Connect with us

Cinema

ಬಿಗ್ ಬಾಸ್ ಮನೆಯಿಂದ ರಾಜೀವ್ ಔಟ್ – ಶುಭಾ ಕೈಯಲ್ಲಿ ಗೋಲ್ಡನ್ ಪಾಸ್

Published

on

ಬಿಗ್‍ಬಾಸ್ ಮನೆಯ ವಾರಾಂತ್ಯದ ಕಾರ್ಯಕ್ರಮದಲ್ಲಿ ಈ ವಾರ ಯಾರು ಮನೆಯಿಂದ ಆಚೆ ಹೋಗುತ್ತಾರೆ ಎನ್ನುವ ಕುತೂಹೂಲ ವೀಕ್ಷಕರಿಗೆ ಇತ್ತು. ಯಾರು ಮನೆಯಿಂದ ಆಚೆ ಹೋಗುತ್ತಾರೆ ಎಂದು ವೀಕ್ಷಕರು ಅಂದುಕೊಂಡಿದ್ದರೋ ಆ ಲೆಕ್ಕಾಚಾರ ಉಲ್ಟಾ ಆಗಿದೆ.

ಮಂಜು, ದಿವ್ಯಾ, ರಾಜೀವ್, ಸಂಬರಗಿ, ವೈಷ್ಣವಿ, ರಘು ಈ ಆರು ಮಂದಿ ಮನೆಯಿಂದ ಆಚೆಹೋಗಲು ನಾಮಿನೇಷನ್ ಆಗಿದ್ದರು. ರಘು ಮನೆಯಿಂದ ಆಚೆ ಹೋಗುತ್ತಾರೆ ಎಂದು ಕೊಳ್ಳುವಷ್ಟರಲ್ಲಿ ಅವರು ಮನೆಯ ಕ್ಯಾಪ್ಟನ್ ಆಗುವ ಮೂಲಕವಾಗಿ ಸೇಫ್ ಜೋನ್‍ನಲ್ಲಿ ಇದ್ದರು. ನಂತರ ಎಲ್ಲರ ದೃಷ್ಟಿ ಸಂಬರಗಿ ಮೇಲೆ ಇತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು.

ವೀಕ್ಷಕರ ಮತ್ತು ಸ್ಪರ್ಧಿಗಳ ಊಹೆ ತಪ್ಪಾಗಿದೆ. ರಾಜೀವ್ ಮನೆಯಿಂದ ಹೊರ ಹೋಗಿದ್ದಾರೆ. ಈ ವೇಳೆ ತಮಗೆ ಸಿಕ್ಕಿದ್ದ ಗೋಲ್ಡನ್ ಪಾಸ್ ಅನ್ನು ಶುಭಾ ಅವರಿಗೆ ರಾಜೀವ್ ನೀಡಿದ್ದಾರೆ.

ಕಳೆದ ವಾರ ಸುದೀಪ್ ವಿಕೇಂಡ್ ಎಪಿಸೋಡ್‍ನಿಂದ ದೂರ ಉಳಿದಿದ್ದರು. ಕಳೆದವಾರ ಬಿಗ್‍ಬಾಸ್ ಮನೆಯಲ್ಲಿ ಎಂದಿನಂತೆ ಎಲಿಮಿನೇಷನ್ ಪ್ರಕ್ರಿಯೆ ನಡೆದು ಒಬ್ಬ ಸ್ಪರ್ಧಿ ಹೊರಹೋಗಿದ್ದರು. ಈ ವಾರ ಮತ್ತೆ ಎಲಿಮಿನೇಷನ್ ಪ್ರಕ್ರಿಯೆ ನಡೆಯಲ್ಲಿ ರಾಜೀವ್ ಮನೆಗೆ ಹೋಗಿದ್ದಾರೆ. ರಾಜೀವ್ ಮನೆಯಿಂದ ಹೊರ ಹೋಗಿದ್ದಾರಾ? ಅಥವಾ ಸೀಕ್ರೀಟ್ ರೂಮಿನಲ್ಲಿದ್ದಾರಾ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

Click to comment

Leave a Reply

Your email address will not be published. Required fields are marked *