Connect with us

ನಿನ್ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ

ನಿನ್ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ

ಬಿಗ್ ಬಾಸ್ ಮನೆಯಲ್ಲಿ ಬರೀ ಜೋಡಿಯದ್ದೇ ಮಾತು. ಅರವಿಂದ್ ಹಾಗೂ ದಿವ್ಯಾ ಉರುಡುಗ ಒಂದು ಕಡೆಯಾದರೆ, ಮಂಜು ಹಾಗೂ ದಿವ್ಯಾ ಸುರೇಶ್ ಅವರದ್ದೇ ಮತ್ತೊಂದು ಜೋಡಿ. ಇದನ್ನು ಕಂಡು ಶಮಂತ್‍ಗೆ ಮಾತ್ರ ಸಖತ್ ಹೊಟ್ಟೆ ಉರಿ. ನನಗೂ ಯಾರೂ ಜೋಡಿ ಆಗುತ್ತಿಲ್ಲವಲ್ಲ ಎಂಬ ಕೊರಗು. ಇದನ್ನು ಹಲವು ಬಾರಿ ದಿವ್ಯಾ ಉರುಡುಗ ಬಳಿ ಹೇಳಿಕೊಂಡಿದ್ದಾರೆ ಸಹ. ಆದರೆ ಇದೀಗ ಜೋಡಿಯಾಗುವ ಸೂಚನೆಯನ್ನು ನೀಡಿದ್ದಾರೆ, ಇದಕ್ಕೆ ಸ್ವತಃ ಚಕ್ರವರ್ತಿ ಅವರು ಆರಂಭ ಹಾಡಿದ್ದಾರೆ.

ಹೌದು ಶಮಂತ್ ಹಾಗೂ ಪ್ರಿಯಾಂಕಾ ವಿಚಾರದಲ್ಲಿ ಚಕ್ರವರ್ತಿ ಮಾತನಾಡಿದ್ದು, ಇಬ್ಬರ ನಡುವಿನ ಕುರಿತು ವಿರಸದ ಬಗ್ಗೆ ಮಾತನಾಡುವಾಗ ಲವ್ ವಿಷಯವನ್ನೂ ತಿಳಿಸಿದ್ದಾರೆ. ಆಟವಾಡಿಕೊಂಡು, ತಿನ್ಕೊಂಡು ಇದ್ರೆ ಬಿಗ್ ಬಾಸ್ ಬೇಗ ಮನೆಯಿಂದ ಆಚೆ ಕಳುಹಿಸುತ್ತಾರೆ ಎಂದೆ ಅದ್ಕೆ ಪ್ರಿಯಾಂಕಾ ಬೇಜಾರಾಗಿದ್ದಾರೆ ಎಂದು ಶಮಂತ್ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ಅವರು, ನೀನು ಆಟವಾಡಿಕೊಂಡು, ತಿನ್ಕೊಂದು ಇರೋದು ನೀನು, ಆ ಹಡುಗಿಗೆ ಯಾಕೆ ಹೇಳ್ತಿಯಾ ಎಂದು ಕೇಳಿದ್ದಾರೆ.

ಇಷ್ಟೆಲ್ಲಾ ಆದ್ರೂ ನಗ್ತಿದಾರೆ ಅಂದ್ರೆ ಪ್ರಿಯಾಂಕಾಗೆ ನಿನ್ನ ಮೇಲೆ ಲವ್ ಇದೆ ಎಂದು ಚಕ್ರವರ್ತಿ ಹೇಳಿದ್ದು, ಇದಕ್ಕೆ ಪ್ರಶಾಂತ್ ಸಂಬರಗಿ ಸಹ ಸಾಥ್ ನೀಡಿ, ಪ್ರೀತಿ ಇದೆ ಇಬ್ಬರೂ ಹಂಚಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ. ಪ್ರಿಯಾಂಕಾಗೆ ಶಮಂತ್ ಬಗ್ಗೆ ಅಫೆಕ್ಷನ್ ಇದೆ, ಅವರ ಬಾಡಿ ಲಾಂಗ್ವೇಜ್, ನಗೆ, ಮಾತನಾಡುವುದು, ಕಾಮಿಡಿ ಮಾಡುವುದು ಎಲ್ಲವನ್ನೂ ನೋಡಿದರೆ ಇವರಿಬ್ಬರ ಮಧ್ಯೆ ಲವ್ ಇದೆ ಅನ್ನಿಸುತ್ತಿದೆ ಎಂದು ಮಾತನಾಡಿಕೊಂಡಿದ್ದಾರೆ.

