Connect with us

Cinema

3ನೇ ಪತಿಯನ್ನ ಮನೆಯಿಂದ ಹೊರ ಹಾಕಿದ ಬಿಗ್‍ಬಾಸ್ ಸ್ಪರ್ಧಿ

Published

on

– ಲಾಕ್‍ಡೌನ್‍ನಲ್ಲಿ ಮೂರನೇ ಮದ್ವೆಯಾಗಿದ್ದ ನಟಿ

ಚೆನ್ನೈ: ಲಾಕ್‍ಡೌನ್ ವೇಳೆ ಸರಳವಾಗಿ ಮಕ್ಕಳ ಸಮ್ಮುಖದಲ್ಲಿ ಮೂರನೇ ಮದುವೆಯಾಗಿದ್ದ ಬಿಗ್‍ಬಾಸ್ ಸ್ಪರ್ಧಿ, ನಟಿ, ವನಿತಾ ವಿಜಯಕುಮಾರ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿದೆ.

ಮೂರನೇ ಪತಿ ಪೀಟರ್ ಪೌಲ್ ಸದ್ಯ ಮನೆಯಲ್ಲಿಲ್ಲ ಎಂಬುದನ್ನ ಸ್ವತಃ ವನಿತಾ ಒಪ್ಪಿಕೊಂಡಿದ್ದಾರೆ. ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ತಮ್ಮ ಫೇಸ್‍ಬುಕ್ ನಲ್ಲಿ ವನಿತಾ ಪತಿಯನ್ನ ಹೊರ ಹಾಕಿರುವ ಬಗ್ಗೆ ಬರೆದುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ನಟಿ ಎಲ್ಲ ಊಹಾಪೋಹಗಳಿಗೆ ಗೊಂದಲಮಯವಾಗಿ ಸ್ಪಷ್ಟನೆ ನೀಡಿದ್ದಾರೆ.

ಮದುವೆ ಆದಾಗ ಪತಿ ಪೀಟರ್ ಓರ್ವ ಕುಡಿತದ ದಾಸ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ಸಂಸಾರ ಚೆನ್ನಾಗಿತ್ತು, ಆದ್ರೆ ಪೀಟರ್ ಮದ್ಯ ಸೇವನೆ ಮಾತ್ರ ಬಿಡಲಿಲ್ಲ. ಕುಡಿತ ದಾಸನಾಗಿದ್ದರೂ ನಾನು ಎಲ್ಲವನ್ನ ತಾಳ್ಮೆಯಿಂದ ಫೇಸ್ ಮಾಡಿದ್ದೇನೆ. ಸಮಾಜದಲ್ಲಿ ಮಕ್ಕಳ ಆರೈಕೆಗೆ ಒರ್ವ ಪುರುಷನ ಅವಶ್ಯಕತೆ ಹಿನ್ನೆಲೆ ಮೂರನೇ ಮದುವೆಯಾಗಿದ್ದೇನೆ ಎಂದು ವನಿತಾ ಹೇಳಿಕೊಂಡಿದ್ದಾರೆ.

ನಿರಂತರ ಮದ್ಯ ಸೇವನೆಯಿಂದಾಗಿ ಪೀಟರ್ ಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಒಳ್ಳೆಯ ಚಿಕಿತ್ಸೆ ನೀಡಿದ್ದರಿಂದ ಪೀಟರ್ ಗುಣಮುಖನಾಗಿ ಮನೆಗೆ ಬಂದ. ಆದ್ರೆ ಪೀಟರ್ ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಚಟದಿಂದ ಹೊರ ಬರಲೇ ಇಲ್ಲ. ಒಮ್ಮೆ ರಕ್ತ ವಾಂತಿ ಮಾಡಿಕೊಂಡಾಗಿ ಒಂದು ಐಸಿಯುನಲ್ಲಿರಿಸಿ ಚಿಕಿತ್ಸೆ ಸಹ ನೀಡಲಾಗಿತ್ತು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಬಳಿಕ ಪೀಟರ್ ಮದ್ಯಕ್ಕಾಗಿ ಜನರ ಬಳಿ ಹಣ ಕೇಳಲಾರಂಭಿಸಿದ. ಸಿನಿಮಾದ ಕೆಲ ಸಹದ್ಯೋಗಿಗಳು ಫೋನ್ ಮಾಡಿ ಏನಾಗ್ತಿದೆ ಎಂದು ಪ್ರಶ್ನಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಒತ್ತಡ ಮತ್ತು ಆರೋಪಗಳನ್ನ ಹ್ಯಾಂಡಲ್ ಮಾಡಲು ಪೀಟರ್ ನಿಂದ ಸಾಧ್ಯವಾಗಲಿಲ್ಲ.

