರಗಿಯವರೇ ನೀವು ಎಷ್ಟು ಜನ ಹತ್ತಿರ ತಬ್ಬಿಕೊಂಡು ಮಾತನಾಡಿತ್ತೀರಾ? ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರಶಾಂತ್ ನಾನು ಆಲ್ ಮೋಸ್ಟ್ ಎಲ್ಲರನ್ನು ತಬ್ಬಿಕೊಂಡೆ ಮಾತನಾಡುತ್ತೇನೆ ಎಂದು ಉತ್ತರಿಸುತ್ತಾರೆ. ಇದಕ್ಕೆ ಕಿಚ್ಚ, ನೀವು ತಬ್ಬಿಕೊಳ್ಳುವಾಗ ಕೆಲವರನ್ನು 3-3 ನಿಮಿಷ ತಬ್ಬಿಕೊಳ್ಳುತ್ತೀರಾ, ಕೆಲವರನ್ನು ಸೈಡಿನಿಂದ ತಬ್ಬಿಕೊಳ್ಳುತ್ತೀರಾ, ಮತ್ತೆ ಕೆಲವರನ್ನು ತಬ್ಬಿಕೊಳ್ಳಬೇಕಲ್ಲ ಎಂದು ತಬ್ಬಿಕೊಳ್ಳುತ್ತೀರಾ, ಇನ್ನೂ ಕೆಲವೊಮ್ಮೆ ಒಬ್ಬರನ್ನು ತಬ್ಬಕೊಂಡೆನಲ್ಲ ಎಂದು ಮತ್ತೊಬ್ಬರನ್ನು ತಬ್ಬಿಕೊಳ್ಳುವ ಪರಿಸ್ಥಿತಿಯಿಂದ ಕೂಡ ತಬ್ಬಿಕೊಂಡಿರುವುದನ್ನು ಕೂಡ ನೋಡಿದ್ದೇವೆ. ಆದರೆ ಕೆಲವರನ್ನು ತಬ್ಬಿಕೊಂಡರೆ ನೀವು ಬಿಡುವುದೇ ಇಲ್ಲ. ತಬ್ಬಿಸಿಕೊಳ್ಳುವವರಿಗೆ ಯಾವುದೇ ರೀತಿಯ ಅಭ್ಯಂತರವಿಲ್ಲ. ಇನ್ನೂ ನಮಗೆ ಏಕೆ ತೊಂದರೆ, ನಮಗೆ ಯಾವುದೇ ರೀತಿಯ ಹೊಟ್ಟೆ ಕಿಚ್ಚಿಲ್ಲ. ತಬ್ಬಿಕೊಳ್ಳಿ ಯಾವುದೇ ಸಮಸ್ಯೆ ಇಲ್ಲ. ಆದರೆ ತಬ್ಬಿಕೊಂಡಾಗ ನೀವು ಮಾತನಾಡುತ್ತಿರಲ್ಲ ಅದೇ ಸಮಸ್ಯೆ. ಕಾರಣ ಒಬ್ಬರಿಗೊಬ್ಬರು ತಬ್ಬಿಕೊಂಡಾಗ ಮೈಕ್ ಒತ್ತಿರುತ್ತದೆ. ಏನು ಮಾತನಾಡಿಕೊಳ್ಳುತ್ತೀರಾ ಎಂದು ಕೇಳಿಸುವುದಿಲ್ಲ. ಆಗ ಸಮಸ್ಯೆ ಪ್ರಾರಂಭವಾಗುತ್ತದೆ ಎಂದು ಹಾಸ್ಯಮಯವಾಗಿ ನುಡಿದರು.

ಇಲ್ಲಿಯವರೆಗೂ ಬಿಗ್‍ಬಾಸ್ 2 ಸೆಕೆಂಡ್‍ಗೂ ಹೆಚ್ಚು ಕಾಲ ತಬ್ಬಿಕೊಳ್ಳುವ ಹಾಗಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಿಲ್ಲ. ಬಹುಶಃ ಅಂತಹ ನಿಯಮವನ್ನು ತರುವ ಹಾಗೇ ಮಾಡಬೇಡಿ. ಇಷ್ಟು ಸೀಸನ್‍ಗಳಲ್ಲಿ ಆ ರೀತಿಯ ನಿಯಮಗಳು ಇಲ್ಲಿಯವರೆಗೂ ಬಂದಿಲ್ಲ. ಬಹಳ ಜನ ಒಬ್ಬರಿಗೊಬ್ಬರು ತಬ್ಬಿಕೊಂಡಿದ್ದಾರೆ. ಆದರೆ ಈ ರೇಂಜ್‍ಗೆ ಯಾರು ತಬ್ಬಿಕೊಂಡಿಲ್ಲ. ಹೊಸ ನಿಯಮ ತರುವುದು ನನಗೂ ಸಹ ಇಷ್ಟವಿಲ್ಲ. ನೀವು ತಬ್ಬಿಕೊಳ್ಳಿ, ತಬ್ಬಿಸಿಕೊಳ್ಳುವವರು ತಬ್ಬಿಸಿಕೊಳ್ಳಿ. ಆದರೆ ಇಬ್ಬರೂ ಕೂಡ ಮಾತನಾಡಬೇಡಿ. ಮಾತನಾಡಿದರೆ ಅದು ನಮಗೆ ನೀವು ಏನು ಮಾತನಾಡುತ್ತಿದ್ದೀರಾ ಎಂದು ತಿಳಿಯದೇ ಸಮಸ್ಯೆಯಾಗುತ್ತದೆ ಎಂದರು.

ನನಗೆ ಕೊನೆಯದಾಗಿ ಯಾರನ್ನು ಅಷ್ಟು ಹೊತ್ತು ತಬ್ಬಿಕೊಂಡೇ ಎಂಬ ಬಗ್ಗೆ ತಿಳಿದಿಲ್ಲ. ಆದರೆ ನಿಮ್ಮಲ್ಲಿ ಆ ಕಲೆ ಇದೆ. ಇರಲಿ, ತಬ್ಬಿಕೊಳ್ಳಿ. ಆದರೆ ತಬ್ಬಿಕೊಂಡು ಬಿಟ್ಟ ನಂತರ ಮಾತನಾಡಿ ಎಂದು ಕಿಚ್ಚ ಪ್ರಶಾಂತ್ ಸಂಬರಗಿಗೆ ವ್ಯಂಗ್ಯ ಮಾಡಿದರು.

ಒಟ್ಟಾರೆ ಕಿಚ್ಚ ಸುದೀಪ್ ಹಾಗೂ ಪ್ರಶಾಂತ್ ಸಂಬರಗಿ ಜೊತೆಗಿನ ಹಾಸ್ಯಮಯ ಮಾತುಕತೆ ನೋಡಿ ಮನೆ ಮಂದಿಯೆಲ್ಲಾ ಫುಲ್ ಎಂಜಾಯ್ ಮಾಡುತ್ತಾ, ಜೋರಾಗಿ ನಗುತ್ತಾ, ಚಪ್ಪಾಳೆ ತಟ್ಟಿದರು.

Click to comment

Leave a Reply

Your email address will not be published. Required fields are marked *