ಅಲ್ಲದೆ ನಿನಗೆ ಅವನ ಬಗ್ಗೆ ಅಫೆಕ್ಷನ್ ಇಲ್ವೇನಮ್ಮ ನಿಜ ಹೇಳು ಎಂದು ಚಕ್ರವರ್ತಿ ನೇರವಾಗಿ ಪ್ರಿಯಾಂಕಾಗೆ ಕೇಳುತ್ತಾರೆ. ನಾನು ಮನೋಶಾಸ್ತ್ರಜ್ಞ, ಬಾಡಿ ಲಾಂಗ್ವೇಜ್, ಕಣ್ಣುಗಳನ್ನು ನೋಡಿದರೆ ಗೊತ್ತಾಗಿ ಬಿಡುತ್ತೆ. ಒಂದೇ ಟೀಮ್‍ನಲ್ಲಿದ್ದು ನಮ್ಮನ್ನು ಯಾಕೆ ಹೀಗೆ ಸಾಯಿಸುತ್ತೀರಿ, ನಿರ್ಧಾರ ಮಾಡಿ ಎಂದಿದ್ದಾರೆ. ಅಲ್ಲದೆ ಪ್ರಿಯಾಂಕಾ ಹಾರ್ಟ್ ಸಿಂಬಾಲ್ ಮಾಡಿದ್ದಕ್ಕೆ ಅದು ನಿನಗೇ ಮಾಡಿದ್ದು ಎಂದು ಚಕ್ರವರ್ತಿ ಶಮಂತ್‍ಗೆ ಹೇಳುತ್ತಾರೆ.

ಅದೇನು ಸಮಾಧಾನ ಮಾಡಿಕೊಂಡು ಮನವೊಲಿಸಿಕೊಳ್ಳಿ ಎನ್ನುತ್ತಾರೆ, ಆಗ ಶಮಂತ್ ಬೈಯಿಸಿಕೊಂಡು ನಾನೇ ಸಮಾಧಾನ ಮಾಡಲೇ ಎಂದು ಪ್ರಶ್ನಿಸುತ್ತಾರೆ. ಒಂದು ಹುಡುಗಿ ನಿನಗಾಗಿ ಲವ್ ಸಿಂಬಲ್ ಮಾಡಿದೆ ಎಂದರೆ ಇದಕ್ಕಿಂತ ಹಿಂಟ್ ಕೊಡಲು ಸಾಧ್ಯವಿಲ್ಲ. ನಾನು, ಪ್ರಶಾಂತ್ ಸೇರಿ ಮದುವೆ ಮಾಡಿಸುತ್ತೇವೆ ತಲೆ ಕೆಡಿಸಿಕೊಳ್ಳಬೇಡಿ. ನಿನ್ನ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ ಎಂದು ಶಮಂತ್‍ಗೆ ಚಕ್ರವರ್ತಿ ಹೇಳುತ್ತಾರೆ.

ಇಷ್ಟಕ್ಕೆ ಸುಮ್ಮನಾಗದ ಚಕ್ರವರ್ತಿ ಅವರು, ಪ್ರಿಯಾಂಕಾಗೆ ಕಂಗ್ರಾಟ್ಸ್ ಹೇಳುತ್ತಾರೆ, ಆಗ ಪ್ರಿಯಾಂಕಾ ಯಾವ ಖುಷಿಗೆ ಎನ್ನುತ್ತಾರೆ. ತೀರ್ಮಾನ ಮಾಡಿದೆಯಲ್ಲ ಅದ್ಕೆ ಎಂದು ಚಕ್ರವರ್ತಿ ಹೇಳುತ್ತಾರೆ. ಆಗ ನಾಚಿದ ಪ್ರಿಯಾಂಕ ತಗ್ದು ಬಿಟ್ಟಾ ಅಂದ್ರೆ, ಹುಚ್ಚಾ ನಿಮಗೆ, ಕಾಮನ್ ಸೆನ್ಸ್ ಇಲ್ವಾ ಎಂದು ಕಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಮಂತ್ ಒಳ್ಳೆ ಹುಡುಗ ಕಣಮ್ಮ ಎಂದು ಪ್ರಿಯಾಂಕಾಗೆ ಹೇಳುತ್ತಾರೆ ಚಕ್ರವರ್ತಿ, ನಾನು ಅವನಿಗೆ ಕನ್ವೆನ್ಸ್ ಮಾಡುತ್ತೇನೆ ನೀನು ಮುಂದುವರಿ ಎಂದು ಮತ್ತೆ ಪ್ರಿಯಾಂಕಾಗೆ ಹೇಳುತ್ತಾರೆ.