ಒಂದು ದಿನ ಗೋವಾ ಪ್ರವಾಸಕ್ಕೆ ತೆರಳಿದಾಗ ಪೀಟರ್ ಸೋದರನ ಸಾವಿನ ಸುದ್ದಿ ಬಂತು. ಪ್ರವಾಸದಲ್ಲಿದ್ದಾಗ ಪೀಟರ್ ತುಂಬು ದುಃಖದಲ್ಲಿದ್ದರು. ಮನೆಯ ಬಗ್ಗೆ ಹೆಚ್ಚು ನೆನಪು ಮಾಡಿಕೊಳ್ಳುತ್ತಿದ್ದರು. ಹೀಗಾಗಿ ನನ್ನಿಂದ ಹಣ ಪಡೆದು ಹೋದ ಪೀಟರ್ ನನ್ನನ್ನು ಇದುವರೆಗೆ ನನ್ನ ಸಂಪರ್ಕಿಸಿಲ್ಲ ಎಂದು ಮಾತ್ರ ಹೇಳಿದ್ದಾರೆ.

ನಟಿ ವನಿತಾ ವಿಜಯಕುಮಾರ್ ವಿಎಫ್‍ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಮೂರನೇ ಮದುವೆಯಾಗಿದ್ದರು. ಜೂನ್ 27ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ವಿವಾಹವಾಗಿದ್ದರು. ಚೆನ್ನೈನಲ್ಲಿ ಇವರ ವಿವಾಹ ಸಮಾರಂಭ ನಡೆದಿದೆ. ಮದುವೆಯಲ್ಲಿ ಕುಟುಂಬದವರು ಮತ್ತು ಕೆಲವು ಆಪ್ತರು ಮಾತ್ರ ಭಾಗವಹಿಸಿದ್ದು, ಜೋಡಿಗೆ ಶುಭಾಶಯ ಕೋರಿದ್ದಾರೆ. ನಟಿ ವನಿತಾಗೆ ಈಗಾಗಲೇ ಎರಡು ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದಾರೆ. ಇದು ಮೂರನೇ ಮದುವೆಯಾಗಿತ್ತು.

ನಟಿ ವನಿತಾ 2000 ರಲ್ಲಿ ಕಿರುತೆರೆ ನಟ ಆಕಾಶ್ ಜೊತೆಗೆ ಮದುವೆಯಾಗಿದ್ದರು. ಈ ದಂಪತಿಗೆ ಮಗ ವಿಜಯ್ ಶ್ರೀ ಹರಿ ಹಾಗೂ ಮಗಳು ಜೋವಿಕಾ ಮಕ್ಕಳಿದ್ದರು. ಆದರೆ 2007ರಲ್ಲಿ ವನಿತಾ ವಿಚ್ಛೇದನ ಪಡೆದುಕೊಂಡಿದ್ದರು. ಅದೇ ವರ್ಷ ಉದ್ಯಮಿ ಆನಂದ್ ಜಯರಾಜನ್ ಜೊತೆ ಎರಡನೇ ವಿವಾಹವಾಗಿದ್ದರು. ಅವರಿಗೆ ಜಯನಿತಾ ಜನಿಸಿದ್ದರು. 2012ರಲ್ಲಿ ಅವರಿಂದಲೂ ದೂರವಾಗಿದ್ದರು. ಇನ್ನೂ 2013-2017 ರವರೆಗೆ ನಿರ್ದೇಶಕ ರಾಬರ್ಟ್ ಜೊತೆಗೆ ವನಿತಾ ಲಿವ್‍ಇನ್ ರಿಲೇಷನ್‍ಶಿಪ್‍ನಲ್ಲಿದ್ದರು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈಗ ಪೀಟರ್ ಪೌಲ್ ಜೊತೆ ಮೂರನೇ ಮದುವೆಯಾಗಿದ್ದಾರೆ.

