Connect with us

Cinema

ಬಿಗ್ ಮನೆಯ ಇಬ್ಬರು ರಾಣಿಯರಿಗೆ ರಾಜನಾದ ವಿಶ್ವನಾಥ್

Published

on

ಬಿಗ್ ಬಾಸ್ ಮನೆ ಅಂಗಳದಲ್ಲಿ ರಾಜನ ದರ್ಬಾರ್ ಶುರುವಾಗಿದೆ. ಮನೆಯ ಕಿರಿಯ ಸದಸ್ಯ ವಿಶ್ವನಾಥ್ ಕ್ಯಾಪ್ಟನ್ ಆಗಿ ಮಿಂಚುತ್ತಿರುವ ಟೈಮ್ ನಲ್ಲಿಯೇ ರಾಜನಾಗುವ ಸದವಕಾಶವೊಂದು ಸಿಕ್ಕಿದೆ. ಒಂಟಿ ಮನೆಯ ರಾಜನಾದ ವಿಶ್ವನಾಥ್ ಗೆ ಇಬ್ಬರು ರಾಣಿಯರು. ನೆನಪಿರಲಿ ಮನೆಯ ಯಾವ ಸದಸ್ಯ ರಾಜನ ಮಾತು ಮೀರುವಂತಿಲ್ಲ. ಒಂದ್ ವೇಳೆ ಅದನ್ನು ಬ್ರೇಕ್ ಮಾಡಿದ್ರೆ ಶಿಕ್ಷೆ ತಪ್ಪಿದ್ದಲ್ಲ.

ಬಿಗ್ ಬಾಸ್ ನಿನ್ನೆ ವಿಶೇಷ ಚಟುವಟಿಕೆಯೊಂದನ್ನು ನೀಡಿದ್ದರು. ಕ್ಯಾಪ್ಟನ್ ಆಗಿರುವ ವಿಶ್ವನಾಥ್ ಒಂದು ದಿನ ರಾಜನಾಗಿರುತ್ತಾರೆ. ಅವರಿಗೆ ಇಬ್ಬರು ರಾಣಿಯರು ಇರ್ತಾರೆ. ಆ ಇಬ್ಬರು ರಾಣಿಯರು ತಮ್ಮ ಕಾರ್ಯ ವೈಖರಿ ಮೂಲಕ ರಾಜನನ್ನು ಮೆಚ್ಚಿಸಿಬೇಕು. ಬಿಗ್ ಬಾಸ್ ಕೇಳಿದಾಗ ರಾಜ ಉತ್ತಮರಾಣಿ ಯಾರೆಂದು ತಿಳಿಸಬೇಕು. ಮಿಕ್ಕ ಮನೆಯ ಸದಸ್ಯರು ರಾಜನ ಮಾತು ಪಾಲಿಸಬೇಕು.

ಅದರಂತೆ ವಿಶ್ವನಾಥ್ ಬಿಗ್‍ಬಾಸ್ ಮನೆಯ ಹುಡ್ಗಿಯರ ಪೈಕಿ ಯಾರನ್ನಾದ್ರೂ ಇಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು. ಆಗ ವಿಶ್ವನಾಥ್, ನಿಧಿ ಸುಬ್ಬಯ್ಯ ಹಾಗೂ ವೈಷ್ಣವಿ ಗೌಡ ಅವರನ್ನು ಆಯ್ಕೆ ಮಾಡಿಕೊಂಡರು. ಆಗ ರಾಜೀವ್ ರೋಗಿ ಬಯಸಿದ್ದು ಹಾಲು ಅನ್ನ ಡಾಕ್ಟರ್ ಹೇಳಿದ್ದು ಹಾಲು ಅನ್ನ ಎಂದು ಜೋರಾಗಿ ಹೇಳಿ ನಕ್ಕಾಗ ಮನೆಯವರು ಬಿದ್ದು ಬಿದ್ದು ನಕ್ಕರು.

ನಿಧಿ ಹಾಗೂ ವೈಷ್ಣವಿ ರಾಣಿಯರಾದ ಬಳಿಕ ಉಳಿದ ಸದಸ್ಯರಿಗೂ ರಾಜ ವಿಶ್ವನಾಥ್ ಪಾತ್ರ ಹಂಚಿಕೆ ಮಾಡಿದರು. ಲ್ಯಾಗ್ ಮಂಜು ರಾಜನ ಸಲಹೆಗಾರನಾಗಿ, ಪ್ರಶಾಂತ್ ಸಂಬರ್ಗಿ ಹಾಗೂ ಶಂಕರ್ ಅಶ್ವತ್ಥ್ ಅವರನ್ನು ವಿದೂಷಕರಾಗಿ, ನರ್ತಕಿಯರನ್ನಾಗಿ ರಾಜೀವ್ ಹಾಗೂ ರಘು ಆಯ್ಕೆ ಮಾಡಿಕೊಂಡ್ರೆ ಅರವಿಂದ್ ಗೆ ರಾಣಿಯರ ದಾಸನ ಪಾತ್ರ ನೀಡಲಾಯಿತು.

ಈ ವೇಳೆ ಪ್ರಜೆಗಳನ್ನು ನಗಿಸುವ ಕೆಲಸವನ್ನು ವಿದೂಷಕರಾದ ಪ್ರಶಾಂತ್ ಸಂಬರ್ಗಿ ಮಾಡಬೇಕು. ಆಗ ಪ್ರಶಾಂತ್ ಜೋಕ್ ಹೇಳಲು ಬರದೇ ಇದ್ದಾಗ ಮನೆಯವರು ಎಲ್ಲಾ ಸೇರಿ ಕಾಲೆಳೆಯುತ್ತಾರೆ. ಒಟ್ನಲ್ಲಿ ಅದೃಷ್ಟ ಅಂದ್ರೆ ಇದೇ ಇರಬೇಕು. ವಿಶ್ವನಾಥ್ ಗೆ ಕ್ಯಾಪ್ಟನ್ ಜೊತೆಗೆ ರಾಜನಾಗುವ ಅವಕಾಶ ದಕ್ಕಿದೆ. ಮನೆಯ ಇಬ್ಬರು ರಾಣಿಯರ ಸೇವೆಯೊಂದಿಗೆ, ಉಳಿದ ಕಂಟೆಸ್ಟೆಂಟ್ ಗೆ ಆಜ್ಞೆ ನೀಡುವ ವಿಶೇಷ ಅಧಿಕಾರವನ್ನು ವಿಶ್ವನಾಥ್ ಸರಿಯಾಗಿಯೇ ಬಳಸಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *