Connect with us

Bengaluru City

ನನಗೆ ಸಂಬಳ ಕೊಡುವ ಒಡೆಯನಂತಿರ್ಲಿಲ್ಲ, ಗೆಳೆಯನ ರೀತಿ ಇದ್ರು: ಸೆಕ್ಯೂರಿಟಿ ಕಣ್ಣೀರು

Published

on

Share this

ಬೆಂಗಳೂರು: ರವಿ ಬೆಳಗೆರೆಯವರು ನನಗೆ ಸಂಬಳ ಕೊಡುವ ಒಡೆಯನ ರೀತಿ ಇರಲಿಲ್ಲ. ಅವರು ನನ್ನನ್ನು ಗೆಳೆಯನಂತೆ ನೋಡಿಕೊಂಡರು ಎಂದು ಮನೆಯ ಸೆಕ್ಯೂರಿಟಿ ಕಣ್ಣೀರು ಹಾಕಿದ್ದಾರೆ.

‘ಅಕ್ಷರ ಮಾಂತ್ರಿಕ’ನ ನಿಧನ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರವಿ ಅವರು ನನ್ನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ನೋಡಿಕೊಳ್ತಾ ಇದ್ದರು. ಮನೆಯಲ್ಲಿ ಒಟ್ಟು ಮೂರು ನಾಯಿಗಳು ಇವೆ. ಇನ್ನು ಕಚೇರಿಯಲ್ಲಿ ಒಟ್ಟು 10 ನಾಯಿಗಳನ್ನು ಸಾಕಿಕೊಂಡಿದ್ದರು ಎಂದು ತಿಳಿಸಿದರು. ಇದೇ ವೇಳೆ ಸೆಕ್ಯೂರಿಟಿ ಪತ್ನಿ ಭಾವುಕರಾಗಿ, ಹಾರ್ಟ್ ಅಪರೇಷನ್, ಮಗಳ ಮದುವೆ ಹೀಗೆ ಎಲ್ಲದಕ್ಕೂ ಅವರು ಸಹಾಯ ಮಾಡಿದ್ದರು. ನಮ್ಮ ಪಾಲಿನ ದೇವರು ಅಂತ ಹೇಳಿ ಗಳಗಳನೇ ಅತ್ತುಬಿಟ್ಟರು. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

ರವಿ ಬೆಳಗೆಯವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ದಿಢೀರ್ ನಿಧನಕ್ಕೆ ಗಣ್ಯರು, ಅಭಿಮಾನಿಗಳು ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಪತಿಯ ಶರೀರದ ಮುಂಭಾಗ ಎರಡನೆ ಪತ್ನಿ ಯಶೋಮತಿ ಕಣ್ಣೀರು ಹಾಕಿದ್ದಾರೆ. ಇತ್ತ ಅಪ್ಪನ ಪ್ರಾರ್ಥಿವ ಶರೀರದೆದುರು ಮಗಳು ಭಾವನಾ ಬೆಳಗೆರೆ ಕಣ್ಣೀರು ಹಾಕಿದ್ದಾರೆ. ಅಪ್ಪನ ಪ್ರಾರ್ಥೀವ ಶರೀರವನ್ನು ತಬ್ಬಿಕೊಂಡು ಅಪ್ಪಾ.. ಎಂದು ರೋಧಿಸಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮಿಸ್ ಮಾಡಿಕೊಳ್ತೇವೆ- ಅಕ್ಷರ ಮಾಂತ್ರಿಕ ನಿಧನಕ್ಕೆ ಸುದೀಪ್ ಸಂತಾಪ

ಅಂತಿಯ ವಿದಾಯಯದ ಸಮಯಲ್ಲೂ ಬೆಳಗೆರೆಗೆ ಇಷ್ಟವಾಗಿದ್ದ ಹಿಂದಿ ಗಝಲ್ಸ್ ಅನ್ನು ಮನೆಯವರು ಹಾಕಿದ್ದಾರೆ. ಒಟ್ಟಿನಲ್ಲಿ ರವಿ ನಿಧನದ ಹಿನ್ನೆಲೆಯಲ್ಲಿ ಬೆಳಗೆರೆ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತದೇಹವನ್ನು ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಅಮ್ಮ ಅಂತ ಕರೀತಿದ್ರಿ, ನಿಮ್ಮ ಹೆಸರು ಅಮರವಾಗಲಿ: ಲೀಲಾವತಿ ಕಣ್ಣೀರು

Click to comment

Leave a Reply

Your email address will not be published. Required fields are marked *

Advertisement