Recent News

ಮಗನ ಬಗ್ಗೆ ಟ್ವೀಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಬಿಗ್-ಬಿ!

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಭಾರತದ ಧ್ವಜ ಹಿಡಿದಿರುವ ಫೋಟೋವನ್ನು ಬಿಗ್-ಬಿ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವಾಗ ಎಡವಟ್ಟು ಮಾಡಿ ನಂತರ ಅದನ್ನು ಸರಿ ಮಾಡಿದ್ದಾರೆ.

ಶನಿವಾರ ನಟ ಅಭಿಷೇಕ್ ಬಚ್ಚನ್ ಪಂಜಾಬ್‍ನ ಅಟರಿ ಗ್ರಾಮದಲ್ಲಿರುವ ಭಾರತದ ಹಾಗೂ ಪಾಕ್ ಬಾರ್ಡರ್ ನಲ್ಲಿ ನಡೆದ ಕಾರ್ಯಕ್ರಮವನ್ನು ವೀಕ್ಷಿಸಲು ಹೋಗಿದ್ದರು. ಆಗ ಅಭಿಷೇಕ್ ಬಚ್ಚನ್ ರಾಷ್ಟ್ರ ಧ್ವಜ ಹಿಡಿದಿದ್ದರು. ಅಭಿಷೇಕ್ ರಾಷ್ಟ್ರ ಧ್ವಜ ಹಿಡಿದಿರುವ ಫೋಟೋವನ್ನು ಬಿಗ್-ಬಿ ತಮ್ಮ ಟ್ವಿಟ್ಟರಿನಲ್ಲಿ ಹಾಕಿದ್ದರು. ಅದರಲ್ಲಿ ಅಟರಿ ಬಾರ್ಡರ್ ಬದಲು ವಾಘಾ ಬಾರ್ಡರ್ ಎಂದು ಬರೆದಿದ್ದರು. ಕೆಲ ಸಮಯದ ನಂತರ ಅವರು ಈ ತಪ್ಪನ್ನು ಅರಿತು ಸರಿಪಡಿಸಿದ್ದರು.

ಬಿಗ್-ಬಿ ಟ್ವಿಟ್ಟರಿನಲ್ಲಿ ಮೊದಲು ಅಭಿಚೇಕ್ ಬಚ್ಚನ್ ಫೋಟೋ ಹಾಕಿ ಅದ್ದಕ್ಕೆ ಅಭಿಷೇಕ್ ಬಚ್ಚನ್ ವಾಘಾ ಬಾರ್ಡರ್ ನಲ್ಲಿದ್ದಾರೆ. ಜೈ ಹಿಂದ್! ಭಾರತ್ ಮಾತಾ ಕೀ ಜೈ! ಅದು ಒಂದು ಅದ್ಭುತ ಅನುಭವವಾಗಿತ್ತು ಎಂದು ಅವರು ನನಗೆ ಹೇಳಿದರು. ದೇಶಭಕ್ತಿಯ ಭಾವನೆ ನೋಡಲು ನನಗೆ ಅವಕಾಶ ಸಿಕ್ಕಿತ್ತು ಹಾಗೂ ರೋಮಾಂಚನವಾಯಿತು ಎಂದು ತಿಳಿಸಿದರು. ಆ ಗಾರ್ಡ್ ಸೆರಮನಿಯಲ್ಲಿ ನಾನು ವಾಯ್ಸ್ ಓವರ್ ನೀಡಿದ್ದೆ ಎಂದು ಮೊದಲು ಟ್ವೀಟ್ ಮಾಡಿದ್ದರು.

ಟ್ವೀಟ್ ಮಾಡಿ ಎರಡು ಗಂಟೆಗಳ ನಂತರ ಬಿಗ್-ಬಿ ಮೊದಲ ಟ್ವೀಟ್‍ನ ಕ್ಯಾಪ್ಷನ್ ಹಾಕಿ ಅದರಲ್ಲಿ ಕೊಂಚ ಬದಲಾವಣೆ ಮಾಡಿದ್ದರು. ಅಭಿಷೇಕ್ ರಾಷ್ಟ್ರಧ್ವಜ ಹಿಡಿದು ನಿಂತಿರೋದು ವಾಘಾ ಬಾರ್ಡರ್ ನಲ್ಲಿ ಅಲ್ಲ ಅಟಾರಿ ಬಾರ್ಡರ್ ನಲ್ಲಿ. ವಾಘಾ ಬಾರ್ಡರ್ ಪಾಕಿಸ್ತಾನದ ಹತ್ತಿರ ಇದೆ ಎಂದು ಪುನಃ ಟ್ವೀಟ್ ಮಾಡಿದರು.

