Connect with us

ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಆಸ್ಪತ್ರೆಗೆ ದಾಖಲು- ಅರವಿಂದ್ ಶಾಕ್

ಇದ್ದಕ್ಕಿದ್ದಂತೆ ದಿವ್ಯಾ ಉರುಡುಗ ಆಸ್ಪತ್ರೆಗೆ ದಾಖಲು- ಅರವಿಂದ್ ಶಾಕ್

ದಿವ್ಯಾ ಉರುಡುಗ ಅವರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಮನೆಮಂದಿಗೆಲ್ಲ ಅಚ್ಚರಿ ಮೂಡಿಸಿತ್ತು. ಆದರೆ ಕಾಣೆಯಾದರು ಎಂಬುದನ್ನು ಬಿಗ್ ಬಾಸ್ ರಾತ್ರಿ ವೇಳೆ ತಿಳಿಸಿದ್ದು, ಸುದ್ದಿ ಕೇಳಿದ ಅರವಿಂದ್ ಫುಲ್ ಶಾಕ್ ಆಗಿದ್ದಾರೆ. ಜೊತೆಗೆ ಮನೆ ಮಂದಿ ಸಹ ಬೇಸರ ವ್ಯಕ್ತಪಡಿಸಿದ್ದಾರೆ.

ದಿವ್ಯಾ ಉರುಡುಗ ಅವರಿಗೆ ಆರೋಗ್ಯ ಸಮಸ್ಯೆ ಇರುವುದು ಹೊಸದೇನಲ್ಲ. ಆಗಾಗ ಚೆಕಪ್ ಸಹ ಮಾಡಿಸುತ್ತಿದ್ದರು. ಆದರೆ ಇದೀಗ ಇದ್ದಕ್ಕಿಂತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಮನೆ ಮಂದಿಗೆಲ್ಲ ಅಚ್ಚರಿ ಹಾಗೂ ಬೇಸರಕ್ಕೆ ಒಳಗಾಗಿದ್ದಾರೆ.

ದಿವ್ಯಾ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕೆಂದು ವೈದ್ಯರು ಸೂಚಿಸಿದ್ದರಿಂದ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ, ಅವರು ಕ್ಷೇಮವಾಗಿದ್ದಾರೆ ಎಂದು ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆ ತಿಳಿಸುತ್ತಾರೆ. ಇದನ್ನು ಹೇಳುತ್ತಿದ್ದಂತೆ ಅರವಿಂದ್ ಸ್ವಲ್ಪ ಭಾವುಕರಾಗಿದ್ದಾರೆ. ಬಳಿಕ ಬಿಗ್ ಬಾಸ್ ವಾಯ್ಸ್ ಕೇಳಿಸಿದ್ದು, ಸ್ಕ್ಯಾನಿಂಗ್ ಬಳಿಕ ಯೂರಿನರಿ ಇನ್‍ಫೆಕ್ಷನ್ ಕಂಡು ಬಂದಿರುವುದರಿಂದ ದಿವ್ಯಾ ಉರುಡುಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ.

ಹೀಗೆ ಹೇಳುತ್ತಿದ್ದಂತೆ ಮನೆಯ ಸದಸ್ಯರು ಅವರು ಹುಶಾರಾಗುತ್ತಾರೆ ಎಂದು ಅರವಿಂದ್‍ಗೆ ಹೇಳುತ್ತಾರೆ. ಆಗ ಅರವಿಂದ್ ಭಾವುಕರಾಗಿಯೇ ಯಾ ಯಾ ಎಂದು ಹೇಳುತ್ತಾರೆ. ಅಲ್ಲದೆ ಇಲ್ಲಿಗಿಂತ ಅಲ್ಲಿ ಚೆನ್ನಾಗಿರುತ್ತಾಳೆ ಎಂದು ಹೇಳುತ್ತಾರೆ. ದಿವ್ಯಾ ಉರುಡುಗ ಅವರು ಯಾವಾಗ ಮನೆ ಬಿಟ್ಟು ಹೊರ ಹೋದರು ಎಂಬುದನ್ನು ಸಹ ತೋರಿಸಲಾಗಿಲ್ಲ. ಆದರೆ ಸ್ಕ್ಯಾನಿಂಗ್ ಮಾಡಿಸಲು ಹೋಗಿದ್ದಾರೆ ಎಂದು ಬಿಗ್ ಬಾಸ್ ಒಮ್ಮೆಲೆ ಹೇಳುತ್ತಾರೆ.

Advertisement
Advertisement