ಹಳ್ಳಿಕಾರ್ ಹಬ್ಬ ಹೀಗಂದ್ರೇನು? ಏನಿದು ಹಳ್ಳಿಕಾರ್? ಈ ಮಟ್ಟಕ್ಕೆ ಟ್ರೆಂಡ್ ಕ್ರಿಯೇಟ್ ಆಗ್ತಿರೋದಾದ್ರೂ ಯಾಕೆ? ಯಾವಾಗ ವರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್ (Bigg Boss) ಅಖಾಡಕ್ಕೆ ಕಾಲಿಟ್ರೋ ಆವಾಗಿಂದ ಹಳ್ಳಿಕಾರ್ ಬಗ್ಗೆನೇ ಮಾತು. ಹಳ್ಳಿ ಜನ ಮಾತ್ರ ಕೃಷಿ ಹೈನುಗಾರಿಕೆ ಬಗ್ಗೆ ಮಾತಾಡ್ತಿದ್ದವರು ಈಗ ಪಟ್ಟಣದ ಮಂದಿಗೂ ಹೋರಿಗಳ ಹಬ್ಬ ನೋಡುವ ಉತ್ಸಾಹ ಬಂದಿದೆ. ಯಾಕಂದ್ರೆ ಈ ಸಲ ವರ್ತೂರು ಏರ್ಪಡಿಸಿರೋ ಹಳ್ಳಿಕಾರ್ ಜಾತ್ರೆಗೆ ತಾರಾ ಮೆರುಗು ಬರಲಿದೆ. ಹಾಗಾದ್ರೆ ಈ ಬಗ್ಗೆ ವರ್ತೂರು ಸಂತೋಷ್ ಹೇಳೋದೇನು?
Advertisement
ಸಿನಿಮಾ ಮಾಡಿಲ್ಲ. ಸೀರಿಯಲ್ ಹತ್ತಿರನೂ ಸುಳಿದಿಲ್ಲ. ಆದರೆ ವರ್ತೂರು ಸಂತೋಷ್ ಅನ್ನೋ ಹೆಸರು ಟಾಕ್ ಆಫ್ ದಿ ಟೌನ್ ಆಗಿದೆ. ಬಿಗ್ ಬಾಸ್ಗೆ ಸ್ಪರ್ಧಿಯಾಗಿ ಹೋದ್ಮೇಲೆ ಸಂತೋಷ್ ಲಕ್ ಬದಲಾಗಿ ಸ್ಟಾರ್ ಪಟ್ಟ ತಂದುಕೊಟ್ಟಿದೆ. ರೈತರ ಪ್ರತಿನಿಧಿಯಾಗಿ ಬಿಗ್ ಬಾಸ್ಗೆ ಹೋಗಿ ಜನಮೆಚ್ಚುಗೆ ಗಳಿಸಿದ ವರ್ತೂರು ಭಾರೀ ಮತಗಳನ್ನ ಪಡೆದು ಫಿನಾಲೆ ದಿನದವರೆಗೂ ಮನೆಯಲ್ಲಿದ್ದರು. 4ನೇ ರನ್ನರ್ ಅಪ್ ಆಗಿ ಹೊರಬರುವಾಗಲೂ ಹೇಳಿದ್ದು ಹಳ್ಳಿಕಾರ್ ಬಗ್ಗೆ. ಇದನ್ನೂ ಓದಿ:ಈ ಸಿನಿಮಾದ ಕಥಾನಾಯಕ ಬದುಕಿದ್ದಾರೆ, ಸಿನಿಮಾ ನೋಡೋಕೆ ಬರ್ತಾರೆ
Advertisement
Advertisement
ಹಳ್ಳಿಕಾರ್ ಇದು ದೇಸಿ ಹೋರಿಗಳಿಗೆ ಬ್ರ್ಯಾಂಡು ಹಳ್ಳಿ ಮಂದಿ ಬಾಯಲ್ಲಿ ಮಾತ್ರ ನಲಿದಾಡುತ್ತಿದ್ದ ಹಳ್ಳಿಕಾರ್ ಹವಾ ಈಗ ಕರ್ನಾಟಕದಲ್ಲಿ ಟ್ರೆಂಡ್ ಆಗ್ತಿದೆ. ಗದ್ದೆ ಉಳೋದಕ್ಕೆ ಮುಂಚೆಲ್ಲಾ ರೈತರು ಹೋರಿಗಳಿಗೆ ನೇಗಿಲು ಕಟ್ಟಿ ಬಳಸುತ್ತಿದ್ದರು. ತಂತ್ರಜ್ಞಾನ ಮುಂದುವರೆದ್ಮೇಲೆ ಎಲ್ಲವೂ ಮಷಿನ್ಮಯ ಆಗಿದೆ. ಹಿಂದಿನಿಂದ ಇಂದಿಗೂ ಹೋರಿಗಳ ರೇಸ್ ನಡೆಯುತ್ತೆ. ಹಳ್ಳಿ ಹಳ್ಳಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದ್ದ ರೇಸ್ಗೆ ನಯಾ ಟಚ್ ಅಪ್ ಕೊಡುವ ಯೋಜನೆ ಮಾಡ್ಕೊಂಡಿದ್ದಾರೆ ವರ್ತೂರು ಸಂತೋಷ್.
