Connect with us

Bollywood

ಹೆದ್ದಾರಿಯಲ್ಲಿ ಬಿಗ್‍ಬಾಸ್ ಸ್ಪರ್ಧಿಯ ಕಾರ್ ಅಪಘಾತ – ಕ್ರೇನ್ ಬಳಸಿ ಮೇಲೆತ್ತಿದ್ರು

Published

on

– ಎದುರಿಗೆ ಬಂದ ಗಾಡಿಗೆ ಡಿಕ್ಕಿ ಹೊಡೆದು ಆಳವಾದ ಹಳ್ಳಕ್ಕೆ ಬಿದ್ದ ಕಾರ್

ಮುಂಬೈ: ಬಿಗ್‍ಬಾಸ್-14 ಸ್ಪರ್ಧಿ, ಕಿರುತೆರೆ ನಟ ನಿಶಾಂತ್ ಸಿಂಗ್ ಮಲ್ಖಾನಿ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೊಳಗಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಕಾರ್ ಆಳವಾದ ಹಳ್ಳಕ್ಕೆ ಬಿದ್ದಿತ್ತು. ಕ್ರೇನ್ ಬಳಸಿ ಕಾರ್ ಮೇಲೆತ್ತಲಾಗಿದ್ದು, ನಿಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿಯಲ್ಲಿ ರಾಂಗ್ ಸೈಡ್‍ನಿಂದ ಬಂದ ಗಾಡಿಗೆ ಡಿಕ್ಕಿ ಹೊಡೆದ ಕಾರ್ ಹೆದ್ದಾರಿಯ ಪಕ್ಕದ ಆಳವಾದ ಹಳ್ಳಕ್ಕೆ ಬಿದ್ದಿದೆ.

ಜೈಪುರದ ಮಾಧ್ಯಮಗಳ ಜೊತೆ ಮಾತನಾಡಿರುವ ನಿಶಾಂತ್, ಯಾರು ಭಯಪಡುವ ಅವಶ್ಯಕತೆ ಇಲ್ಲ. ಸಣ್ಣ ಗಾಯಗಳಾಗಿದ್ದು, ಸುರಕ್ಷಿತನಾಗಿದ್ದೇನೆ. ಆದ್ರೆ ನನ್ನ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ನನಗೇನೂ ಆಗಿಲ್ಲ. ತಾಯಿಯ ಆಶೀರ್ವಾದ ಮತ್ತು ದೇವರ ದಯೆಯಿಂದ ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.

ಕಾರ್ ನಾನೇ ಚಲಾಯಿಸುತ್ತಿದ್ದೆ. ದಿಡೀರ್ ಆಗಿ ಎದುರು ರಾಂಗ್ ಸೈಡ್ ನಿಂದ ವ್ಯಾನ್ ಬರೋದು ಕಾಣಿಸಿತು. ಅಪಘಾತದ ನಡೆದ ಸ್ಥಳದಲ್ಲಿ ರಸ್ತೆ ಸ್ವಲ್ಪ ಕಿರಿದಾಗಿದ್ದರಿಂದ ಕಾರ್ ರಸ್ತೆಯಿಂದ ಕೆಳಗಿಳಿಯಿತು. ಕಾರ್ ನಲ್ಲಿ ನನ್ನ ಜೊತೆಯಲ್ಲಿದ್ದ ಗೆಳೆಯರು ಸಹ ಅಪಾಯವಾಗಿಲ್ಲ. ಆದ್ರೆ ನಮ್ಮ ಕಾರಿಗೆ ಡಿಕ್ಕಿ ಹೊಡೆದ ಗಾಡಿ ಎಸ್ಕೇಪ್ ಆಗಿದೆ. ಆದ್ರೆ ನಾವೆಲ್ಲರೂ ಕಾರ್ ನಿಂದ ಹೊರ ಬಂದು ಹೋಟೆಲ್ ತಲುಪಿ ಪೊಲೀಸರಿಗೆ ಮಾಹಿತಿ ನೀಡಲಾಯ್ತು ಎಂದು ನಿಶಾಂತ್ ತಿಳಿಸಿದ್ದಾರೆ.

ಅಪಘಾತ ಸರಿಯಾಗಿ ಡಿಸೆಂಬರ್ 31, 2020 ರಾತ್ರಿ 11.59ಕ್ಕೆ ನಡೆದಿತ್ತು. ಹೊಸ ವರ್ಷದ ಆಚರಣೆಗೂ ಒಂದು ನಿಮಿಷ ಮುನ್ನ ನನ್ನ ಕಾರ್ ಅಪಘಾತಕ್ಕೊಳಗಾಯ್ತು. ನಾನು ಯಾವತ್ತು ರೋಡ್ ಟ್ರಿಪ್ ಕೈಗೊಂಡಿರಲಿಲ್ಲ. ಜೈಸ್ಲಮೇರ್ ನಲ್ಲಿ ಕೆಲಸ ಇತ್ತು. ಹಾಗಾಗಿ ರಸ್ತೆ ಮಾರ್ಗವಾಗಿ ತೆರಳಿ ಬರುವಾಗ ಸ್ನೇಹಿತರು ಜೊತೆ ಬಂದು ರಾಜಸ್ಥಾನದಲ್ಲಿ ಹೊಸ ವರ್ಷ ಆಚರಿಸುವ ಬಗ್ಗೆ ಪ್ಲಾನ್ ಮಾಡಿಕೊಳ್ಳಲಾಗಿತ್ತು. ನನ್ನ ಮೊದಲ ರೋಡ್ ಟ್ರಿಪ್ ಆಘಾತಕಾರಿ ಆಗಿತ್ತು ಎಂದು ನಿಶಾಂತ್ ಆತಂಕ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in