ಯಾಕೆ ನಾವು ಹೊರಗಡೆ ಹೋಗೋಕೆ ಆಸೆನಾ ನಿಮಗೆ, ನಾವಿಬ್ರೂ ಹೊಡೆದಾಡಿಕೊಂಡು ರಕ್ತ ಬರಿಸಿಕೊಂಡ್ರೆ ಹೊರಗಡೆ ಕಳುಹಿಸುತ್ತಾರೆ ಎಂದು ಪ್ರಿಯಾಂಕಾ ಸಿಟ್ಟಾಗುತ್ತಾರೆ. ಸೆನ್ಸ್ ಇಲ್ವಾ ನಿಮಗೆ, ಏನ್ ತಮಾಷೆ ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಚೆನ್ನಾಗಿ ಆಟ ಆಡ್ತಿಲ್ಲ, 500 ರೂ. ಕಳೆದುಕೊಂಡಿದ್ದೀರಿ ಎಂದು ಚಕ್ರವರ್ತಿ ವಿರುದ್ಧ ಪ್ರಿಯಾಂಕಾ ರೇಗಾಡುತ್ತಾರೆ. ಆದರೂ ನಿನ್ ಜೀವನ ಅಲ್ವೇನಮ್ಮ ಎಂದು ಚಕ್ರವರ್ತಿ ಹೇಳುತ್ತಾರೆ, ನನ್ನ ಜೀವನ ಹಾಳಾಗಿ ಹೋಗಲಿ, ನೀವ್ಯಾರು ನನಗೆ ಕೇರ್ ಮಾಡೋಕೆ, ನನಗೆ ನಮ್ಮ ಮನೆಯಲ್ಲಿ ಇದ್ದಾರೆ. ಈ ತರ ಕೇರ್ ಮಾಡೋಕೆ ನೀವ್ಯಾರು, ಎಷ್ಟು ತಾಕತ್ ನಿಮಗೆ? ಎಂದು ರೇಗಾಡುತ್ತಾರೆ. ಇಲ್ವಾ, ತಮಾಷೆ ಮಾಡಿದ್ದಾ? ನಾನು ಸೀರಿಯಸ್ಸಾಗಿ ತಿಳಿದುಕೊಂಡೆ ಎಂದು ಚಕ್ರವರ್ತಿ ಹೇಳುತ್ತಾರೆ. ಇದನ್ನೇ ಶುಭ ಪೂಂಜಾ ಅಣಗಿಸಿ, ರಂಜಿಸಿದ್ದಾರೆ.

ಬಳಿಕ ಶಮಂತ್ ಬಳಿ ಬಂದು, ನಾನ್ ಮಾತಾಡಿದಿನಿ ಬಾ ಮಗ ಫುಲ್ ಸೆಟ್ಲ್ ಮೆಂಟ್ ಮಾಡಿದಿನಿ. ಎಲ್ಲಾ ಸರಿ ಮಾಡಿದೆ, ಒಕೆ ಅಂತೆ ಬಾ, 735 ಮದುವೆ ಮಾಡಿಸಿದ್ದೇನೆ ಇದು 736ನೇಯದ್ದು. ಲವ್ ಮ್ಯಾರೇಜ್, ಓಡೋಗಿರೋ ಮ್ಯಾರೇಜ್ 735 ಮಾಡ್ಸಿದಿನಿ, ಇವನದ್ದು 736ನೇಯದ್ದು. ವಧುವಿನ ಕಡೆಯಿಂದ ಒಕೆ ಆಗಿದೆ, ವರನದ್ದೇ ಸಮಸ್ಯೆ ಎಂದು ಹೇಳುತ್ತಾರೆ. ಬೆಳಗ್ಗೆ ನಾನು ರಿಸಲ್ಟ್ ಹೇಳಬೇಕು ಬಾರಪ್ಪ ಸಪರೇಟ್ ಆಗಿ ಮಾತನಾಡೋಣ, ನೀನು ನನ್ನ ಪುಟ್ಟ ತಮ್ಮ ಬಾರೋ ಎಂದು ಶಮಂತ್‍ಗೆ ಚಕ್ರವರ್ತಿ ಕರೆದಿದ್ದಾರೆ. ನಾನು ಈ ರೂಟಲ್ಲಿ ಹೋಗಬೇಕಾ ಬೇಡವೇ ಎಂಬ ಕನ್ಫ್ಯೂಶನ್‍ನಲ್ಲೇ ಇದ್ದೇ, ಈಗ ರೂಟ್ ಕ್ಲಿಯರ್ ಆಯ್ತು ಎಂದು ಕೊನೆಯದಾಗಿ ಮನೆ ಮಂದಿಗೆ ಚಕ್ರವರ್ತಿ ಹೇಳಿದ್ದಾರೆ.

 

Advertisement
Advertisement