Advertisement
ಹಿಂದೆಲ್ಲಾ ಅನೇಕ ಬಾರಿ ಹಳ್ಳಿಕಾರ್ ರೇಸ್ ಮಾಡಿದ್ದ ವರ್ತೂರು ಸಂತೋಷ್ ಈ ಬಾರಿ ಅಕ್ಷರಶಃ ಜಾತ್ರೆ ಮಾಡಲು ಹೊರಟಿದ್ದಾರೆ. ವರ್ತೂರು ಸಂತೋಷ್ ನಿಂತ್ರೆ ಜಾತ್ರೆ ಕುಂತ್ರೆ ಚರಿತ್ರೆ ಎಂದು ತುಕಾಲಿ ಸಂತೋಷ್ ಹೇಳುವಂತೆ ಉತ್ಸಾಹಿ ರೈತರಿಗೆ ಅನುಕೂಲವಾಗುವಂತೆ ಕೃಷಿ-ಹೈನುಗಾರಿಕೆಯನ್ನ ಪ್ರೋತ್ಸಾಹಿಸಲು ಹೊರಟಿದ್ದಾರೆ. ವಿದ್ಯಾವಂತರು ಇರೋ ಬರೋ ಜಮೀನು ಮರ್ಕೊಂಡು ಪಟ್ಟಣ ಸೇರುವಂತಾದ ಈ ಕಾಲದಲ್ಲಿ ಮತ್ತದೇ ಮಣ್ಣಿನ ಸೊಗಡು ಮತ್ತು ಮಣ್ಣಿನ ಪ್ರಾಮುಖ್ಯತೆಯನ್ನ ಹೇಳಲು ಹೊರಟಿದ್ದಾರೆ.
ಪ್ರತಿ ವರ್ಷ ವರ್ತೂರು ಸಂತೋಷ್ ಹಳ್ಳಿಕಾರ್ ರೇಸ್ ಆಯೋಜಿಸುತ್ತಾರೆ. ಅದರಂತೆ ಈ ಬಾರಿ ಹಳ್ಳಿಕಾರ್ ರೇಸ್ ಪ್ಲ್ಯಾನ್ ಮಾಡ್ಕೊಂಡಿದ್ದಾರೆ. ಈ ಬಾರಿ ರೇಸ್ಗೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಬರುವ ಸಾಧ್ಯತೆ ಇದೆ. ಬಿಗ್ ಬಾಸ್ ವೇದಿಕೆಯಲ್ಲೇ ವರ್ತೂರ್ ಕಿಚ್ಚನಿಗೆ ಆಮಂತ್ರಣ ಕೊಟ್ಟಿದ್ದರು. ಇನ್ನು ವರ್ತೂರು ಕರೆದರೆ ಇಡೀ ಬಿಗ್ ಬಾಸ್ ಸ್ಪರ್ಧಿಗಳೇ ಬರುತ್ತಾರೆ. ಕಾರಣ ಎಲ್ಲರ ಜೊತೆಗೂ ವರ್ತೂರು ಸಂತೋಷ್ ಸ್ನೇಹದಿಂದ ಇದ್ದರು. ಹೀಗಾಗಿ ಈ ಬಾರಿ ನಡೆಯುವ ಹಳ್ಳಿಕಾರ್ ರೇಸ್ ಬರೀ ರೇಸ್ ಅಲ್ಲ ಜಾತ್ರೆಯಾಗುತ್ತೆ.
