Connect with us

Bengaluru City

ಶಮಂತ್ ಬದಲು ವೈಜಯಂತಿ ಮನೆಯಿಂದ ಹೊರಕ್ಕೆ- ಕಿಚ್ಚನ ಖಡಕ್ ಎಚ್ಚರಿಕೆ

Published

on

ಬೆಂಗಳೂರು: ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದ ವೈಜಯಂತಿ ಅಡಿಗ ಈ ವಾರ ಎಲಿಮಿನೇಟ್ ಆಗಿದ್ದು, ಈ ಮೂಲಕ ಶಮಂತ್ ಸೇವ್ ಆಗಿದ್ದಾರೆ.

ಕೇವಲ ನಾಲ್ಕೇ ದಿನಕ್ಕೆ ವೈಜಯಂತಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿರುವುದು ಅಚ್ಚರಿ ಮೂಡಿಸಿದ್ದು, ಇನ್ನೂ ಆಶ್ಚರ್ಯವೆಂಬಂತೆ ವೈಜಯಂತಿ ಈ ವಾರ ಮನೆಯಿಂದ ಎಲಿಮಿನೇಟ್ ಆಗಲು ನಾಮಿನೇಟ್ ಸಹ ಆಗಿರಲಿಲ್ಲ. ಹೀಗಿರುವಾಗ ತಾವೇ ಮನೆಯಿಂದ ಹೊರ ಬರುವ ನಿರ್ಧಾರವನ್ನು ವೈಜಯಂತಿ ಮಾಡಿದ್ದಾರೆ ಇದರಿಂದ ಶಮಂತ್ ಸೇವ್ ಆಗಿದ್ದಾರೆ. ಆದರೆ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಕೇವಲ ನಾಲ್ಕೇ ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದ ವೈಜಯಂತಿ ಅಡಿಗ, ಬಿಗ್ ಬಾಸ್ ಮನೆಯಲ್ಲಿ ಇರಲು ಆಗುತ್ತಿಲ್ಲ, ತುಂಬಾ ಕಷ್ಟ ಪಡುತ್ತಿದ್ದೇನೆ ಎಂದು ಸ್ಪರ್ಧಿಗಳ ಬಳಿ ಹೇಳಿಕೊಂಡಿದ್ದರು. ಇದೀಗ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೋಗುತ್ತಿರುವುದು ಅಚ್ಚರಿ ಮೂಡಿಸಿದೆ.

ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ಈ ರೀತಿಯ ಘಟನೆ ನಡೆದಿಲ್ಲ. ಇದೇ ಮೊದಲ ಬಾರಿಗೆ ಹೀಗೆ ಆಗಿದೆ ಎಂದು ಕಿಚ್ಚ ಸುದೀಪ್ ವಿವರಿಸಿದರು. ಮೊದಲ ವಾರ ನಾಯಕನಾಗಿದ್ದ ಶಮಂತ್‍ಗೆ ಎರಡನೇ ವಾರವೂ ನಾಯಕನ ಪಟ್ಟ ಒಲಿದಿತ್ತು. ಬಳಿಕ ಶಮಂತ್ ಗಾಗಿ ಇಡೀ ಮನೆಯವರು ಬೆಡ್ ರೂಮ್ ಬಿಟ್ಟುಕೊಟ್ಟಿದ್ದರು. ಆ ವಾರ ಮನೆಯವರು ಹೊರಗೆ ನಿದ್ದೆ ಮಾಡಿದರೆ, ಶಮಂತ್ ಕಳಪೆ ಬೋರ್ಡ್ ಹಾಕಿಕೊಂಡು ಜೈಲಿನಲ್ಲಿ ಮಲಗಿದ್ದರು.

ಇದೆಲ್ಲವನ್ನು ಗಮನಿಸಿದರೆ ಶಮಂತ್‍ಗೆ ಒಂದಾದ ಮೇಲೊಂದು ಅದೃಷ್ಟ ಒಲಿದು ಬಂದಂತಾಗಿದ್ದು, ಮನೆಯಲ್ಲೂ ಇದೇ ರೀತಿಯ ಮಾತುಕತೆ ನಡೆದಿದೆ. ಈ ರೇಸ್‍ಗೆ ಸರಿಯಾದ ವ್ಯಕ್ತಿ ನಾನಲ್ಲ ಎಂಬ ಕಾರಣಕ್ಕೆ ವೈಜಯಂತಿ ಅಡಿಗ ಮನೆಯಿಂದ ಹೊರ ನಡೆದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಕಿಚ್ಚ ಸಲಹೆ ನೀಡಿ, ಒಬ್ಬರ ಅವಕಾಶವನ್ನು ಕಸಿದುಕೊಂಡಿದ್ದೀರಿ, ಮುಂದೆ ಯಾವ ಸಂದರ್ಭದಲ್ಲಿಯೂ ಹೀಗೆ ಮಾಡಬೇಡಿ ಎಂದರು. ವೈಜಯಂತಿಯವರು ರಾಜ್ ಬಿ.ಶೆಟ್ಟಿ ಅಭಿನಯದ ಅಮ್ಮಚ್ಚಿ ಎಂಬ ನೆನಪು ಸಿನಿಮಾದಲ್ಲಿ ನಟಿಸಿದ್ದಾರೆ.

Click to comment

Leave a Reply

Your email address will not be published. Required fields are marked *