Thursday, 23rd May 2019

ಹಾಸನ ರಾಜಕೀಯ ಗಲಭೆಗೆ ಸಿಕ್ತು ಬಿಗ್ ಟ್ವಿಸ್ಟ್

ಹಾಸನ: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜಕೀಯ ಗಲಭೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಾಸನ ಘರ್ಷಣೆಗೆ ಮೊದಲು ಪ್ರಚೋದನೆ ನೀಡಿದ್ದು ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂದು ಜೆಡಿಎಸ್ ಆರೋಪ ಮಾಡುತ್ತಿದೆ.

ಉಡುಪಿ ಮೂಲದ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಹುಲ್ ಕಿಣಿಗೆ ಗಲಭೆಯಲ್ಲಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ರಾಹುಲ್ ಕಿಣಿ ಬಿಜೆಪಿ ಕಾರ್ಯಕರ್ತನ ಅಥವಾ ಆರ್‌ಎಸ್‌ಎಸ್‌ ಕಾರ್ಯಕರ್ತನ ಎಂದು ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಟ್ರೋಲ್ ಆಗುತ್ತಿದೆ. ಇದನ್ನೂ ಓದಿ: ಹಾಸನ ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲೆಸೆತ ಪ್ರಕರಣ – 8 ಮಂದಿ ವಿರುದ್ಧ ಎಫ್‍ಐಆರ್ ದಾಖಲು

ಪ್ರೀತಂಗೌಡ ಮನೆ ಮುಂದೆ ಶಾಂತಿಯುತ ಧರಣಿಗೆ ಜೆಡಿಎಸ್ ಮುಂದಾಗಿತ್ತು. ಆದರೆ ಜೆಡಿಎಸ್ ಕಾರ್ಯಕರ್ತರ ಮೇಲೆ ಬಿಜೆಪಿ ಮುಖಂಡ ಪುನಿತ್ ಎಗರಾಡಿದ್ದರು. ಪುನೀತ್ ಹಿಂದೆ ನಿಂತು ಗಲಭೆಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಪ್ರಚೋದನೆಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಗಾಯಾಳು ರಾಹುಲ್ ಕಿಣಿ ಮೂಲತಃ ಉಡುಪಿ ಜಿಲ್ಲೆಯವನಾಗಿದ್ದು, ಹಾಸನಕ್ಕೆ ಯಾಕೆ ಬಂದಿದ್ದಾನೆ ಎಂಬ ಚರ್ಚೆ ಎದ್ದಿದೆ. ಘಟನೆಯಲ್ಲಿ ರಾಹುಲ್ ಕಿಣಿ ತಲೆಗೆ ಕಲ್ಲೇಟು ಬಿದ್ದಿತ್ತು. ಪ್ರತಿಭಟನೆ ಸುಳಿವು ಸಿಕ್ಕಿ ಪ್ರೀತಂಗೌಡ ಮನೆ ಮುಂದೆ ಆರ್‌ಎಸ್‌ಎಸ್‌ ಕಾರ್ಯಕರ್ತ ಪ್ರತ್ಯಕ್ಷನಾಗಿದ್ದು, ಶಾಂತಿಯುತ ಧರಣಿ ಮುಗಿಸಿ ವಾಪಸ್ ಆಗುವ ಐದು ನಿಮಿಷ ಮೊದಲು ಗಲಭೆಗೆ ಪ್ರಚೋದನೆ ನೀಡಲಾಗಿದೆ. ಗಲಭೆಗೆ ಪ್ರಚೋದನೆ ನೀಡಿದ್ದೇ ಆರ್‌ಎಸ್‌ಎಸ್‌ ಕಾರ್ಯಕರ್ತರು ಎನ್ನೊದು ಜೆಡಿಎಸ್ ಕಾರ್ಯಕರ್ತರ ಆರೋಪವಾಗಿದೆ.

ಆರ್‌ಎಸ್‌ಎಸ್‌ ಕಾರ್ಯಕರ್ತರ ಪ್ರಚೋದನೆ ಬಳಿಕ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಿದ್ದಾರೆ. ಗಲಭೆಗೆ ಪ್ರಚೋದನೆ ನೀಡಿದ್ದೇ ಆರ್‌ಎಸ್‌ಎಸ್‌ನ ರಾಹುಲ್ ಕಿಣಿ ಎಂದು ಜೆಡಿಎಸ್ ಆರೋಪವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ ಕಾರ್ಯಕರ್ತರ ಪೋಸ್ಟ್ ವೈರಲ್ ಆಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *