Connect with us

Bidar

1 ಸಾವಿರ ಸಾಲ ವಾಪಸ್ ಕೊಡದ್ದಕ್ಕೆ ಚಾಕುವಿನಿಂದ ಇರಿದ

Published

on

– ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯ

ಬೀದರ್: ಕೊಟ್ಟ 1,000 ರೂಪಾಯಿ ಸಾಲ ವಾಪಸ್ ನೀಡದ್ದಕ್ಕೆ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಬೀದರ್ ನಗರದ ಮೈಲೂರ್ ನಲ್ಲಿ ನಡೆದಿದೆ.

ರವಿ ಎಂಬವರ ಬಳಿ ಸ್ವಾಮಿದಾಸ್ ಒಂದು ಸಾವಿರ ಹಣ ಸಾಲ ಪಡೆದಿದ್ದ. ಈ ಸಾಲವನ್ನು ವಾಪಸ್ ನೀಡುವಂತೆ ರವಿ ಹೇಳಿದ್ದ. ಈ ವಿಚಾರ ಸಂಬಂಧ ಸೋಮವಾರ ಇಬ್ಬರಿಗೂ ಜಗಳವಾಗಿ ರವಿ, ಸ್ವಾಮಿದಾಸ್ ಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕೂಡಲೇ ಸ್ವಾಮಿದಾಸ್ ನನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಆಸ್ಪತ್ರೆಯ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಮೂಲಕ ಒಂದು ಸಾವಿರಕ್ಕಾಗಿ ಇಬ್ಬರು ಗೆಳೆಯರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Click to comment

Leave a Reply

Your email address will not be published. Required fields are marked *