Tuesday, 18th February 2020

ರಾಧಿಕಾ ಜೊತೆ ಹಿಂದಿ ಹಾಡಿಗೆ ರೋಮ್ಯಾನ್ಸ್ ಮಾಡಿದ ರಾಕಿಭಾಯ್: ವಿಡಿಯೋ

ಬೆಂಗಳೂರು: ಕೆಜಿಎಫ್ ಸ್ಟಾರ್ ರಾಕಿಭಾಯ್ ಯಶ್ ತನ್ನ ಪತ್ನಿ ರಾಧಿಕಾ ಪಂಡಿತ್ ಜೊತೆ ಹಿಂದಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕೇವಲ 15 ಸೆಕೆಂಡ್ ಇರುವ ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಪತ್ನಿ ಜೊತೆಗೆ ಹಿಂದಿ ಚಿತ್ರ ಆಶಿಕಿ-2 ಚಿತ್ರದ ಬಹುಜನಪ್ರಿಯ ಗೀತೆ ತುಮ್ ಹೀ ಹೋ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಯಶ್ ದಂಪತಿ ಮಾಡಿರುವ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಯಶ್ ಅವರು ನೀಲಿ ಬಣ್ಣದ ಸೂಟ್ ಧರಿಸಿದ್ದು, ರಾಧಿಕಾ ಪಂಡಿತ್ ಅವರು ಪಿಂಕ್ ಬಣ್ಣದ ಗೌನ್ ತೊಟ್ಟು ಹಿಂದಿ ಹಾಡಿಗೆ ನೃತ್ಯ ಮಾಡಿದ್ದಾರೆ. ಯಶ್ ಮತ್ತೆ ರಾಧಿಕಾ ಡ್ಯಾನ್ಸ್ ಮಾಡುತ್ತಿರುವುದನ್ನು ಜೊತೆಯಲ್ಲಿದ್ದವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ಯಶ್ ಅಭಿಮಾನಿಗಳು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಸಧ್ಯ ಕೆ.ಜಿ.ಎಫ್-2 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ಯಶ್ ಕಳೆದ ವಾರವಷ್ಟೇ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್ ಬಳಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ನಡೆದಿದ್ದ ಯಶ್ ಹುಟ್ಟುಹಬ್ಬಕ್ಕೆ 5000 ಕೆಜಿ ಕೇಕ್ ತಯಾರಿಸಲಾಗಿತ್ತು. ರಾತ್ರಿ ಪತ್ನಿ ರಾಧಿಕಾ ಜೊತೆಗೆ ಆಗಮಿಸಿದ ಯಶ್ 5000 ಕೆಜಿ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅಲಹಬಾದ್‍ನಿಂದ ಆಗಮಿಸಿದ ವರ್ಲ್ಡ್ ರೆಕಾರ್ಡ್ ಕಮಿಟಿ ಅಧ್ಯಕ್ಷ ಪವನ್ ಸಾಲಂಗಿ ಐದು ಸಾವಿರ ಕೆಜಿ ಕೇಕ್ ಪರಿಶೀಲನೆ ನಡೆಸಿದ್ದರು.

ಇದೇ ವೇಳೆ ಮಾತಾಡಿದ್ದ ಅಧ್ಯಕ್ಷ ಪವನ್ ಸಾಲಂಗಿ, ಇದು ಸೌತ್ ಇಂಡಿಯಾದಲ್ಲೇ ಮೊದಲು ಮತ್ತು ಇಲ್ಲಿಯವರೆಗೆ ಯಾವುದೇ ಸೆಲೆಬ್ರಿಟಿ ಐದು ಸಾವಿರ ಕೆಜಿ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ. ಹಾಗಾಗಿ ಇದು ವಿಶ್ವ ದಾಖಲೆ ಪಟ್ಟಿಗೆ ಸೇರಲಿದೆ ಎಂದು ಹೇಳಿದ್ದರು.

ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿದ ನಂತರ ಮಾತನಾಡಿದ್ದ ಯಶ್, `ಕೆಜಿಎಫ್ 2′ ಚಿತ್ರದ ಒಂದು ಡೈಲಾಗ್ ನಿಮಗೋಸ್ಕರ ಹೇಳುತ್ತೇನೆ. ಸಿನಿಮಾದಲ್ಲಿ ನೋಡಿದ್ದರೆ ಮಜಾ ಬಂದಿರೋದು. ಆದರೆ ನಿಮಗೋಸ್ಕರ ಸಣ್ಣದಾಗಿ ಹೇಳುತ್ತೇನೆ ಎಂದು ಚಿತ್ರದ ಡೈಲಾಗ್ ಹೇಳಿದ್ದರು.

“ಏನಂದೆ ಒಂದು ಹೆಜ್ಜೆ ಇಟ್ಕೊಂಡು ಬಂದೋನು ಅಂತ ಹೇಳ್ದ. ಕರೆಕ್ಟ್, ಗಡಿಯಾರದಲ್ಲಿ ಒಂದು ಗಂಟೆಯಾಗಬೇಕು ಅಂದರೆ ದೊಡ್ಡ ಮುಳ್ಳು 60 ಹೆಜ್ಜೆ ಇಡಬೇಕು. ಆದರೆ ಚಿಕ್ಕ ಮುಳ್ಳು ಒಂದು ಹೆಜ್ಜೆ ಇಟ್ಟರೆ ಸಾಕು. ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ. ಇನ್ಮೇಲೆಯಿಂದ ಆ ಟೆರಿಟರಿ ನಂದು, ಈ ಟೆರಿಟರಿ ನಿಂದು ಅನ್ನೋದೆಲ್ಲ ಬಿಟ್ಟುಬಿಡಿ, ವರ್ಲ್ಡ್ ಈಸ್ ಮೈ ಟೆರಿಟರಿ” ಎಂದು ಸಿನಿಮಾದ ಖಡಕ್ ಡೈಲಾಗ್ ಹೇಳಿದ್ದರು. ಈ ಡೈಲಾಗ್ ಹೇಳುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದರು.

Leave a Reply

Your email address will not be published. Required fields are marked *