Connect with us

Crime

ನೇಣು ಬಿಗಿದುಕೊಂಡಂತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾಲಕಿ ದುರ್ಮರಣ!

Published

on

– ತಂದೆಯ ಜೊತೆಯಿದ್ದಾಗಲೇ ಘಟನೆ
– ಸೆಲ್ಫಿ ಕ್ರೇಜ್‍ಗೆ 12ರ ಬಾಲಕಿ ಸಾವು

ಭೋಪಾಲ್: ಸೆಲ್ಫಿ ಕ್ರೇಜ್ ನಿಂದ ಪ್ರಾಣ ಕಳೆದುಕೊಂಡ ಅನೇಕ ಸುದ್ದಿಗಳನ್ನು ನಾವು ಓದಿದ್ದೇವೆ, ಕೇಳಿದ್ದೇವೆ. ಆದರೆ ಈ ಸುದ್ದಿ ಕೇಳಿದರೆ ಎಂತವರಿಗಾದರೂ ಆಶ್ಚರ್ಯ ಹಾಗೂ ಭಯವಾಗದೇ ಇರದು.

ಹೌದು. ನೇಣು ಹಾಕಿಕೊಂಡಂತೆ ಕಾಣುವ ರೀತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್ ವೈಷ್ಣೋದೇವಿ ನಗರದಲ್ಲಿ ನಡೆದಿದೆ.

12 ವರ್ಷದ ಬಾಲಕಿ ಮನೆಯಲ್ಲಿ ತಂದೆಯ ಜೊತೆಯಲ್ಲಿ ಇದ್ದಳು. ಈ ವೇಳೆ ಬಾಲಕಿ ಸೆಲ್ಫಿ ತೆಗೆದುಕೊಳ್ಳಲು ಎಂದು ರೂಮ್ ಒಳಗೆ ಹೋಗಿದ್ದಾಳೆ. ಅಂತೆಯೇ ಕುರ್ಚಿ ಮೇಲೆ ನಿಂತು ನೇಣು ಹಾಕಿ ಕೊಂಡವರಂತೆ ಸೆಲ್ಫಿ ತೆಗೆದುಕೊಂಡಿದ್ದಾಳೆ. ನಂತರ ಬಾಲಕಿ ಕುರ್ಚಿಯಿಂದ ಇಳಿಯಲು ಹೊರಟಾಗ ಕಾಲು ಜಾರಿ ಕುರ್ಚಿ ಕೆಳಗೆ ಬಿದ್ದಿದೆ. ಆಗ ಬಾಲಕಿಯ ಕುತ್ತಿಗೆಯಲ್ಲಿದ್ದ ನೇಣಿನ ಕುಣಿಕೆ ಕುತ್ತಿಗೆಗೆ ಬೀಗಿದು ಬಾಲಕಿಯ ಉಸಿರುನಿಂತಿದೆ.

ಬಾಲಕಿ ಹೊರಗೆ ಬರದೆ ಇದ್ದುದ್ದನ್ನು ಗಮನಿಸಿದ ತಂದೆ ರೂಮ್‍ಗೆ ಹೋಗಿ ನೋಡಿದ್ದಾರೆ. ಆಗ ಮಗಳ ದೇಹ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿರುವುದು ಕಂಡಿದೆ. ನೆರೆಹೊರೆಯವರ ಸಹಾಯದಿಂದ ಬಾಲಕಿಯ ಮೃತ ದೇಹವನ್ನು ಕೆಳಗೆ ಇಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮೇಲ್ನೋಟಕ್ಕೆ ಸೆಲ್ಫಿಯಿಂದಾಗಿದೆ ಎಂದು ಕಂಡಿದೆ. ಹೆಚ್ಚಿನ ತನಿಖೆಯನ್ನು ನಡೆಸುತ್ತೇವೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in