Connect with us

Bengaluru City

ಇಂದು SSLC ಕೊನೆ ಪರೀಕ್ಷೆ- ಕನ್ನಡ, ಇಂಗ್ಲಿಷ್, ಹಿಂದಿ ಎಕ್ಸಾಂ

Published

on

Share this

– 4 ದಿನದಲ್ಲಿ ಕಾಲೇಜು ಶುರು, ಹಾಜರಾತಿ ಕಡ್ಡಾಯವಲ್ಲ

ಬೆಂಗಳೂರು: ಇಂದು ಎಸ್‍ಎಸ್‍ಎಲ್‍ಸಿ ಕೊನೆಯ ಪರೀಕ್ಷೆ. ಇಂದು ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್, ಹಿಂದಿ ಪರೀಕ್ಷೆಗಳು ನಡೆಯಲಿದೆ.

ಕಳೆದ ಸೋಮವಾರ ಕೋರ್ ಸಬ್ಜೆಕ್ಟ್ ವಿಷಯಗಳ ಪರೀಕ್ಷೆ ಯಾವುದೇ ಸಮಸ್ಯೆ ಇಲ್ಲದೆ ನಡೆದಿತ್ತು. ಬೆಳಗ್ಗೆ 10.30ರಿಂದ 1.30 ವರೆಗೆ ಪರೀಕ್ಷೆಗಳು ನಡೆಯಲಿದೆ. ರಾಜ್ಯದ 4885 ಪರೀಕ್ಷಾ ಕೇಂದ್ರಗಳ ಸುಮಾರು 73 ಸಾವಿರ ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದ್ದು, ಇಂದೂ ಕೂಡಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ.

ಪರೀಕ್ಷೆ ಆರಂಭಕ್ಕೂ ಮುನ್ನ-ನಂತರ ಕೊಠಡಿ ಸ್ಯಾನಿಟೈಸ್ ಮಾಡಲಾಗಿರುತ್ತದೆ. 1 ಕೊಠಡಿಯಲ್ಲಿ 12 ವಿದ್ಯಾರ್ಥಿಗಳು ಕೂರಲು ಮಾತ್ರ ವ್ಯವಸ್ಥೆ ಕಲ್ಪಿಸಲಾಗಿದ್ದು, ಒಂದು ಡೆಸ್ಕ್ ಗೆ ಒಬ್ಬರೇ ವಿದ್ಯಾರ್ಥಿ ಪರೀಕ್ಷೆ ಬರೆಯಲಿದ್ದಾರೆ. ಜ್ವರ ಸೇರಿ ಅನ್ಯರೋಗದ ಲಕ್ಷಣ ಇದ್ದರೇ ಪ್ರತ್ಯೇಕ ಕೊಠಡಿ ನೀಡಿದ್ರೆ, ಸೋಂಕಿತ ವಿದ್ಯಾರ್ಥಿಗೆ ಕೇರ್ ಸೆಂಟರ್ ನಲ್ಲೇ ಪರೀಕ್ಷೆ ಅವಕಾಶ ನೀಡಲಾಗಿದೆ. ಆಗಸ್ಟ್ 10ರ ಒಳಗೆ ಫಲಿತಾಂಶ ಪ್ರಕಟ ಆಗಲಿದೆ.

ಕಾಲೇಜು ಆಯ್ತು ಶೀಘ್ರದಲ್ಲಿ ಸ್ಕೂಲ್ ಓಪನ್ ಗೆ ಚಿಂತನೆ ನಡೆಸಲಾಗುತ್ತಿದೆ. ಪ್ರಾಥಮಿಕ ಶಾಲೆ ಓಪನ್‍ಗೆ ಐಸಿಎಂಆರ್ ಗ್ರೀನ್‍ಸಿಗ್ನಲ್ ನೀಡಿದೆ. ದೊಡ್ಡವರಿಗಿಂತ ಮಕ್ಕಳೇ ಕೊರೋನಾ ವಿರುದ್ಧ ಸೇಫ್ ಆಗುತ್ತಿದ್ದು, ಹಾಗಾಗಿ ಪ್ರಾಥಮಿಕ ಶಾಲೆ ಮೊದಲು ತೆರೆಯುವಂತೆ ಐಸಿಎಂಆರ್ ಸಿಗ್ನಲ್ ನೀಡಿದೆ. ಆದರೆ ಕರ್ನಾಟಕದಲ್ಲೂ ಪ್ರಾಥಮಿಕ ಶಾಲೆ ಓಪನ್ ಆಗುತ್ತಾ ಎಂಬುದು ಪ್ರಶ್ನೆಯಾಗಿದೆ.

ಇತ್ತ ಪ್ರಾಥಮಿಕ ಶಾಲೆ ಮೊದಲು ತೆರೆಯುವಂತೆ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಸಲಹೆ ನೀಡಿದೆ. ಐಸಿಎಂಆರ್ ನಡೆಸಿದ ಸರ್ವೆಯಲ್ಲಿ ಮಕ್ಕಳಲ್ಲೇ ಅತ್ಯಧಿಕ ರೋಗ ನಿರೋಧಕ ಶಕ್ತಿ ಪತ್ತೆಯಾಗಿದೆ. ಮೊದಲ ಬಾರಿಗೆ 6 ವರ್ಷ ಮೇಲ್ಪಟ್ಟ ಮಕ್ಕಳಲ್ಲಿ ಸಿರೋ ಸರ್ವೆ ಮಾಡಿದ್ದ ಐಸಿಎಂಆರ್, ಈಗಾಗಲೇ ಹೆಚ್ಚು ಮಕ್ಕಳು ಕೊರೋನಾಗೆ ತುತ್ತಾಗಿದ್ದಾರೆ, ಆದರೂ ಸೇಫ್ ಎಂದಿದೆ. ದೊಡ್ಡವರಷ್ಟೇ ಮಕ್ಕಳಲ್ಲಿಯೂ ರೋಗನಿರೋಧಕ ಶಕ್ತಿ ಪತ್ತೆಯಾಗಿದೆ. ದೊಡ್ಡವರಿಗಿಂತ ಚೆನ್ನಾಗಿ ಮಕ್ಕಳ ದೇಹ ಕೊರೋನಾ ವಿರುದ್ಧ ಸೆಣಸಬಲ್ಲದು. ಯುರೋಪ್ ಸೇರಿದಂತೆ ಅನೇಕ ಭಾಗದಲ್ಲಿ ಸ್ಕೂಲ್ ಮುಚ್ಚಿಲ್ಲ. ಕೊರೋನಾ ಬಂದ್ರೂ ಸ್ಕೂಲ್ ಓಪನ್ ಆಗಿಯೇ ಇತ್ತು. ಹಾಗಾಗಿ ಯಾವುದೇ ಆತಂಕವಿಲ್ಲದೇ ಶಾಲೆ ಆರಂಭಿಸಬಹುದು ಎಂದು ಐಸಿಎಂಆರ್ ಹೇಳಿದೆ.

Click to comment

Leave a Reply

Your email address will not be published. Required fields are marked *

Advertisement