Connect with us

Bengaluru City

ಕೃಷಿ ಕಾಯ್ದೆ ವಿರೋಧಿಸಿ ನಾಳೆ ಭಾರತ್ ಬಂದ್ – ಕರ್ನಾಟಕದಲ್ಲೂ ಬಂದ್‍ಗೆ ಕರೆ

Published

on

– ಇಂದಿನಿಂದ ರೈತರ ಸರಣಿ ಪ್ರತಿಭಟನೆ

ಬೆಂಗಳೂರು: ಕೇಂದ್ರದ ವಿರುದ್ಧ ಅನ್ನದಾತನ ಹೋರಾಟದ ಕಿಚ್ಚು, ನೂತನ ಕೃಷಿ ಮಸೂದೆಯ ವಿಚಾರಕ್ಕೆ ದೆಹಲಿಯಂಗಳದಲ್ಲಿ ಈಗ ಹಸಿರು ಹೋರಾಟದ ಕಾವು. ಈಗ ಇದು ಬೆಂಗಳೂರಿನಲ್ಲೂ ಆರಂಭವಾಗಲಿದೆ.

ಅಧಿವೇಶನದ ಬೆನ್ನಲ್ಲೆ ನಾಳೆ ಭಾರತ್ ಬಂದ್ ಪ್ರಯುಕ್ತ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೂ ಕರೆಕೊಟ್ಟಿದೆ. ಈ ಮಧ್ಯೆ ನಾಳೆಯುಂದ ಕುರುಬೂರು ಶಾಂತಕುಮಾರ್ ಹಾಗೂ ಐಕ್ಯ ಹೋರಾಟ ಸಮಿತಿಯಿಂದ ಮೌರ್ಯ ಸರ್ಕಲ್ ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಯೂ ನಡೆಯಲಿದೆ. ನಾಳೆ ಸರ್ಕಾರದ ವಿರುದ್ಧ ಹೋರಾಟದ ರಣಕಹಳೆಯನ್ನು ರಾಜ್ಯದಲ್ಲೂ ರೈತರು ಮೊಳಗಿಸಲಿದ್ದಾರೆ.

ಬೆಂಗಳೂರಲ್ಲಿ ಬುಧವಾರ ರೈತರು ಸಿಡಿದೇಳಲಿದ್ದಾರೆ. ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಅನ್ನದಾತರು ಬರಲಿದ್ದಾರೆ. ರಾಜಧಾನಿಗೆ ನಾಳೆಯೇ ಸಾವಿರಾರು ರೈತರು ಬರಲಿದ್ದಾರೆ. ಡಿಸೆಂಬರ್ 9 ರಂದು ಬೆಳಗ್ಗೆ ರೈಲು ಮೂಲಕ ಸಾವಿರಾರು ಮಂದಿ ರೈಲ್ವೆ ನಿಲ್ದಾಣಕ್ಕೆ ಎಂಟ್ರಿ ಕೊಡಲಿದ್ದು, 9 ರಂದು 10 ಸಾವಿರ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ.

ಬುಧವಾರ 11 ಗಂಟೆಗೆ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೂ ಬೃಹತ್ ಪ್ರತಿಭಟನೆ ನಡೆಯಲಿದೆ. ನಂತರ ವಿಧಾನಸೌಧಕ್ಕೆ ಅನ್ನದಾತರು ಮುತ್ತಿಗೆ ಹಾಕಲಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಬಂದ್‍ಗೆ ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟ, ರೈತ ಹೋರಾಟಗಾರರು, ಎಪಿಎಂಸಿ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ಅವರು ಬೆಂಬಲ ಕೊಡಲಿದ್ದಾರೆ. ಇನ್ನು ಕರವೇ ಪ್ರವೀಣ್ ಶೆಟ್ಟಿ ಬಣ, ಓಲಾ, ಊಬರ್ ಟ್ಯಾಕ್ಸಿ, ಸಾರಿಗೆ ನೌಕರರ ಸಂಘ, ಹೋಟೆಲ್ ಮಾಲೀಕರ ಸಂಘ, ಕರ್ನಾಟಕ ರಾಜ್ಯ ಟ್ರಾವೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಲಿದೆ. ಆದರೆ ಆಟೋ ಸಂಘಟನೆಗಳು ಮಾತ್ರ ತಟಸ್ಥ ನೀತಿ ತಾಳಿವೆ.

ಬಂದ್ ದಿನ ಏನಿರುತ್ತೆ..?
* ಹೋಟೆಲ್ ಇರುತ್ತೆ.
* ಬಸ್
* ಆಟೋ
* ಒಲಾ ಉಬರ್ ಕ್ಯಾಬ್
* ದಿನಸಿ ಅಂಗಡಿ ಗಳು.
* ಆಸ್ಪತ್ರೆ ಗಳು.

ಏನಿರಲ್ಲ..?
* ರಾಜ್ಯ ಹೆದ್ದಾರಿಗಳು ಬಂದ್ ಸಾಧ್ಯತೆ.
* ಕೆಲವಡೆ ವಾಹನ ತಡೆಯುವ ಪ್ರಯತ್ನ ಗಳು ಆಗಬಹುದು.
* ಮೆಜೆಸ್ಟಿಕ್ ರೈಲ್ವೇ ನಿಲ್ದಾಣ, ಫ್ರೀಡಂ ಪಾರ್ಕ್ ಮಾರ್ಗವಾಗಿ ವಿಧಾನಸೌಧಕ್ಕೆ ಮುತ್ತಿಗೆ ಯೋಜನೆ ರೈತರದ್ದು ಹೀಗಾಗಿ ಈ ಭಾಗದಲ್ಲಿ ವಾಹನ ಸಂಚಾರ ವ್ಯತ್ಯಯ.
* ಜಿಲ್ಲಾದ್ಯಾಂತ ರೈತರ ಪ್ರತಿಭಟನೆಯಿರೋದ್ರಿಂದ ಮಾರ್ಕೆಟ್ ಗಳಲ್ಲಿ ಸೊಪ್ಪು ತರಕಾರಿಗಳ ಪೂರೈಕೆಯಲ್ಲಿ ಕೊರತೆ ಎದುರಾಗುವ ಸಾಧ್ಯತೆ

Click to comment

Leave a Reply

Your email address will not be published. Required fields are marked *

www.publictv.in