Connect with us

ವೀಕೆಂಡ್ ಲಾಕ್‍ಡೌನ್ – ಮೆಟ್ರೋ ರೈಲು ಸೇವೆ ರದ್ದು

ವೀಕೆಂಡ್ ಲಾಕ್‍ಡೌನ್ – ಮೆಟ್ರೋ ರೈಲು ಸೇವೆ ರದ್ದು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಸರ್ಕಾರ ವೀಕೆಂಡ್ ಲಾಕ್‍ಡೌನ್ ಮಾಡಲು ಮುಂದಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೆಟ್ರೋ ರೈಲು ವೀಕೆಂಡ್‍ನಲ್ಲಿ (ಶನಿವಾರ ಮತ್ತು ಭಾನುವಾರ)ದಂದು ಸಂಚರಿಸುವುದಿಲ್ಲ ಎಂದು ಪತ್ರಿಕಾ ಪ್ರಕಟನೆ ಹೊರಡಿಸಲಾಗಿದೆ.

ಪ್ರಕಟನೆಯಲ್ಲಿ ಏನಿದೆ?
ಬೆಂಗಳೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಮೆಟ್ರೋ ರೈಲು ಕಾರ್ಯಚರಣೆಯ ವೇಳಾಪಟ್ಟಿಯನ್ನು ಮೇ4 ರವರೆಗೆ ಪರಿಷ್ಕರಿಸಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಎಲ್ಲಾ ವಾರದ ದಿನಗಳಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ. ಅದಾಗ್ಯೂ ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ಕೊನೆಯ ರೈಲು ಸೇವೆ ಸಂಜೆ 7:30 ಗಂಟೆಗೆ ಹೊರಡಲಿದೆ. ಕೊನೆಯ ವಾಣಿಜ್ಯ ಸೇವೆಯು ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‍ನಿಂದ ಇತರೆ ನಾಲ್ಕು ಮಾರ್ಗಗಳಿಗೆ ಸಂಪರ್ಕ ವಿರುತ್ತದೆ.

ಶನಿವಾರ ಮತ್ತು ಭಾನುವಾರ
ವಾರಾಂತ್ಯದ ಕರ್ಫ್ಯೂ ದೃಷ್ಟಿಯಿಂದ ಮೆಟ್ರೋ ರೈಲು ಸೇವೆಗಳನ್ನು ಎರಡು ದಿನಗಳಂದು ಇಡೀ ದಿನ ರದ್ದುಗೊಳಿಸಲಾಗುತ್ತದೆ. ಸಾಮಾಜಿಕ ಅಂತರವನ್ನು ಕಾಪಾಡುವುದು ಮುಖವಾಡ ಧರಿಸುವುದು ಕೈ ನೈರ್ಮಲ್ಯತೆ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ನಿಗದಿಪಡಿಸಿದ ಕೋವಿಡ್-19 ಪ್ರೋಟೋಕಾಲ್‍ಗಳ ಪ್ರಕಾರ ನಿರ್ವಹಿಸಲು ಸಾರ್ವಜನಿಕರನ್ನು ಕೋರಲಾಗಿದೆ.

Advertisement
Advertisement
Advertisement