ಬಿರುಗಾಳಿಯಂತೆ ವೇಗದ ಭಯಂಕರವಾದ ರೇಸ್ ನೋಡಲು ಸಾಗರೋಪಾದಿಯಲ್ಲಿ ಜನ ಸೇರುವ ಸಾಧ್ಯತೆ ಇದೆ. ತಾರಾರಂಗು ಇರೋದ್ರಿಂದ ವಿಶೇಷ ಕಳೆ. ವರ್ತೂರು ಗೆಳೆಯ ತುಕಾಲಿ ಸಂತುವೇ ಕಾರ್ಯಕ್ರಮದ ಹೋಸ್ಟ್. ಜೊತೆಗೆ ಪ್ರಾಣಿ ಪ್ರಿಯ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಕಾರ್ಯಕ್ರಮದಲ್ಲಿ ಖುಷಿ ಖುಷಿಯಿಂದ ಬರಲು ಒಪ್ಪಿಕೊಂಡಿದ್ದಾರೆ. ಕರ್ನಾಟಕದಾದ್ಯಂತ ರೇಸ್ಗಳಿಗೆ ಹೋರಿಗಳು ಬರಲಿವೆ. ಮುಖ್ಯವಾಗಿ ಮಂಡ್ಯ- ಹೊಸಕೋಟೆ- ಬೆಂಗಳೂರು ಭಾಗದ ಹಳ್ಳಿಕಾರ್ ಯಜಮಾನರಿಗೆ ಆಮಂತ್ರಣ ಕೊಡಲಾಗಿದೆ. ಹೀಗಾಗಿ ದೊಡ್ಡ ಜಾತ್ರೆಯೇ ನಡೆಯಲಿದೆ. ಹೀಗೆ ನಾಲ್ಕು ಊರುಗಳ ಮಧ್ಯೆ ನಡೆಯುತ್ತಿದ್ದ ರೇಸ್ಗೆ ನ್ಯಾಷನಲ್ ಲೆವೆಲ್ ಅಖಾಡ ಸೃಷ್ಟಿಯಾಗುವಂತೆ ಮಾಡಿರೋದು ಬಿಗ್ ಬಾಸ್.
ಖುದ್ದು ವರ್ತೂರು ಸಂತೋಷ್ ರೇಸ್ನಲ್ಲಿ ಭಾಗಿಯಾಗ್ತಾರೆ. ಹಿಂದೆ ವರ್ತೂರು ಸಂತೋಷ್ರ ಹಳ್ಳಿಕಾರ್ ಅಖಾಡಕ್ಕೆ ಇಳಿದ್ವು ಅಂದ್ರೆ ಭಾರೀ ಡಿಮ್ಯಾಂಡ್ ಪಡೆದುಕೊಂಡಿದ್ವು. ಅದರಂತೆ ಈಗ ಹಳ್ಳಿಕಾರ್ ಒಡೆಯನ ಕರೆಗೆ ಅದೆಷ್ಟು ಹಳ್ಳಿಕಾರ್ಗಳು ಅಖಾಡಕ್ಕಿಳಿಯುತ್ತಿವೋ. ಹೀಗಾಗಿ ನಮ್ಮ ನಾಡಿನಲ್ಲಿ ಹಳ್ಳಿಕಾರ್ ರೇಸ್ ಒಂದು ಸಾಂಪ್ರದಾಯಿಕ ಆಟವಾಗಿ ಪರಿಣಮಿಸಿದ್ರೂ ಆಶ್ಚರ್ಯವಿಲ್ಲ.
ವರ್ತೂರು ಸ್ವಂತ ಲಾಭಕ್ಕೆ ಬಿಗ್ ಬಾಸ್ಗೆ ಹೋದ್ರೋ ಅಥವಾ ರೈತರ ಲಾಭಕ್ಕೋ ಏನೇ ಇದ್ರೂ ಪರಿಣಾಮ ಮಾತ್ರ ಗಮನಾರ್ಹ. ರೈತಾಪಿ ಅನ್ನೋದು ಅನಕ್ಷರಸ್ಥರ ಸ್ವತ್ತಲ್ಲ. ಅಕ್ಷರಸ್ಥರೂ ಸ್ವಂತ ಕಾಲಮೇಲೆ ನಿಲ್ಲುವ ಉದ್ಯೋಗ ಎಂಬುದಾಗಿ ಬಿಂಬಿತವಾಗಿದೆ. ಅದೇನೇ ಇದ್ರೂ ಹಲವರಿಗೆ ವರ್ತೂರು ಸಂತೋಷ್ ಸ್ಫೂರ್ತಿಯಾಗಿ ಹೊರಹೊಮ್ಮಿದ್ದಾರೆ. ಸದ್ಯಕ್ಕೆ ಈ ಹಳ್ಳಿಕಾರ್ ಹೈದನದ್ದೇ ದರ್ಬಾರ್.