ಅಭಿಷೇಕ್ ಬಚ್ಚನ್ ಕಾರ್ಯಕ್ರಮದ ಕೆಲವು ವಿಡಿಯೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿ ಅದ್ದಕ್ಕೆ ‘ಜೈ ಹಿಂದ್’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಆ ಕಾರ್ಯಕ್ರಮದಲ್ಲಿ ನೆರದಿದ್ದ ಜನರ ವಿಡಿಯೋವನ್ನು ತೆಗೆದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಅಭಿಷೇಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಅಲ್ಲಿ ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಹಾಡೊಂದನ್ನು ಹಾಕಿದ್ದರು.

Had the most amazing time yesterday. Thanks to the BSF ( Border Security Force) who invited me to witness the closing of the border ceremony at the Attari border out post. An event I’ve read so much about and seen much footage of but never had the pleasure to witness in person. It’s almost indescribable what one feels during this robust event. Patriotism, pride, admiration, humility, appreciation, regret and many, many more emotions. The pageantry, flair and aggression that is displayed is so overwhelming. Have nothing but love and respect for our armed forces. Truly! It also feels great when they play one of your songs and the crowds love it 😊😉 @iamsrk @farahkhankunder @boman_irani @sonu_sood @deepikapadukone

A post shared by Abhishek Bachchan (@bachchan) on

ಅಭಿಷೇಕ್ ಆ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದ್ದಕ್ಕೆ, “ನಾನು ನಿನ್ನೆ ಒಳೆಯ ಸಮಯವನ್ನು ಕಳದೆ. ಬಾರ್ಡರ್ ಸೆಕ್ಯೂರಿಟಿ ಫೋರ್ಸ್(ಬಿಎಸ್‍ಎಫ್) ನನ್ನನ್ನು ಅಟರಿ ಬಾರ್ಡರ್ ನಲ್ಲಿ ನಡೆಯುವ ಸೆರಮನಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ನನಗೆ ಆಹ್ವಾನಿಸಿದ್ದಕ್ಕೆ ತುಂಬ ಧನ್ಯವಾದಗಳು. ಈ ಕಾರ್ಯಕ್ರಮದ ಬಗ್ಗೆ ನಾನು ತುಂಬಾ ಕೇಳಿದ್ದೆ, ಓದಿದ್ದೆ ಹಾಗೂ ವಿಡಿಯೋಗಳಲ್ಲಿ ನೋಡಿದ್ದೆ. ಆದರೆ ಕಣ್ಣಾರೆ ನೋಡುವ ಅವಕಾಶ ದೊರೆಯಲಿಲ್ಲ. ನನಗಾದ ಅನುಭವವನ್ನು ಶಬ್ಧಗಳಲ್ಲಿ ಹೇಳಲು ಸಾಧ್ಯವಿಲ್ಲ. ಅಲ್ಲಿ ಹೋದ ಮೇಲೆ ನನ್ನ ದೇಶಭಕ್ತಿ, ಗೌರವ, ವಿನಯ, ದುಃಖ ಎಲ್ಲ ಭಾವನೆಗಳು ಎಲ್ಲ ಒಟ್ಟಿಗೆ ಹೊರಬಂತು. ನನ್ನ ಮನಸ್ಸಿನಲ್ಲಿ ಸೈನಿಕರಿಗೆ ಗೌರವವಿದೆ. ಇನ್ನೊಂದು ವಿಷಯ ನನಗೆ ತುಂಬಾ ಇಷ್ಟವಾಯಿತ್ತು. ಅಲ್ಲಿ ನನ್ನ ಚಿತ್ರದ ಹಾಡು ಹಾಕಿದ್ದರು. ಜನರಿಗೆ ಅದು ತುಂಬಾ ಇಷ್ಟವಾಯಿತ್ತು” ಎಂದು ಅಭಿಷೇಕ್ ಬಚ್ಚನ್ ಪೋಸ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *