Connect with us

Bengaluru City

ಮಲಗಿದ್ದ ವೇಳೆ ಪತಿಯ ಕೈ-ಕಾಲುಗಳನ್ನು ಕಟ್ಟಿ ಚಾಕುವಿನಿಂದ ಇರಿದು ಕೊಂದ್ಳು!

Published

on

ಬೆಂಗಳೂರು: ಪತ್ನಿಯೇ ತನ್ನ ಪತಿಯನ್ನು ಬರ್ಬರವಾಗಿ ಕೊಂದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಮೃತನನ್ನು ಮೊಹನ್ (41) ಎಂದು ಗುರುತಿಸಲಾಗಿದೆ. ಈತನನ್ನು ಪತ್ನಿ ಪದ್ಮಾವತಿ ಕೊಲೆ ಮಾಡಿದ್ದಾಳೆ. ಈ ಘಟನೆ ಇಂದು ನಸುಕಿನ ಜಾವ 3.30ರ ಸುಮಾರಿಗೆ ಜೆಜೆ ನಗರದ ಓಬಳೇಶ್ ಕಾಲೋನಿಯಲ್ಲಿ ನಡೆದಿದೆ.

ಕ್ಲುಲ್ಲಕ ಕಾರಣಕ್ಕೆ ಪತಿ- ಹಾಗೂ ಪತ್ನಿ ನಡುವೆ ಜಗಳ ನಡೆದಿದೆ. ಇದೇ ಸಿಟ್ಟಿನಿಂದ ಪದ್ಮಾವತಿ, ಪತಿ ಮಲಗಿದ್ದ ವೇಳೆ ಆತನ ಕೈ-ಕಾಲುಗಳನ್ನು ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಇಬ್ಬರ ನಡುವೆ ಆಗಾಗ ನಡೆಯುತ್ತಿದ್ದ ಜಗಳವೇ ಈ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಸದ್ಯ ಕೊಲೆ ಮಾಡಿದ ಪತ್ನಿ, ಅರೋಪಿ ಪದ್ಮಾವತಿ ವಿರುದ್ಧ ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜೆ.ಜೆ ನಗರ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

Click to comment

Leave a Reply

Your email address will not be published. Required fields are marked *