Connect with us

ವಯಸ್ಸಾಗಿದೆ ಫ್ಲರ್ಟ್ ಮಾಡ್ಬಾರ್ದು- ಸಂಬರಗಿ, ಅರವಿಂದ್ ಗುಸುಗುಸು

ವಯಸ್ಸಾಗಿದೆ ಫ್ಲರ್ಟ್ ಮಾಡ್ಬಾರ್ದು- ಸಂಬರಗಿ, ಅರವಿಂದ್ ಗುಸುಗುಸು

ಯಾವಾಗಲೂ ಒಬ್ಬರಿಗೊಬ್ಬರು ಜಗಳವಾಡುತ್ತಿದ್ದ ಅರವಿಂದ್ ಹಾಗೂ ಪ್ರಶಾಂತ್ ಸಂಬರಗಿ ಇದೀಗ ಒಟ್ಟಿಗೆ ಕೂತು ಗುಸು ಗುಸು ಮಾತನಾಡಿದ್ದು, ಅದೂ ಸಹ ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ವಿಚಾರದ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ.

ಚಕ್ರವರ್ತಿಯವರು ಪ್ರಿಯಾಂಕಾ ಜೊತೆ ಹೆಚ್ಚು ಮಾತನಾಡುವುದು ತಿಳಿದೇ ಇದೆ. ಆದರೆ ಪ್ರಿಯಾಂಕಾ ಚಕ್ರವರ್ತಿ ಅವರ ಜೊತೆ ಮಾತನಾಡಲು ಹಿಂಜರಿಗೆ ಇರುವುದು ಸಹ ಗೊತ್ತಿರುವ ವಿಚಾರ. ಈ ಬಗ್ಗೆ ಇದೀಗ ಗಾರ್ಡನ್ ಏರಿಯಾದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಅರವಿಂದ್ ಒಟ್ಟಿಗೆ ಕೂತು ಮಾತನಾಡಿದ್ದಾರೆ. ಹುಡುಗಿಯರಿಗೆ ನೀವು ದೇವತೆ, ಹಾಗೇ ಹೀಗೆ ಎಂದು ಮಾತನಾಡುತ್ತಾರೆ. ಆ ರೀತಿ ಮಾತನಾಡಬೇಡ ನಾಟಕೀಯವಾಗುತ್ತೆ ಎಂದು ಹಲವು ಬಾರಿ ಅವರಿಗೆ ತಿಳಿ ಹೇಳಿದ್ದೇನೆ. ತುಂಬಾ ನಾಟಕೀಯ ಎಂದು ಚಕ್ರವರ್ತಿ ಹೆಸರು ಪ್ರಸ್ತಾಪಿಸದೇ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ನಾನು ಊಟ ಬಡಿಸುವವರೆಗೆ ಊಟ ಮಾಡಬೇಡಿ, ನೀನು ಕಾಫಿ ಮಾಡಿಕೊಟ್ಟರೆ ದೇವತೆ ಮಾಡಿ ಕೊಟ್ಟಂಗಿರುತ್ತೆ ಮಾಡಿಕೊಡು ಎನ್ನುವುದು, ದೇವಲೋಕದಲ್ಲಿ ಯಾರಾದರೂ ತಂಗಿ ಇದ್ದರೆ ನಿನ್ನಂತೆ ಇರಲಿ ಎಂದು ವೈಷ್ಣವಿಗೆ ಹೇಳುವುದು ಸರಿಯಲ್ಲ. ಒಂದು ಸಾರಿ ಆದರೆ ಓಕೆ ಪ್ರತಿ ಬಾರಿ ಹೀಗೆ ಹೇಳಿದೆ ಒಳ್ಳೆಯದಲ್ಲ, ಹೀಗೆ ಮಾಡಬೇಡ, ಅತಿಯಾಗಿ ಕಾಣುತ್ತೆ, ಫೇಕ್ ಆಗಿ ಕಾಣುತ್ತೆ, ನಮ್ಮ ವಯಸ್ಸಿಗೆ ಅದು ಸರಿ ಕಾಣುವುದಿಲ್ಲ ಎಂದು ಪಬ್ಲಿಕ್‍ನಲ್ಲೂ ಹೇಳಿದ್ದೇನೆ, ಪ್ರೈವೇಟ್ ಆಗಿಯೂ ಹೇಳಿದ್ದೇನೆ ಎಂದು ಸಂಬರಗಿ ಹೇಳಿದ್ದಾರೆ.

ಪ್ರಿಯಾಂಕಾ ಜೊತೆ ಫ್ಲರ್ಟ್ ಮಾಡಬೇಡ, ಸರಿ ಕಾಣುವುದಿಲ್ಲ, ಆ ಕಡೆಯಿಂದ ಅವಳು ಫ್ಲರ್ಟ್ ಮಾಡಿದರೆ ನೀನು ಫ್ಲರ್ಟ್ ಮಾಡು, ಫೋರ್ಸ್ ಮಾಡಬಾರದು. ಹಾಗೆ ಫ್ಲರ್ಟ್ ಮಾಡುವ ಅವಶ್ಯಕತೆ ಇಲ್ಲ ಬಾಸ್ ಎಂದು ಅರವಿಂದ್ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅರವಿಂದ್, ಅವಶ್ಯಕತೆ ಅಂತಲ್ಲ, ಮಾಡಬಾರದು ಎಂದಿದ್ದಾರೆ.