View this post on Instagram

Cooku With கோமாளி 👨‍🍳🤡 Best Wishes @vanithavijaykumar ❤❤ 𝐔𝐩𝐝𝐚𝐭𝐞𝐬┃𝐂𝐨𝐨𝐤𝐮 𝐖𝐢𝐭𝐡 𝐂𝐨𝐦𝐚𝐥𝐢┃𝟐𝟒×𝟕 𝐊𝐞𝐞𝐩 𝐒𝐮𝐩𝐩𝐨𝐫𝐭 & 𝐅𝐨𝐥𝐥𝐨𝐰 #actorajithkumarofficial #cookwithcomali #cookuwithcomali #cookuwithcomalivijaytv #CookwithComali omali #trading #comedy #biggbosstamil #biggbosstroll #actorajithkumarofficial #biggbossunseen #tharshan #tharshanarmy #tharshanbiggboss3 #tharshan #tharshanforever #tharshanfans #tharshanfc #losliya #losliyaarmy #losliyafans #losliya_army #losliya_maria #losliyaarmy #kavin #actorajithkumarofficial #themugenrao_fans #losliyaarmy #losliyafans #losliya_army #iamsandy_off #sandymandy_official #sandymasterarmyofficial #abiramivenkatachalam #shakshiagarwal #sherinshringar #actorajithkumarofficial

A post shared by Cooku With கோமாளி 👨‍🍳🤡🔪🥗🍗🦀🦐🍲🥘 (@cookuwithcomalivijaytv) on

“ಪೀಟರ್ ಭೇಟಿ ಮಾಡಿದಾಗ ಪ್ರೀತಿಯಲ್ಲಿ ಬಿದ್ದೆ. ಮದುವೆಯಲ್ಲಿ ನನ್ನ ಕೈ ನೀಡುವಂತೆ ಪೀಟರ್ ಕೇಳಿದರು. ಆಗ ನಾನು ಏನು ಉತ್ತರ ಕೊಡದೆ ಮೂಕವಿಸ್ಮಿತಳಾದೆ. ಈ ವೇಳೆ ನನ್ನ ಮಕ್ಕಳು ಇದಕ್ಕೆ ಒಪ್ಪಬೇಕು ಎಂದು ಅವರಿಗೆ ಹೇಳಿದೆ. ನಂತರ ನನ್ನ ಮಕ್ಕಳೆದರು ಪೀಟರ್ ಬಗ್ಗೆ ಹೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು. ನನ್ನ ಪಾಲಿಗೆ ಸಂಭವಿಸುತ್ತಿರುವ ಅತ್ಯುತ್ತಮ ಗಳಿಗೆ ಎಂದು ಮಕ್ಕಳು ಹೇಳಿದಾಗ ನನ್ನ ಕಣ್ಣಲ್ಲಿ ನೀರು ಬಂತು” ಎಂದು ವನಿತಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವನಿತಾ ಕಾಲಿವುಡ್‍ನ ಹಿರಿಯ ನಟ ವಿಜಯ್ ಕುಮಾರ್ ಪುತ್ರಿಯಾಗಿದ್ದು, ತಮಿಳು ಮತ್ತು ಮಲೆಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ. `ಚಂದ್ರಲೇಖಾ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಹೆಚ್ಚಾಗಿ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಆದರೆ ಕಿರುತೆರೆಯಲ್ಲಿ ಅನೇಕ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ತಮಿಳಿನ ಬಿಗ್‍ಬಾಸ್ ರಿಯಾಲಿಟಿ ಶೋಗೂ ಹೊಗಿದ್ದರು.

Click to comment

Leave a Reply

Your email address will not be published. Required fields are marked *

www.publictv.in