ಕೊರೋನಾ ನಂತರ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿದ್ದವು. ಸ್ಟಾರ್ ನಟರ ಸಿನಿಮಾಗಳು ಬಂದರೂ, ಪ್ರೇಕ್ಷಕ ಮಾತ್ರ ಅವುಗಳನ್ನು ಸ್ವೀಕರಿಸಲೇ ಇಲ್ಲ. ಅದರಲ್ಲೂ ದಕ್ಷಿಣದ ಸಿನಿಮಾಗಳ ಮುಂದೆ ಬಾಲಿವುಡ್ ಮಂಡೆಯೂರಿತ್ತು. ಇವೆಲ್ಲ ಅವಮಾನಗಳನ್ನು ನಿವಾರಿಸಲು ಎಂಬಂತೆ ಬಂದಿದ್ದೇ ಕಾರ್ತಿಕ್ ಆರ್ಯನ್ ನಟನೆಯ ‘ಭುಲ್ ಭುಲಯ್ಯ 2’ ಸಿನಿಮಾ. ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡುವುದರ ಮೂಲಕ ಬಾಲಿವುಡ್ ಮಾನ ಮರ್ಯಾದೆ ಉಳಿಸಿತ್ತು.
ಐವತ್ತು ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗಳಿಸಿದ್ದು ಬರೋಬ್ಬರಿ 185 ಕೋಟಿ ಎನ್ನಲಾಗುತ್ತಿದೆ. ನಿರೀಕ್ಷೆಗೂ ಮೀರಿ ಹಣ ಬಂದಿರುವ ಕಾರಣಕ್ಕಾಗಿ ತಮ್ಮ ಸಿನಿಮಾದ ನಾಯಕ ನಟ ಕಾರ್ತಿಕ್ ಆರ್ಯನ್ ಅವರಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ ನಿರ್ಮಾಪಕ ಭೂಷಣ್ ಕುಮಾರ್. ಅಂದಾಜು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಮೆಕ್ ಲಾರೆನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಭಾರತ ಸಿನಿಮಾದ ರಂಗದಲ್ಲೇ ಈ ಕಾರು ಹೊಂದಿರುವ ಏಕೈಕ ನಟ ಎಂಬ ಹೆಗ್ಗಳಿಕೆ ಕಾರ್ತಿಕ್ ಕಾರಣರಾಗಿದ್ದಾರೆ. ಇದನ್ನು ಓದಿ:ರಶ್ಮಿಕಾ ಮಂದಣ್ಣ ಸಂಭಾವನೆ 5 ಕೋಟಿನಾ? : ನಂ.1 ಸ್ಥಾನಕ್ಕೆ ಏರಿದ ಕೊಡಗಿನ ಬೆಡಗಿ
ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಕೂಡ ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಹಣ ಕೂಡ ಗಳಿಸಿತ್ತು. ಹಾಗಾಗಿ ತಮ್ಮ ನಿರ್ದೇಶಕರಿಗೆ ಕಾರು ಉಡುಗೊರೆಯಾಗಿ ನೀಡಿದ್ದರು ಕಮಲ್. ಕೇವಲ ನಿರ್ದೇಶಕರಿಗೆ ಮಾತ್ರವಲ್ಲ, ಸಹ ನಿರ್ದೇಶಕರಿಗೂ ಕೂಡ ದುಬಾರಿ ಬೈಕ್ ನೀಡುವ ಮೂಲಕ ಮಾದರಿಯಾಗಿದ್ದರು. ಇದೀಗ ಅದೇ ನಡೆಯನ್ನೇ ಅನುಸರಿಸಿದ್ದಾರೆ ಭುಲ್ ಭುಲಯ್ಯ 2 ಸಿನಿಮಾದ ನಿರ್ಮಾಪಕ ಭೂಷಣ್ ಕುಮಾರ್.